ವೈಭವ್ ಸೂರ್ಯವಂಶಿಗೆ ಜಾಕ್‌ಪಾಟ್, ಟೀಂ ಇಂಡಿಯಾ ಎ ತಂಡಕ್ಕೆ 15ರ ಪೋರನ ಆಯ್ಕೆ

Published : May 14, 2026, 06:34 PM IST

ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಮಣೆ ಹಾಕಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟಗೊಂಡಿದ್ದು, ವೈಭವ್‌ಗೆ ಸ್ಥಾನ ನೀಡಲಾಗಿದೆ. 

PREV
16
ವೈಭವ್ ಸೂರ್ಯವಂಶಿಗೆ ಭಾರತ ಎ ತಂಡಕ್ಕೆ ಆಯ್ಕೆ

ರಾಜಸ್ಥಾನ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ 15ರ ಹರೆಯದ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ 15ರ ಪೋರ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲಾಗಿದೆ.

26
ಚಿಕ್ಕ ವಯಸ್ಸಿಗೆ ಭಾರತ ಎ ತಂಡಕ್ಕೆ ಆಯ್ಕೆ

ಭಾರತ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಿನ ತ್ರಿಕೋನ ಸರಣಿ ಟೂರ್ನಿ ಜೂನ್ 9 ರಿಂದ ಆರಂಭಗೊಳ್ಳಲಿದೆ. ಜೂನ್ 21ಕ್ಕೆ ಅಂತ್ಯಗೊಳ್ಳಲಿದೆ. ಈ ಮಹತ್ವದ ಟೂರ್ನಿಗೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾನೆ. ಈ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ಹಿರಿಯರ ತಂಡಕ್ಕೆ ಆಯ್ಕೆಯಾದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

36
ಭಾರತ ಎ ತಂಡ

ತಿಲಕ್ ವರ್ಮಾ(ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್, ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ ದುಬೆ, ಸುಯಾಂಶ್ ಶೆಡ್ಗೆ, ಪ್ರಭಸಿಮ್ರನ್ ಸಿಂಗ್, ಕುಮಾರ್ ಕುಶಾಗ್ರ, ವಿಪ್ರಾಜ್ ನಿಗಮ್, ಯಶ್ ಠಾಕೂರ್, ಯುಧ್ವಿರ್ ಸಿಂಗ್, ಅಶುಂಲ್ ಕಂಬೋಜ್, ಅರ್ಶದ್ ಖಾನ್

46
ಐಪಿಎಲ್ ಟೂರ್ನಿಯಲ್ಲಿ ಅಬ್ಬರ

ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯಲ್ಲಿ 11 ಪಂದ್ಯದಿಂದ 440 ರನ್ ಸಿಡಿಸಿದ್ದಾರೆ. ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿ ತ್ರಿಕೋನ ಸರಣಿಗಾಗಿ ಶ್ರೀಲಂಕಗೆ ಪ್ರಯಾಣ ಬೆಳೆಸಲಿದ್ದಾರೆ.

56
12ನೇ ವಯಸ್ಸಿಗೆ ರಣಜಿ ಟೂರ್ನಿ

ವೈಭವ್ ಸೂರ್ಯವಂಶಿ ಕೇವಲ 12ನೇ ವಯಸ್ಸಿಗೆ ಬಿಹಾರ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ದಾಖಲೆ ಮುರಿದಿದ್ದರು. ಫಸ್ಟ್ ಕ್ಲಾಸ್ ಸೇರಿದಂತೆ ವೈಭವ್ ಸೂರ್ಯವಂಶಿ ಅತೀ ಕಿರಿಯವಯಸ್ಸಿನಲ್ಲೇ ದಾಖಲೆ ಬರೆದರು.

66
ಅಂಡರ್ 19 ವಿಶ್ವಕಪ್ ಹೀರೋ

ಭಾರತದ ಅಂಡರ್ 19 ತಂಡ ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆದ್ದುಕೊಂಡಿತ್ತು. ಈ ತಂಡದಲ್ಲಿದ್ದ ವೈಭವ್ ಸೂರ್ಯವೇಂಶಿ ಫೈನಲ್ ಪಂದ್ಯ ಸೇರಿದಂತೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಭಾರತ ಅಂಡರ್ 19 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.

ಅಂಡರ್ 19 ವಿಶ್ವಕಪ್ ಹೀರೋ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories