Asia Cup 2025 ಗೆಲ್ಲಿಸಿಕೊಟ್ಟ ಎಲೆಕ್ಟ್ರಿಷಿಯನ್ ಮಗ! ತಿಲಕ್ ವರ್ಮಾ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ಸಂಗತಿ

Published : Oct 01, 2025, 12:52 PM IST

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಪ್ರಮುಖ ಪಾತ್ರವಹಿಸಿದ್ದರು. ಅವರ ಕ್ರಿಕೆಟ್ ಪಯಣ ಮತ್ತು ಕುಟುಂಬದ ಹಿನ್ನೆಲೆಯ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ.

PREV
15
ಟೀಂ ಇಂಡಿಯಾ ಗೆಲ್ಲಿಸಿದ ತಿಲಕ್ ವರ್ಮಾ!

ಏಷ್ಯಾಕಪ್ ಫೈನಲ್‌ನಲ್ಲಿ ಭಾರತ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ತಿಲಕ್, ಪಾಕ್ ಬೌಲಿಂಗ್‌ ದಾಳಿಯನ್ನು ಎದುರಿಸಿ ಅಜೇಯ 69 ರನ್ ಗಳಿಸಿ ಭಾರತವನ್ನು ಚಾಂಪಿಯನ್ ಮಾಡಿದರು. ಅವರ ಆಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

25
ತಿಲಕ್ ವರ್ಮಾ ಎಲೆಕ್ಟ್ರಿಷಿಯನ್

ಹೈದರಾಬಾದ್‌ನ ತಿಲಕ್ ವರ್ಮಾ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ತಂದೆ ನಾಗರಾಜು ಎಲೆಕ್ಟ್ರಿಷಿಯನ್. ಆರ್ಥಿಕ ಸಂಕಷ್ಟದ ನಡುವೆಯೂ ತಂದೆಯ ಬೆಂಬಲದಿಂದ ಕೋಚ್ ಸಲಾಂ ಬಯಾಶ್ ಬಳಿ ತರಬೇತಿ ಪಡೆದು ಕ್ರಿಕೆಟ್‌ನಲ್ಲಿ ಬೆಳೆದರು.

35
2019ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ

2019ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ತಿಲಕ್, 2022ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡಿ ಗಮನ ಸೆಳೆದರು. ಎಡಗೈ ಬ್ಯಾಟಿಂಗ್ ಮತ್ತು ಬಲಗೈ ಬೌಲಿಂಗ್‌ನಿಂದಾಗಿ ಸುರೇಶ್ ರೈನಾಗೆ ಹೋಲಿಸಲಾಗುತ್ತದೆ.

45
2023ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದಲ್ಲಿ ಸ್ಥಾನ ಪಡೆದರು. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯೊಂದಿಗೆ ಪಾದಾರ್ಪಣೆ ಮಾಡಿ, ಮೊದಲ ಪಂದ್ಯದಲ್ಲೇ 39 ರನ್ ಗಳಿಸಿ ಗಮನ ಸೆಳೆದರು.

55
ಗೇಮ್‌ ಚೇಂಜ್‌ ಮಾಡಿದ ತಿಲಕ್ ಇನ್ನಿಂಗ್ಸ್‌

ಏಷ್ಯಾಕಪ್ ಫೈನಲ್‌ನಲ್ಲಿನ 69 ರನ್‌ಗಳ ಇನ್ನಿಂಗ್ಸ್ ತಿಲಕ್ ವರ್ಮಾ ವೃತ್ತಿಜೀವನಕ್ಕೆ ತಿರುವು ನೀಡಿದೆ. ದೇಶಕ್ಕಾಗಿ ಆಡಿ ಹೀರೋ ಆದ ಅವರ ಪಯಣ ಸ್ಪೂರ್ತಿದಾಯಕವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories