ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ದಾಖಲೆ ಬರೆದ ವೈಭವ್, ದಿಗ್ಗಜರ ರೆಕಾರ್ಡ್ ಪುಡಿಪುಡಿ

Published : May 13, 2026, 10:43 AM IST

ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆಯುತ್ತಿರುವ 15ರ ವೈಭವ್ ಸೂರ್ಯವಂಶಿ ಇದೀಗ ಐಪಿಎಲ್ ಇತಿಹಾಸದಲ್ಲೇ ಯಾರು ಮಾಡದ ದಾಖಲೆ ಬರೆದಿದ್ದಾರೆ. ಇದೇ ವೇಳೆ ದಿಗ್ಗಜರ ದಾಖಲೆಯಗಳು ಪುಡಿ ಪುಡಿಯಾಗಿದೆ.

PREV
15
15ರ ಪೋರನ ದಾಖಲೆಯ ಆಟ

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಘಟಾನುಘಟಿ ಬೌಲರ್‌ಗಳಿಗೆ ಬೌಂಡರಿ ಸಿಕ್ಸರ್ ಸಿಡಿಸಿ ದಾಖಲೆ ಬರೆಯುತ್ತಿದ್ದಾರೆ. ಅತೀ ವೇಗದ ಶತಕ, ಹಾಫ್ ಸೆಂಚುರಿ ಸೇರಿದಂತೆ ಈಗಾಗಲೇ ರೆಕಾರ್ಡ್ ಬರೆದಿರುವ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ದಿಗ್ಗಜ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಈ 15ರ ಪೋರ ಹೊಸ ದಾಖಲೆ ಬರೆದಿದ್ದಾರೆ.

25
ಟಿ20 ಇತಿಹಾಸದಲ್ಲಿ ಹೊಸ ದಾಖಲೆ

ಐಪಿಎಲ್ ಟೂರ್ನಿಯಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸುತ್ತಿರುವ ವೈಭವ್ ಸೂರ್ಯವಂಶಿ ಇದೀಗ 20 ವಯಸ್ಸು ದಾಟುವ ಮೊದಲೇ ಟಿ20ಯಲ್ಲಿ ಅತೀ ವೇಗದಲ್ಲಿ 100 ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. 20 ವರ್ಷದೊಳಗೆ ಅತೀ ಕಡಿಮೆ ಎಸೆತದಲ್ಲಿ 100 ಟಿ20 ಸಿಕ್ಸರ್ ದಾಖಲೆ ಇದೀಗ ವೈಭವ್ ಸೂರ್ಯವಂಶಿ ಹೆಸರಿನಲ್ಲಿ ದಾಖಲಾಗಿದೆ.

35
ದಿಗ್ಗಜರ ದಾಖಲೆ ಪುಡಿ ಮಾಡಿದ ವೈಭವ್

ವಿಶೇಷ ಅಂದರೆ ಟಿ20ಯಲ್ಲಿ ಅತೀ ಕಡಿಮೆ ಎಸೆತದಲ್ಲಿ ಅತೀ ವೇಗದಲ್ಲಿ 100 ಸಿಕ್ಸರ್ ಪೂರೈಸಿದ ಕ್ರಿಕೆಟಿ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ದಾಖಲೆ ಮುರಿದಿದ್ದಾರೆ. ವೈಭವ್ 514 ಎಸೆತದಲ್ಲ 100 ಸಿಕ್ಸರ್ ದಾಖಲೆ ಬರೆದಿದ್ದರೆ, ಇದಕ್ಕೂ ಮೊದಲು ಕೀರನ್ ಪೋಲಾರ್ಡ್ 843 ಎಸೆತದಲ್ಲಿ ಈ ಸಾಧನೆ ಮಾಡಿದ್ದರು. ಸುದೀರ್ಘ ವರ್ಷಗಳ ಕಾಲ ಇದ್ದ ಪೊಲಾರ್ಡ್ ದಾಖಲೆಯನ್ನು ವೈಭವ್ ಮುರಿದಿದ್ದಾರೆ.

45
ಸಿರಾಜ್ ಮೊದಲ ಎಸೆತದಲ್ಲೇ ಸಿಕ್ಸರ್

ಗುಜರಾತ್ ಟೈಟಾನ್ಸ್ ವಿರುದ್ದ ಕೇವಲ 16 ಎಸೆತದಲ್ಲಿ 36 ರನ್ ಸಿಡಿಸಿ ಈ ದಾಖಲೆ ಬರೆದಿದ್ದರು. ವೈಭವ್ ಈ ಪಂದ್ಯದಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿದ್ದರು. ಮೊಹಮ್ಮದ್ ಸಿರಾಜ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಇದೀಗ ವೈಭವ್ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

55
ಐಪಿಎಲ್ ಇನ್ನಿಂಗ್ಸ್‌ನಲ್ಲಿ ದಾಖಲೆ ಸಿಕ್ಸರ್

ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ 12 ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಗರಿಷ್ಠ ಸಿಕ್ಸರ್ ದಾಖಲೆ ಬರೆದಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ವೈಭವ್ ಈ ದಾಖಲೆ ಬರೆದಿದ್ದರು. ಇದೇ ಪಂದ್ಯದಲ್ಲಿ ವೈಬವ್ 37 ಎಸೆತದಲ್ಲಿ 103 ರನ್ ಸಿಡಿಸಿದ್ದರು.

ಐಪಿಎಲ್ ಇನ್ನಿಂಗ್ಸ್‌ನಲ್ಲಿ ದಾಖಲೆ ಸಿಕ್ಸರ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories