2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ನಾಕೌಟ್ ಪಂದ್ಯಗಳಿಗೆ ಮಳೆ ಅಡ್ಡಿಯಾಗುತ್ತಿದ್ದು, ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ರದ್ದಾದರೆ ಭಾರತ ಫೈನಲ್ ತಲುಪಲಿದೆ.
ಏಷ್ಯನ್ ಗೇಮ್ಸ್: ಪಂದ್ಯ ಆಡದೆಯೇ ಭಾರತಕ್ಕೆ ಒಲಿಯಲಿದೆಯಾ ಚಿನ್ನ?
ಏಷ್ಯನ್ ಗೇಮ್ಸ್ 2026ರಲ್ಲಿ ಪುರುಷರ ಕ್ರಿಕೆಟ್‌ನಲ್ಲಿ ಮಳೆ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯ ಕೂಡ ಮಳೆಯಿಂದ ರದ್ದಾದರೆ, ಐಸಿಸಿ ರ್ಯಾಕಿಂಗ್ ಅನ್ವಯ ಭಾರತ ಫೈನಲ್ ಪ್ರವೇಶಿಸಲಿದೆ. ಫೈನಲ್ ಕೂಡ ಮಳೆಯಿಂದ ರದ್ದಾದರೆ ಹೊಸ ನಿಯಮಳ ಅನ್ವಯ ಎರಡು ತಂಡಗಳಿಗೆ ಚಿನ್ನದ ಪದಕ ಸಿಗಲಿದೆ.
25
ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರಾಳಿ
ಏಷ್ಯನ್ ಗೇಮ್ಸ್ 2026ರ ಪುರುಷ ಕ್ರಿಕೆಟ್ ನಾಕೌಟ್‌ನಲ್ಲಿ ಮಳೆ ದೊಡ್ಡ ಸಮಸ್ಯೆ ಮಾಡಿದೆ. ಕ್ವಾಟರ್ ಫೈನಲ್ ಮ್ಯಾಚ್‌ಗಳು ಮಳೆಯ ಕಾರಣ ರದ್ದಾಗುವ ಸ್ಥಿತಿಯಲ್ಲಿದ್ದು, ಐಸಿಸಿ ರ್ಯಾಂಕಿಂಗ್ ಅನ್ವಯ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಟೀಂ ಇಂಡಿಯಾಗೆ ಕೂಡ ಇದೇ ನಿಯಮಗಳ ಅನ್ವಯ, ಸೆಮಿಫೈನಲ್ ಪ್ರವೇಶಿಸಿದೆ. ಈಗ ಸೆಮಿಫೈನಲ್, ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ನಿರೀಕ್ಷೆ ಇದೆ. ಭಾರತ ಸೆಮಿಫೈನಲ್ ಪಂದ್ಯದವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಅಕ್ಟೋಬರ್ 01ರಂದು ನಡೆಯಲರುವ ಈ ಪಂದ್ಯ ರದ್ದಾದರೆ, ಉತ್ತಮ ರ್ಯಾಂಕಿಂಗ್ ಅನ್ವಯ ಟೀಂ ಇಂಡಿಯಾ ಫೈನಲ್ ಸೇರಲಿದೆ. ಭಾರತ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂಬರ್ 01 ಪಟ್ಟದಲ್ಲಿದೆ. ಇದರಿಂದ ಪಂದ್ಯದ ಫಲಿತಾಂಶಕ್ಕಿಂತ ರ್ಯಾಂಕಿಂಗ್ ನಿಯಮಗಳೇ ಪ್ರಮುಖವಾಗುತ್ತಿದೆ.
35
ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾದರೆ ಏನಾಗುತ್ತೆ?
ಏಷ್ಯನ್ ಗೇಮ್ಸ್ ನಿಯಮಗಳ ಅನ್ವಯ, ನಾಕೌಟ್ ಪಂದ್ಯ ಮಳೆಯಿಂದ ರದ್ದಾದರೆ ಉತ್ತಮ ಐಸಿಸಿ ರ್ಯಾಂಕಿಂಗ್ ಹೊಂದಿರುವ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಳ್ಳುತ್ತದೆ. ಪುರುಷರ ಟೀಂ ಇಂಡಿಯಾ ತಂಡ ಸದ್ಯ ನಂಬರ್ ಒನ್ ಸ್ಥಾನದಲ್ಲಿದೆ. ಆದ್ದರಿಂದ ಯಾವುದೇ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಫಲಿಯಾಂಶ ಬಂದಿಲ್ಲ ಅಂದರೆ ಅದು ಭಾರತಕ್ಕೆ ಅನುಕೂಲ ಆಗಲಿದೆ.
ಈಗಾಗಲೇ ಕ್ವಾಟರ್ ಫೈನಲ್‌ನಲ್ಲಿ ಇದೇ ನಿಯಮಗಳಿಂದ ಭಾರತಕ್ಕೆ ಲಾಭ ಆಗಿತ್ತು. ಪಂದ್ಯ ನಡೆಯದಿದ್ದರೂ ರ್ಯಾಂಕಿಂಗ್ ಆಧಾರವಾಗಿ ಭಾರತ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯ ಕೂಡ ರದ್ದಾದರೆ ಇದೇ ನಿಯಮಗಳ ಅನ್ವಯ ಭಾರತ ನೇರವಾಗಿ ಫೈನಲ್ ಸೇರಲಿದೆ. ಆದರೆ ಫೈನಲ್ ಪಂದ್ಯಕ್ಕೆ ನಿಯಮಗಳು ಬದಲಾವಣೆ ಆಗಲಿದೆ. ಅಕ್ಟೋಬರ್ 03 ರಂದು ಫೈನಲ್ ಪಂದ್ಯ ರದ್ದಾದರೆ, ಎರಡು ತಂಡಗಳಿಗೆ ಚಿನ್ನದ ಪದಕ ಸಿಗಲಿದೆ. ಈ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲೂ ಫೈನಲ್ ಪಂದ್ಯ ರದ್ದಾದ ಸಂದರ್ಭದಲ್ಲಿ ರ್ಯಾಂಕಿಂಗ್ ಅನ್ವಯ ಚಿನ್ನದ ಪದಕ ನೀಡಿದಕ್ಕೆ ಟೀಕೆಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ.
55
ಚಿನ್ನದ ಪದಕ ಕನ್ಫರ್ಮ್!
ಇದರೊಂದಿಗೆ ಎರಡು ಪಂದ್ಯಗಳಲ್ಲಿ ಮಳೆ ಆಟಕ್ಕೆ ಅಡ್ಡಿಪಡಿಸಿದರೂ ಯಾವುದೇ ಪಂದ್ಯ ಆಡದೆ ಟೀಂ ಇಂಡಿಯಾಗೆ ಚಿನ್ನದ ಪದಕ ಸಿಗಲಿದೆ. ಇನ್ನು ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯ ಟೀಂ ಇಂಡಿಯಾ ಬಹಳ ಪ್ರಮುಖವಾಗಿದೆ. ಆ ಬಳಿಕ ಫೈನಲ್ ಪಂದ್ಯದಲ್ಲಿ ಮಳೆ ಫಲಿತಾಂಶವನ್ನು ನಿರ್ಧರಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.