ಸರ್ಕಾರದ ಆನ್‌ಲೈನ್ ಮನಿ ಗೇಮಿಂಗ್ ನಿಷೇಧದಿಂದಾಗಿ ಡ್ರೀಮ್ 11 ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ಬಿಸಿಸಿಐ ನೂತನ ಪ್ರಾಯೋಜಕರ ಹುಡುಕಾಟದಲ್ಲಿ ತೊಡಗಿದೆ.
25
ಜಪಾನ್‌ನ ಪ್ರಮುಖ ಅಟೋಮೊಬೈಲ್ ಸಂಸ್ಥೆಯಾಗಿರುವ ಟೊಯೋಟಾ ಹಾಗೂ ಭಾರತದ ಫಿನ್‌ಟೆಕ್ ಸ್ಟಾರ್ಟ್‌ಅಪ್ ಸೇರಿ ಹಲವು ಸಂಸ್ಥೆಗಳು ಪ್ರಾಯೋಜಕತ್ವ ರೇಸ್‌ನಲ್ಲಿವೆ.
35
2023ರಲ್ಲಿ ಬಿಸಿಸಿಐ ಜತೆಗೆ 358 ಕೋಟಿ ರು. ಒಪ್ಪಂದ ಮಾಡಿಕೊಂಡಿದ್ದ ಡ್ರೀಮ್ 11 ಕೇಂದ್ರದ ಕಾನೂನಿಂದಾಗಿ ಏಷ್ಯಾಕಪ್‌ಗೆ ಕೆಲವೇ ದಿನ ಬಾಕಿ ಉಳಿದಿರುವ ಹೊತ್ತಲ್ಲಿ ಹಿಂದೆ ಸರಿದಿದೆ.
ಹೀಗಾಗಿ ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕುವ ಅನಿವಾರ್ಯಯತೆಯಲ್ಲಿದೆ. ಈ ನಡುವೆ ಫಿನ್‌ಟೆಕ್, ಟೊಯೋಟಾ ಸೇರಿದಂತೆ ಇನ್ನು ಕೆಲ ಸಂಸ್ಥೆಗಳು ಒಲವು ತೋರಿವೆ ಎನ್ನಲಾಗಿದೆ.
55
ಆದರೆ ಬಿಸಿಸಿಐ ಇನ್ನೂ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. ಡ್ರೀಮ್ 11 ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಅಧಿಕ ಹಣ ನೀಡುವ ಸಂಸ್ಥೆಗೆ ಪ್ರಾಯೋಜಕತ್ವ ನೀಡುವುದರ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.