ಕೊಹ್ಲಿ ಸೇರಿ ದಿಗ್ಗಜರ ಯಾಕೆ ಆಮಂತ್ರಿಸಿಲ್ಲ? ಮದುವೆಯಲ್ಲೇ ಕ್ರಿಕೆಟಿಗ ಆಕಾಶ್ ದೀಪ್ ಉತ್ತರಕ್ಕೆ ಫ್ಯಾನ್ಸ್ ಫಿದಾ

Published : Jun 25, 2026, 12:45 PM IST

ಟೀಂ ಇಂಡಿಯಾ ಕ್ರಿಕೆಟಿಗ ಆಕಾಶ್ ದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆಗೆ ಆಗಮಿಸಿದ ಆಪ್ತರು, ಕುಟುಂಬಸ್ಥರು ನೇರವಾಗಿ ಆಕಾಶ್ ದೀಪ್ ಬಳಿ ಕೊಹ್ಲಿ, ಧೋನಿ ಸೇರಿ ದಿಗ್ಗಜರನ್ನು ಯಾಕೆ ಆಮಂತ್ರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಕಾಶ್ ನೀಡಿದ ಉತ್ತರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

PREV
16
ಟೀಂ ಇಂಡಿಯಾ ಕ್ರಿಕೆಟಿಗ ಅಕಾಶ್ ದೀಪ್ ಮದುವೆ

ಟೀಂ ಇಂಡಿಯಾ ಕ್ರಿಕೆಟಿಗ ಆಕಾಶ್ ದೀಪ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಾರಣಾಸಿಯ ತಾಜ್ ಗಂಗೆಯಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ವೇಗಿ ಆಕಾಶ್ ದೀಪ್ ಬಿಹಾರ ಮೂಲದ ಅಕ್ಷಿತಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಸಂಭ್ರಮವನ್ನು ಅಕಾಶ್ ದೀಪ್ ಹಂಚಿಕೊಂಡಿದ್ದಾರೆ.

26
ವಾರಣಾಸಿಯಲ್ಲಿ ಮದುವೆ ಸಂಭ್ರಮ, ಹಲವರಿಗೆ ಕೆಲ ಪ್ರಶ್ನೆ

ಆಕಾಶ್ ದೀಪ್ ಟೀಂ ಇಂಡಿಯಾ ಪರ 10 ಟೆಸ್ಟ್ ಪಂದ್ಯ ಆಡಿದ್ದಾರೆ. ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅಕಾಶ್ ದೀಪ್ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೀಗಾಗಿ ಮದುವೆಗೆ ಆಗಮಿಸಿದ ಕುಟುಂಬಸ್ಥರು, ಆಪ್ತರು ಸೇರಿದಂತೆ ಬಹುತೇಕರು, ಮದುವೆಗೆ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಯಾಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

36
ಕ್ರಿಕೆಟಿಗನ ಬೆಂಕಿ ಉತ್ತರಕ್ಕೆ ಫ್ಯಾನ್ಸ್ ಫಿದಾ

ಕುಟುಂಬಸ್ಥರು, ಆಪ್ತರು ಮದುವೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಆಗಮಿಸುತ್ತಾರೆ ಎಂದು ಭಾವಿಸಿದ್ದರು. ಯಾರೂ ಬರದೇ ಇದ್ದಾಗ ಯಾಕೆ ಟೀಂ ಇಂಡಿಯಾ ದಿಗ್ಗಜರನ್ನು ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಕಾಶ್ ದೀಪ್, ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಬಂದರೆ ಜನಸಮೂಹವನ್ನು ವಾರಣಿಸಿ ಮ್ಯಾನೇಜ್ ಮಾಡಲು ಸಾಧ್ಯವೇ ಎಂದು ಮರು ಪ್ರಶ್ನಿಸಿದ್ದಾರೆ.

46
ವಾರಣಸಿಯಲ್ಲಿ ಮದುವೆ ಶಾಂತವಾಗಿ ನಡೆಯುತ್ತಿದೆ ತಾನೆ?

ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಆಗಮಿಸಿದರೆ ಇಷ್ಟು ಶಾಂತವಾಗಿ ಮದುವೆ ನಡೆಯುತ್ತಿತ್ತಾ? ಇದೀಗ ಯಾವುದೇ ಅಡೆ ತಡೆ ಇಲ್ಲದೆ ಎಲ್ಲರು ಮುಕ್ತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ದಿಗ್ಗಜ ಕ್ರಿಕೆಟಿಗರನ್ನು ಆಮಂತ್ರಿಸಿದರೆ ವಾರಣಸಿಯಲ್ಲಿ ಮದುವೆ ಆಯೋಜನೆ ಮಾಡಲು ಸಾಧ್ಯವಾಗುತ್ತಾ ಎಂದು ಅಕಾಶ್ ದೀಪ್ ಪ್ರಶ್ನಿಸಿದ್ದಾರೆ.

56
ಅಕಾಶ್ ದೀಪ್ ಉತ್ತರಕ್ಕೆ ಅಭಿಮಾನಿಗಳ ಮೆಚ್ಚುಗೆ

ಟೀಂ ಇಂಡಿಯಾ ಕ್ರಿಕೆಟಿಗರನ್ನು ಆಮಂತ್ರಿಸಿದರೆ ಜನದಟ್ಟಣೆ ಹೆಚ್ಚಾಗಲಿದೆ.ಭದ್ರತೆ ಸಮಸ್ಯೆಗಳು ಎದುರಾಗಲಿದೆ. ಇದರಿಂದ ಕುಟುಂಬಸ್ಥರು, ಆಪ್ತರಿಗೆ ಮದುವೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಲಿದೆ ಎಂದು ಆಕಾಶ್ ದೀಪ್ ಹೇಳಿದ್ದಾರೆ. ಆಕಾಶ್ ದೀಪ್ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

66
ಇಂಜುರಿ ಕಾರಣದಿಂದ ಐಪಿಎಲ್‌ನಿಂದ ದೂರ

ಇಂಜುರಿ ಕಾರಣದಿಂದ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026 ಟೂರ್ನಿಯಿಂದ ಹೊರಗುಳಿದಿದ್ದ ಅಕಾಶ್ ದೀಪ್ ಮದುವೆಯಾಗಿದ್ದಾರೆ. ಬೆನ್ನು ನೋವಿನ ಕಾರಣದಿಂದ ಹಲವು ದಿನಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories