ಐರ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ ಡೆಬ್ಯೂ ಡೌಟ್? ಸಮಯಕ್ಕಾಗಿ ಕಾಯಬೇಕು ಎಂದ ಕೋಚ್

Published : Jun 26, 2026, 08:17 AM IST

ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಐರ್ಲಂಡ್ ವಿರುದ್ಧ ಪಾದಾರ್ಪಣೆ ಮಾಡುತ್ತಾರಾ? ಈ ಕುರಿತು ಪ್ರಶ್ನೆಗೆ ಕೋಚ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಸಮಯಕ್ಕಾಗಿ ಕಾಯಬೇಕು ಅನ್ನೋ ಸಂದೇಶ ರವಾನಿಸಿದ್ದಾರೆ. 

PREV
15
ಭಾರತ ತಂಡದ ಕೋಚ್ ಸಂದೇಶ

ಐಪಿಎಲ್, ಭಾರತ ಎ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿಯನ್ನು ಇದೀಗ ಅಭಿಮಾನಿಗಳು ಟೀಂ ಇಂಡಿಯಾದಲ್ಲಿ ನೋಡಲು ಬಯಸಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ, ಐರ್ಲೆಂಡ್ ವಿರುದ್ದದ 2 ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಭಾರತ ತಂಡದ ಕೋಚ್ ಮಹತ್ವದ ಸಂದೇಶ ನೀಡಿದ್ದಾರೆ.

25
ಭಾರತ ತಂಡಕ್ಕೆ ಪಾದಾರ್ಪಣೆ ಮಾಡ್ತಾರಾ ವೈಭವ್

ಇಂದು ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಅಭಿಮಾನಿಗಳು ವೈಭವ್ ಸೂರ್ಯವಂಶಿ ಅಬ್ಬರ ನೋಡಲು ಬಯಸಿದ್ದಾರೆ. ಆದರೆ ವೈಭವ್ ಪ್ಲೇಯಿಂಗ್ 11ನಲ್ಲಿ ಸೇರ್ಪಡೆ ಕುರಿತು ಭಾರತ ತಂಡದ ಬ್ಯಾಟಿಂಗ್ ಕೋಚ್ ಕೆಲ ಮಾಹಿತಿ ನೀಡಿದ್ದಾರೆ. ವೈಭವ್ ಅದ್ಭುತ ಆಟಗಾರ. ಆತನನ್ನು ನಾವು ಅಂಡರ್ 19 ಟೂರ್ನಿಯಿಂದ ನೋಡುತ್ತಿದ್ದೇವೆ. ಆದರೆ ಹಿರಿಯ ತಂಡದಲ್ಲಿ ಅವಕಾಶಕ್ಕಾಗಿ ಕಾಯಬೇಕು ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ.

35
ಪ್ಲೇಯಿಂಗ್ 11ನಲ್ಲಿ ಇರ್ತಾರ ವೈಭವ್?

ವೈಭವ್ ಸೂರ್ಯವಂಶಿಗೆ ಅವಕಾಶಕ್ಕಾಗಿ ಕಾಯಬೇಕು ಅನ್ನೋ ಪರೋಕ್ಷ ಸಂದೇಶ ರವಾನಿಸಿರುವ ಕೋಚ್, ಪ್ಲೇಯಿಂಗ್ 11 ಕಾಂಬಿನೇಷನ್ ಇನ್ನು ಅಂತಿಮಗೊಂಡಿಲ್ಲ. ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ಐತಿಹಾಸಿಕ ಕ್ಷಣ ಕೇವಲ ಸಮಯದ ಮೇಲೆ ನಿಂತಿದೆ ಎಂದು ಸಿತಾಂಶು ಕೋಟಕ್ ಹೇಳಿದ್ದಾರೆ.

45
ಎಲ್ಲಾ ಆಟಗಾರರಿಗೆ ನಿಯಮ ಒಂದೆ

ಪಾದರ್ಪಣೆ ಕುರಿತು ಎಲ್ಲಾ ಆಟಗಾರರಿಗೆ ನಿಯಮ ಒಂದೆ. ವೈಭವ್ ಸೂರ್ಯವಂಶಿ ಇಂದಿನ ಪಂದ್ಯದಲ್ಲಿ ಆಡುತ್ತಾರಾ, ಅಥವಾ 2ನೇ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡುತ್ತಾರೋ ಅನ್ನೋದು ಕಾಲವೇ ಉತ್ತರ ನೀಡಲಿದೆ. ಹೀಗಾಗಿ ಈ ಕುರಿತು ತಂಡ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿತಾಂಶು ಕೋಟಕ್ ಹೇಳಿದ್ದಾರೆ.

55
ಅನುಭವ ಮುಖ್ಯ

ಐಪಿಎಲ್ ಟೂರ್ನಿ, ಭಾರತ ಎ ತಂಡದ ಪರ ಆಡಿದ ಆಟಗಾರರಿಗೆ ಟೀಂ ಇಂಡಿಯಾ ಟಿ20 ವಾತಾವರಣ ತೀರಾ ಹೊಸದಾಗಿ ಕಾಣಿಸಲ್ಲ. ಉತ್ತಮ ಅನುಭವ ಪಡೆದುಕೊಂಡು ಬಂದಿರುತ್ತಾರೆ. ಆದರೆ ಸಿನಿಯರ್ ತಂಡದಲ್ಲಿ ಪ್ರದರ್ಶನ, ಟೆಂಪರ್‌ಮೆಂಟ್, ತಾಳ್ಮೆ, ಒತ್ತಡ ನಿಭಾಯಿಸುವ ರೀತಿ ಎಲ್ಲವೂ ಮುಖ್ಯವಾಗುತ್ತದೆ. ವೈಭವ್ ಪ್ರತಿಭಟೆ, ಆತನ ಆಟದ ಬಗ್ಗೆ ನಮಗೆ ಅತೀವ ಸಂತೋಷವಿದೆ ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories