ಆರ್‌ಸಿಬಿ ತಂಡ ಸೇರಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ. ತಂಡಕ್ಕೆ 2 ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಜತ್ ಪಾಟಿದಾರ್ ಯಾವ ತಂಡ ಸೇರಿಕೊಳ್ಳಲು ಬಯಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ, ಡೆನಿಯಲ್ ವೆಟೋರಿ, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮುುನ್ನಡೆಸಿದ್ದಾರೆ. ಆದರೆ ಯಾರಿಗೂ ಟ್ರೋಫಿ ಅದೃಷ್ಠ ಒಲಿದಿರಲಿಲ್ಲ. ಟ್ರೋಫಿ ಗೆಲ್ಲಲು ರಜತ್ ಪಾಟಿದಾರ್ ಬರಬೇಕಾಯಿತು. ಆರ್‌ಸಿಬಿ ಯಶಸ್ವಿ ನಾಯಕ ರಜತ್ ಪಾಟಿದಾರ್‌ಗೆ ಆರ್‌ಸಿಬಿ ತಂಡ ಸೇರಿಕೊಳ್ಳುವುದು ಇಷ್ಟವಿರಲಿಲ್ಲ ಎಂದು ಖುದ್ದು ಪಾಟಿದಾರ್ ಹೇಳಿದ್ದಾರೆ.
26
ಹೌದು ನನಗೆ ಇಷ್ಟವಿರಲಿಲ್ಲ
ಸಂದರ್ಶನದಲ್ಲಿ ಮಾತನಾಡಿದ ರಜತ್ ಪಾಟಿದಾರ್, ನನಗೆ ಆರ್‌ಸಿಬಿ ತಂಡ ಸೇರಿಕೊಳ್ಳುವುದು ಇಷ್ಟವರಿಲ್ಲ ನಿಜ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಬಹಿರಂಗ ಮಾಡಿದ್ದಾರೆ. ಪ್ರಮುಖವಾಗಿ ನಾನು ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದೆ. ಬಳಿಕ ಆರ್‌ಸಿಬಿ ರಿಪ್ಲೇಸ್‌ಮೆಂಟ್ ಆಗಿ ನನಗೆ ಕರೆ ಮಾಡಿದ್ದರು. ನನಗೆ ಆರ್‌ಸಿಬಿ ಸೇರಿಕೊಳ್ಳುವುದು ಇಷ್ಟವೇ ಇರಲಿಲ್ಲ. ಕಾರಣ ನಾನು ರಿಪ್ಲೇಸ್‌ಮೆಂಟ್ ಆಗಿರೋ ಕಾರಣ ನನಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ನಾನು ಆರ್‌ಸಿಬಿ ತಂಡ ಸೇರಿಕೊಳ್ಳುವುದು ಬೇಡ ಎಂದಿದ್ದರು.
36
ನನಗೆ ಸ್ಪಷ್ಟವಾಗಿ ಹೇಳಿದ್ದರು
2022ರಲ್ಲಿ ಆರ್‌ಸಿಬಿಗೆ ರಿಪ್ಲೇಸ್ ಆಗಿ ಬಂದಾಗ ಸ್ಪಷ್ಟವಾಗಿ ನನಗೆ ಅವಕಾಶ ಕುರಿತು ಹೇಳಿದ್ದರು. ಯಾರಾದರು ಇಂಜುರಿಯಾದರೆ ಅವಕಾಶ ಸಿಗಲಿದೆ. ಹೀಗಾಗಿ ಚಿಲ್ ಆಗಿರು ಎಂದಿದ್ದರು. ತಂಡ ಸೇರಿಕೊಂಡು ಬೆಂಚ್ ಕಾಯುವ ಬದಲು ಬೇರೆ ತಂಡ ಸೇರಿಕೊಂಡರೆ ಕನಿಷ್ಟ ಅವಕಾಶ ಸಿಗಬಹುದು ಎಂದುಕೊಂಡಿದ್ದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
2021ರಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. 20 ಲಕ್ಷ ರೂ ಮೂಲ ಬೆಲೆಯಲ್ಲಿ ರಜತ್ ಪಾಟಿದಾರ್ ತಂಡ ಸೇರಿಕೊಂಡಿದ್ದರು. 2022ರಲ್ಲಿ ಅನ್‌ಸೋಲ್ಡ್ ಆಗಿ ಮನೆಯಲ್ಲಿದ್ದರು. ಇದರ ನಡುವೆ ಆರ್‌ಸಿಬಿಯಲ್ಲಿ ಆಟಗಾರ ಇಂಜುರಿಗೊಂಡ ಕಾರಣ ರಜತ್ ಪಾಟಿದಾರ್‌ಗೆ ಕರೆ ಮಾಡಿದ್ದರು. ಹೀಗೆ ರಜತ್ ಪಾಟಿದಾರ್ ಆರ್‌ಸಿಬಿ ಪಯಣ ಆರಂಭಗೊಂಡಿತ್ತು.
56
2 ಟ್ರೋಫಿ ಗೆಲ್ಲಿಸಿದ ನಾಯಕ
ಆರ್‌ಸಿಬಿ ತಂಡದ ಟ್ರೋಫಿ ಬರ ನೀಗಿಸಿದ ನಾಯಕ ರಜತ್ ಪಾಟಿದಾರ್, ನಾಯಕನಾಗಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಆಟಗಾರರ ತಂಡವನ್ನು ಮುನ್ನಡೆಸಿ ಸತತ 2ನೇ ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಐಪಿಎಲ್‌ನ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
66
ಟೀಂ ಇಂಡಿಯಾದಲ್ಲಿ ಸಿಗುತ್ತಾ ಅವಕಾಶ
ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದ ಬಳಿಕ ರಜತ್ ಪಾಟಿದಾರ್‌ಗೆ ನಾಯಕತ್ವ ನೀಡಲಾಗಿತ್ತು. ವಿಶೇಷ ಅಂದರೆ ಮೊದಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಸದ್ಯ ಮಧ್ಯಪ್ರದೇಶ ಟಿ20 ಲೀಗ್ ಟೂರ್ನಿ ಆಡುತ್ತಿರುವ ರಜತ್ ಪಾಟಿದಾರ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.