ಢಾಕಾ: ಬಾಂಗ್ಲಾದೇಶ ಪರ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದ ಅನುಭವಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಕ್ರಿಕೆಟ್ ವೃತ್ತಿ ಬದುಕು ದುರಂತ ಅಂತ್ಯ ಕಂಡಿದೆ. ಶಕೀಬ್ ಮಾಡಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್, ಅವರು ಇನ್ನು ಯಾವತ್ತೂ ಬಾಂಗ್ಲಾದೇಶ ಜೆರ್ಸಿ ತೊಡದಂತೆ ಮಾಡಿದೆ.
ಬಾಂಗ್ಲಾದೇಶದ ದಿಗ್ಗಜ ಆಲ್ರೌಂಡರ್, ಮಾಜಿ ನಾಯಕ ಶಕೀಬ್ ಅಲ್ ಹಸನ್ ಕ್ರಿಕೆಟ್ ವೃತ್ತಿಬದುಕು ಅಂತ್ಯವಾಗಿದೆ. ಅವರು ಇನ್ನು ಮುಂದೆ ಬಾಂಗ್ಲಾದೇಶ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕನಸು ನುಚ್ಚುನೂರಾಗಿದೆ.
29
ಶಕೀಬ್‌ಗೆ ಬಿಗ್ ಶಾಕ್ ಕೊಟ್ಟ ಆಸಿಫ್!
ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ಮೊಹಮ್ಮದ್ ಈ ಕುರಿತಂತೆ ಅಧಿಕೃತವಾಗಿ ಸ್ಪಷ್ಟಪಡಿಸಿದ್ದು, ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್, ಇನ್ನು ಮುಂದೆ ಯಾವತ್ತೂ ಬಾಂಗ್ಲಾದೇಶ ಪರ ಆಡುವುದಿಲ್ಲ ಎಂದು ಘೋಷಿಸಿದ್ದಾರೆ.
39
ಅವಾಮಿ ಲೀಗ್ ಪಕ್ಷದ ಸಂಸದ ಶಕೀಬ್
ಶಕೀಬ್ ಅಲ್ ಹಸನ್ ಕಳೆದ ವರ್ಷದ ಜನವರಿಯಿಂದ ಆಗಸ್ಟ್‌ವರೆಗೆ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಲ್ಲಿ ಶಕೀಬ್ ಪದಚ್ಯುತಗೊಂಡಿದ್ದರು.
ಕಳೆದ 12 ತಿಂಗಳಿನಿಂದ ಶಕೀಬ್‌ಗಿಲ್ಲ ಬಾಂಗ್ಲಾ ತಂಡದಲ್ಲಿ ಸ್ಥಾನ
ಇದಾದ ನಂತರ ಕಳೆದ 12 ತಿಂಗಳಿನಿಂದ ಶಕೀಬ್ ಅಲ್ ಹಸನ್, ಬಾಂಗ್ಲಾದೇಶ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ.
59
ಏಷ್ಯಾಕಪ್‌ಗೂ ಸಿಗಲಿಲ್ಲ ಶಕೀಬ್‌ಗೆ ಸ್ಥಾನ
ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಟೂರ್ನಿಗೂ ಶಕೀಬ್ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಫ್ರಾಂಚೈಸಿ ಲೀಗ್ ಟಿ20 ಟೂರ್ನಿಯಲ್ಲಿ ಶಕೀಬ್ ಆಡುತ್ತಿದ್ದಾರೆ.
69
ಶೇಖ್ ಹಸೀನಾಗೆ ಶುಭಕೋರಿದ್ದೆ ತಪ್ಪಾಯ್ತಾ?
ಭಾನುವಾರ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಹುಟ್ಟುಹಬ್ಬದ ಸಂದೇಶವನ್ನು ಶಕೀಬ್ ಅಲ್ ಹಸನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ಮೊಹಮ್ಮದ್ ಈ ಘೋಷಣೆ ಮಾಡಿದ್ದಾರೆ.
79
ಶಕೀಬ್ ಹಾಗೂ ಆಸಿಫ್ ನಡುವೆ ಮುಸುಕಿನ ಗುದ್ದಾಟ
ಶಕೀಬ್ ಹಾಗೂ ಆಸಿಫ್ ನಡುವೆ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಒಬ್ಬ ವ್ಯಕ್ತಿಗೆ ಪುನರ್ವಸತಿ ಕಲ್ಪಿಸದಿದ್ದಕ್ಕಾಗಿ ನೀವೆಲ್ಲರೂ ನನ್ನನ್ನು ತುಂಬಾ ನಿಂದಿಸಿದ್ದೀರಿ. ಆದರೆ ನಾನು ಹೇಳಿದ್ದು ಸರಿ. ಚರ್ಚೆ ಅಂತ್ಯ." ಎಂದು ಆಸಿಫ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
89
ತಿರುಗೇಟು ಕೊಟ್ಟ ಶಕೀಬ್
ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಶಕೀಬ್, 'ಯಾರೋ ಒಬ್ಬರು ಕೊನೆಗೂ ಒಪ್ಪಿಕೊಂಡಿದ್ದಾರೆ, ಅವರ ಕಾರಣದಿಂದಾಗಿ ನಾನು ಮತ್ತೆ ಎಂದಿಗೂ ಬಾಂಗ್ಲಾದೇಶದ ಜೆರ್ಸಿಯನ್ನು ಧರಿಸಲು ಸಾಧ್ಯವಿಲ್ಲ, ಅವರ ಕಾರಣದಿಂದಾಗಿ ನಾನು ಮತ್ತೆ ಬಾಂಗ್ಲಾದೇಶಕ್ಕಾಗಿ ಆಡಲು ಸಾಧ್ಯವಿಲ್ಲ. ಬಹುಶಃ ನಾನು ಒಂದು ದಿನ ನನ್ನ ತಾಯ್ನಾಡಿಗೆ ಹಿಂತಿರುಗುತ್ತೇನೆ. ಲವ್ ಯು ಬಾಂಗ್ಲಾದೇಶ' ಎಂದು ಕಮೆಂಟ್ ಮಾಡಿದ್ದಾರೆ.
99
ಶಕೀಬ್‌ಗೆ ಆಸಿಫ್ ಶಾಕ್
ಶಕೀಬ್ ಅವರನ್ನು ಮತ್ತೆ ಆಯ್ಕೆ ಮಾಡದಂತೆ ಬಿಸಿಬಿಗೆ ನಿರ್ದೇಶನ ನೀಡುವುದಾಗಿ ಆಸಿಫ್ ದೃಢಪಡಿಸಿದ್ದಾರೆ ಎಂದು ಢಾಕಾ ಸುದ್ದಿವಾಹಿನಿ ವರದಿ ಮಾಡಿದೆ.