ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಿಂದ ಇಂಗ್ಲೆಂಡ್ ಸರಣಿ ಟಿಕೆಟ್‌ಗೆ ಭಾರಿ ಬೇಡಿಕೆ

Published : Jun 08, 2026, 08:45 PM IST

ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಟಿ20 ತಂಡದ ಆಯ್ಕೆಯಿಂದ ಇಂಗ್ಲೆಂಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಭಾರತ ಹಾಗೂ ಇಂಗ್ಲೆಂಡ್ ಸರಣಿ ಟಿಕೆಟ್ ಬೇಡಿಕೆ ಹೆಚ್ಚಾಗ ತೊಡಗಿದೆ. ಈ ಕುರಿತು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

PREV
16
ಇಂಗ್ಲೆಂಡ್‌ನಲ್ಲಿ ವೈಭವ್ ಸೂರ್ಯವಂಶಿ ಸಂಚಲನ

ವೈಭವ್ ಸೂರ್ಯವಂಶಿ ಭಾರತ ತಂಡದ ಆಯ್ಕೆಗೆ ದೇಶದಲ್ಲೆಡೆ ಸಂಭ್ರಮ ಮನೆ ಮಾಡಿದೆ. 15ರ ಹುಡುಗ ಸೀನಿಯರ್ ತಂಡಕ್ಕೆ ಆಯ್ಕೆ ಹಲವರನ್ನು ಅಚ್ಚರಿಗೊಳಿಸಿದೆ. ಭಾರತ ತಂಡದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ವೈಭವ್ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ವೈಭವ್ ಹವಾ ಜೋರಾಗಿದೆ. ಇದೀಗ ಇಂಗ್ಲೆಂಡ್‌ನಲ್ಲಿ ವೈಭವ್ ಸೂರ್ಯವಂಶಿ ಸಂಚಲನ ಸೃಷ್ಟಿಸಿದ್ದಾರೆ.

26
ಇಂಗ್ಲೆಂಡ್ ಮಾಧ್ಯಮಗಳಲ್ಲಿ ವೈಭವ್

ವೈಭವ್ ಸೂರ್ಯವಂಶಿ ಟಿ20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿನ ಮಾಧ್ಯಮಗಳು ವೈಭವ್ ಸೂರ್ಯವಂಶಿ ಕುರಿತು ಸುದ್ದಿ ಪ್ರಕಟಿಸುತ್ತಿದೆ. 15ರ ಬಾಲಕ ಇಂಗ್ಲೆಂಡ್‌ ನೆಲದಲ್ಲಿ ಅಬ್ಬರಿಸಲು ಆಗಮಿಸುತ್ತಿದ್ದಾನೆ ಎಂದು ಸುದ್ದಿ ಪ್ರಕಟಿಸುತ್ತಿದೆ. ವೈಭವ್ ಈಗಾಗಲೇ ಇಂಗ್ಲೆಂಡ್‌ನಲ್ಲಿ ಭಾರಿ ಡಿಮ್ಯಾಂಡ್ ಸೃಷ್ಟಿಸಿದ್ದಾರೆ ಎಂದು ಮೈಕ್ ಆರ್ಥಟನ್ ಹೇಳಿದ್ದಾರೆ.

36
ಭಾರತ ಇಂಗ್ಲೆಂಡ್ ಟಿಕೆಟ್ ಬೇಡಿಕೆ

ವೈಭವ್ ಸೂರ್ಯವಂಶಿ ಕುರಿತು ಇಂಗ್ಲೆಂಡ್ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಗಳು, ವಿಡಿಯೋಗಳು ಸಂಚಲನ ಮೂಡಿಸುತ್ತಿದೆ. ಇದರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್‌ಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೈಕ್ ಆರ್ಥಟನ್ ಹೇಳಿದ್ದಾರೆ.

46
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಆದಾಯ

ವೈಭವ್ ಸೂರ್ಯವಂಶಿ ಆಗಮನದಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೆಚ್ಚು ಖುಷಿಯಾಗಿದೆ.ಹೆಚ್ಚಿನ ಟಿಕೆಟ್ ಮಾರಾಟವಾಗಲಿದೆ. ಟಿಕೆಟ್ ಬೇಡಿಕೆ ಹೆಚ್ಚಾಗಲಿದೆ. ಕ್ರೀಡಾಂಗಣ ಫುಲ್ ಪ್ಯಾಕ್ ಆಗಲಿದೆ. ಇದರಿಂದ ಆಟಗಾರರಿಗೂ ಹೆಚ್ಚು ಹುಮ್ಮಸ್ಸು ಇರಲಿದೆ. ಜೊತೆಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೆಚ್ಚಿನ ಆದಾಯಗಳಿಸಲಿದೆ ಎಂದು ಮೈಕ್ ಆರ್ಥಟನ್ ಹೇಳಿದ್ದಾರೆ.

56
ಜೂನ್ 26ರಿಂದ ಸರಣಿ ಆರಂಭ

ಭಾರತ ತಂಡದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಜೂನ್ 26 ರಿಂದ ಆರಂಭಗೊಳ್ಳಲಿದೆ. ಜೂನ್ 26 ಹಾಗೂ ಜೂನ್ 28 ರಂದು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೋರಾಟ ನಡೆಸಲಿದೆ. ಬಳಿಕ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಇಂಗ್ಲೆಂಡ್ ವಿರುದ್ದ 5 ಟಿ20 ಪಂದ್ಯದ ಸರಣಿ ಆಡಲಿದೆ.

66
ಭಾರತ ತಂಡಕ್ಕೆ ಆಯ್ಕೆಯಾದ ಕಿರಿಯ ಕ್ರಿಕೆಟಿಗ

ವೈಭವ್ ಸೂರ್ಯವಂಶಿ ಕೇವಲ 15ನೇ ವಯಸ್ಸಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸೀನಿಯರ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿಗೆ ತಂಡಕ್ಕೆ ಆಯ್ಕೆಯಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories