U19 ವಿಶ್ವಕಪ್ ವೇಳಾಪಟ್ಟಿ: 2026ರ ಅಂಡರ್ 19 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಜನವರಿ 15 ರಂದು ಭಾರತ ಮತ್ತು ಯುಎಸ್ಎ ನಡುವಿನ ಪಂದ್ಯದೊಂದಿಗೆ ಟೂರ್ನಿ ಶುರುವಾಗಲಿದೆ.
ಐಸಿಸಿ 2026ರ ಅಂಡರ್ 19 ಪುರುಷರ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಟೂರ್ನಿಗೆ ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಜನವರಿ 15ಕ್ಕೆ ಟೂರ್ನಿ ಆರಂಭವಾಗಿ ಫೆಬ್ರವರಿ 6ಕ್ಕೆ ಮುಗಿಯಲಿದೆ.
25
ಯುಎಸ್ಎ ಜೊತೆ ಭಾರತದ ಮೊದಲ ಪಂದ್ಯ
ಭಾರತದ ಯುವ ತಂಡ ಈ ಬಾರಿ 'ಎ' ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಬಾಂಗ್ಲಾದೇಶ, ಯುಎಸ್ಎ, ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಭಾರತದ ವೇಳಾಪಟ್ಟಿ: ಜ.15-ಯುಎಸ್ಎ, ಜ.17-ಬಾಂಗ್ಲಾದೇಶ, ಜ.24-ನ್ಯೂಜಿಲೆಂಡ್. ಎಲ್ಲಾ ಪಂದ್ಯಗಳು ಬುಲವಾಯೊದಲ್ಲಿ ನಡೆಯಲಿವೆ.
35
ಹೊಸ ತಂಡಗಳ ಎಂಟ್ರಿ; ಟಾಂಜಾನಿಯಾಗೆ ಐತಿಹಾಸಿಕ ಅವಕಾಶ
ಈ ವಿಶ್ವಕಪ್‌ನ ವಿಶೇಷವೆಂದರೆ ಟಾಂಜಾನಿಯಾ ತಂಡದ ಚೊಚ್ಚಲ ಬಾರಿಗೆ ಅಂಡರ್-19 ವಿಶ್ವಕಪ್ ಆಡುವ ಅರ್ಹತೆ ಪಡೆದಿದೆ. ಜಪಾನ್ ಕೂಡ 2020ರ ನಂತರ ಮತ್ತೆ ಭಾಗವಹಿಸುತ್ತಿದೆ. ಭಾರತ 'ಎ' ಗುಂಪಿನಲ್ಲಿದ್ದರೆ, ಪಾಕಿಸ್ತಾನ 'ಬಿ' ಗುಂಪಿನಲ್ಲಿದೆ.
ಸೂಪರ್ ಸಿಕ್ಸ್, ಸೆಮೀಸ್ ಫಾರ್ಮ್ಯಾಟ್; ಭಾರತ-ಪಾಕ್ ಪಂದ್ಯ ಸೂಪರ್ ಹಂತದಲ್ಲೇ
ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಬೇರೆ-ಬೇರೆ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತಿಲ್ಲ. ಆದರೆ ಸೂಪರ್ ಸಿಕ್ಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪ್ರತಿ ಗುಂಪಿನಿಂದ ಟಾಪ್-3 ತಂಡಗಳು ಸೂಪರ್ ಸಿಕ್ಸ್‌ಗೆ, ಅಲ್ಲಿಂದ ಟಾಪ್-2 ತಂಡಗಳು ಸೆಮಿಸ್‌ಗೆ ಪ್ರವೇಶ ಪಡೆಯಲಿವೆ.
55
ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದೇನು?
U-19 ವಿಶ್ವಕಪ್ ಭವಿಷ್ಯದ ಸೂಪರ್‌ಸ್ಟಾರ್‌ಗಳಿಗೆ ಅಡಿಪಾಯ. ಕೊಹ್ಲಿ, ಸ್ಮಿತ್‌ರಂತಹ ಆಟಗಾರರು ಇಲ್ಲಿಂದಲೇ ಬೆಳೆದವರು. ಈ ಬಾರಿ ಹೊಸ ಪ್ರತಿಭೆಗಳು ಹೊರಹೊಮ್ಮಲಿವೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.