ಇಂಗ್ಲೆಂಡ್‌ನ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್, ಕ್ಯಾನ್ಸರ್‌ನಿಂದ ಮೃತಪಟ್ಟ ತಮ್ಮ ಪತ್ನಿ ರೂತ್ ಸ್ಟ್ರಾಸ್ ಅವರ ನೆನಪಿಗಾಗಿ ರೂತ್ ಸ್ಟ್ರಾಸ್ ಫೌಂಡೇಶನ್ ಸ್ಥಾಪಿಸಿದ್ರು. ಈ ಫೌಂಡೇಷನ್‌ಗೆ ದೇಣಿಗೆ ಸಂಗ್ರಹಿಸಲು ಆಟಗಾರರ ಜೆರ್ಸಿ ಹರಾಜಿಗಿಡಲಾಗಿತ್ತು. ಈ ಜೆರ್ಸಿಯ ಮೇಲೆ ಎಲ್ಲಾ ಆಟಗಾರರ ಸಹಿ ಇದರಲ್ಲಿತ್ತು. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ಜೆರ್ಸಿಗಳು ₹4.94 ಲಕ್ಷಕ್ಕೆ ಮಾರಾಟವಾದವು. ಗಿಲ್ ಜೆರ್ಸಿ ₹5.41 ಲಕ್ಷಕ್ಕೆ ಹರಾಜಾಯಿತು.
ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಗಿಲ್
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶುಭ್‌ಮನ್ ಗಿಲ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಒಟ್ಟು 754 ರನ್ ಗಳಿಸಿದ್ರು. ಆದ್ರೆ ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಅನ್ನೋ ದಾಖಲೆ ಮುರಿಯೋಕೆ ಗಿಲ್‌ಗೆ ಆಗಿಲ್ಲ. ಆದ್ರೆ ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ಅನ್ನೋ ಹೆಗ್ಗಳಿಕೆ ಗಿಲ್‌ಗೆ ಸಿಕ್ಕಿದೆ.