ಎಡಗೈಯಲ್ಲಿ ಸಂಜು, ಬಲಗೈಯಲ್ಲಿ ದುಬೆ ಗಿರಗಿರ! ವಿಶ್ವದಾಖಲೆ ಬರೆದ ಲಂಕಾ ಸ್ಪಿನ್ನರ್‌

Published : Oct 02, 2026, 08:41 AM IST

ಏಷ್ಯನ್‌ ಗೇಮ್ಸ್‌ನ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕವನ್ನು ಮಣಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಲಂಕಾ ಆಟಗಾರ ತಿರಿಂಡು ರತ್ನಾಯಕೆ ವಿಶೇಷ ಸಾಧನೆ ಮಾಡಿ ಗಮನ ಸೆಳೆದರು.

PREV
15
ಎರಡೂ ಕೈಗಳಿಂದ ಬೌಲಿಂಗ್‌ ಮಾಡ್ತಾರೆ

ಏಷ್ಯನ್‌ ಗೇಮ್ಸ್‌ನ ಎರಡನೇ ಸೆಮಿಫೈನಲ್‌ ಪಂದ್ಯವು ನಿಸ್ಸಿನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಿತು. ಪಂದ್ಯದಲ್ಲಿ ಲಂಕಾ ಆಟಗಾರ ರತ್ನಾಯಕೆ ಎಂದಿನಂತೆ ತಮ್ಮ ಎರಡೂ ಕೈಗಳಿಂದ ಬೌಲಿಂಗ್‌ ಮಾಡಿ ಗಮನಸೆಳೆದರು.

25
ಸಂಜು ಕ್ಲೀನ್‌ ಬೋಲ್ಡ್

ಆರಂಂಭದಲ್ಲಿ ರತ್ನಾಯಕೆ ಬಲಗೈ ಆಫ್‌-ಸ್ಪಿನ್‌ ಬೌಲಿಂಗ್‌ ಮಾಡಿದರು. ಆದರೆ ಸಂಜು ಅವರನ್ನು ಎದುರಿಸಲು ಅವರು ಎಡಗೈ ಸಾಂಪ್ರದಾಯಿಕ ಬೌಲಿಂಗ್‌ ಬದಲಾಯಿಸಿದರು. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ರತ್ನಾಯಕೆ ಮುಂದಿನ ಎಸೆತಗಳಲ್ಲಿ ಒತ್ತಡ ಹೇರಿದರು. ನಂತರದ ಎಸೆತದಲ್ಲಿ ಸಂಜು ಅವರನ್ನು ಕ್ಲೀನ್‌ ಬೋಲ್ಡ್‌ ಮಾಡಿದರು.

35
4 ಓವರ್‌ನಲ್ಲಿ4 ವಿಕೆಟ್

19ನೇ ಓವವರ್‌ನಲ್ಲಿ ಬಲಗೈ ಆಫ್‌ ಸ್ಪಿನ್‌ನಲ್ಲಿ ಶಿವಂ ದುಬೆ ಅವರನ್ನು ಮೂರು ರನ್‌ಗಳಿಗೆ ಔಟ್‌ ಮಾಡಿದರು. ರತ್ನಾಯಕ 4 ಓವರ್‌ಗಳಲ್ಲಿ 32 ರನ್‌ಗಳಿಗೆ 2 ವಿಕೆಟ್‌ ಪಡೆದರು. ರತ್ನಾಯಕೆ ಟಿ20 ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡೂ ತೋಳುಗಳಿಂದ ವಿಕೆಟ್‌ ಪಡೆದ ಮೊದಲ ಬೌಲರ್‌ ಎನಿಸಿಕೊಂಡರು.‌

45
ನಿಯಮ ಏನು ಹೇಳುತ್ತೆ?

ಐಸಿಸಿ ನಿಯಮಗಳ ಪ್ರಕಾರ ಬೌಲರ್‌ಗಳು ಇದನ್ನು ಮಾಡಬಹುದು. ಆದರೆ ಅವರು ಯಾವ ಕೈಯಿಂದ ಬೌಲಿಂಗ್‌ ಮಾಡ್ತಾರೆ ಎಂಬುದನ್ನು ಅಂಪೈರ್‌ಗೆ ತಿಳಿಸಬೇಕು. ಅಂಪೈರ್‌ ಬ್ಯಾಟ್ಸ್‌ಮನ್‌ಗೆ ತಿಳಿಸುತ್ತಾರೆ. ಬ್ಯಾಟರ್‌ಗಳ ವೀಕ್ನೆಸ್‌ ಗಮನದಲ್ಲಿ ಇಟ್ಟುಕೊಂಡು ತಾವು ಆ ರೀತಿಯ ಬೌಲಿಂಗ್‌ ಮಾಡ್ತೀನಿ ಎಂದು ರತ್ನಾಯಕೆ ತಿಳಿಸಿದ್ದಾರೆ.

55
ನಾಳೆ ಫೈನಲ್‌

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗೆ 7 ವಿಕೆಟ್‌ ಪಡೆದು 169 ರನ್‌ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 9.5 ಓವರ್‌ಗಳಲ್ಲಿ ಕೇವಲ 45 ರನ್‌ಗಳಿಗೆ ಆಲೌಟ್‌ ಆಯಿತು. ಟೀಂ ಇಂಡಿಯಾ ಈ ಪಂದ್ಯವನ್ನು 124 ರನ್‌ಗಳಿಗೆ ಗೆದ್ದುಕೊಂಡಿತು. ಏಷ್ಯನ್‌ ಗೇಮ್ಸ್‌ನ 2026 ಫೈನಲ್‌ ಪಂದ್ಯವು ಅಕ್ಟೋಬರ್‌ 3 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories