ಆಟದಲ್ಲಿ ಮಾತ್ರವಲ್ಲ ಇನ್ವೆಸ್ಟ್‌ಮೆಂಟ್‌ನಲ್ಲೂ ಕಿಂಗ್‌ ನಮ್ಮ ಕೊಹ್ಲಿ!

First Published | Dec 1, 2023, 4:38 PM IST

ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ರನ್‌ ಬಾರಿಸೋದರಲ್ಲಿ ಮಾತ್ರವಲ್ಲ, ಬ್ಯುಸಿನೆಸ್‌ಗಳಲ್ಲಿ ಹಣ ಹೂಡಿಕೆ ಮಾಡೋದ್ರಲ್ಲೂ ಕಿಂಗ್‌. ಸಾಕಷ್ಟು ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರುವ ವಿರಾಟ್‌ ಕೊಹ್ಲಿ ಅವರ ಪ್ರಮುಖ ಏಳು ಇನ್ವೆಸ್ಟ್‌ಮೆಂಟ್‌ಗಳು ಇಲ್ಲಿವೆ.

ಆನ್‌ಲೈನ್‌ ಗೇಮಿಂಗ್‌ ಫ್ಲಾಟ್‌ಫಾರ್ಮ್‌ ಆಗಿರುವ ಮೊಬೈಲ್‌ ಪ್ರೀಮಿಯರ್‌ ಲೀಗ್‌ನೊಂದಿಗೆ ವಿರಾಟ್‌ ಕೊಹ್ಲಿ 10 ವರ್ಷಗಳ ಒಪ್ಪಂದ ಹೊಂದಿದ್ದಾರೆ. ಗೆಲಾಕ್ಟಸ್‌ ಫನ್‌ವೇರ್‌ ಟೆಕ್ನಾಲಜಿ ಲಿಮಿಟೆಡ್‌ ಕಂಪನಿ ಎಂಪಿಎಲ್‌ಅನ್ನು ಹೊಂದಿದ್ದು, ವಿರಾಟ್‌ ಕೊಹ್ಲಿ ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ಡಿಜಿಟಲ್‌ ಇನ್ಸ್‌ಶ್ಯೂರೆನ್ಸ್‌ ಕಂಪನಿಯ ಮೇಲೆ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ, 2020ರಲ್ಲಿ 2.2 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈ ಸ್ಟಾರ್ಟ್‌ಅಪ್‌ ಕಂಪನಿಯನ್ನು ಕೆನಡಾದ ಬಿಲಿಯನೇರ್‌ ಪೇಮ್‌ ವತ್ಸಾ ಸ್ಥಾಪನೆ ಮಾಡಿದ್ದಾರೆ.

Tap to resize

ಎರ್ಲಿಂಗ್‌ ಹಾಲಾಂಡ್‌, ಜೋ ಮೊರಾಂಟ್‌, ನವೋಮಿ ಒಸಾಕ ಮತ್ತು ರಿಕ್ಕಿ ಫ್ಲವರ್‌ ಬಳಿಕ ವೆಲ್‌ನೆಸ್‌ ಬ್ರ್ಯಾಂಡ್‌ ಹೈಪರ್‌ಐಸ್‌ನಲ್ಲಿ ವಿರಾಟ್‌ ಕೊಹ್ಲಿ ಹೂಡಿಕೆ ಮಾಡಿದ್ದಾರೆ. 2021ರಲ್ಲಿ ಈ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ವಿರಾಟ್‌ ಕೊಹ್ಲಿ ಘೋಷಣೆಯಾಗಿದ್ದರು.

ಯುನಿವರ್ಸಲ್‌ ಸ್ಪೋರ್ಟ್ಸ್‌ಬಿಜ್‌ ಪ್ರೈವೇಟ್‌ ಲಿಮಿಟೆಡ್‌, ಸಚಿನ್‌ ತೆಂಡುಲ್ಕರ್‌ ಬೆಂಬಲ ಹೊಂದಿರುವ ಕಂಪನಿಯಾಗಿದೆ. 2020ರಲ್ಲಿ ವಿರಾಟ್‌ ಕೊಹ್ಲಿ ಫ್ಯಾಶನ್‌ ಸ್ಟಾರ್ಟ್‌ ಅಪ್‌ ಆಗಿರುವ ಈ ಕಂಪನಿಯ ಮೇಲೆ 19.3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಭಾರತದ ಸಸ್ಯ ಮೂಲದ ಮೀಟ್‌ ಸ್ಟಾರ್ಟ್‌ಅಪ್‌ ಕಂಪನಿ ಬ್ಲ್ಯೂ ಟ್ರೈಬ್‌ ಮೇಲೆ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ, ಘೋಷಣೆಯಾಗದ ಮೊತ್ತವನ್ನು ಈಗಾಗಲೇ ಹೂಡಿಕೆ ಮಾಡಿದ್ದಾರೆ.

2015ರಲ್ಲಿ ವಿರಾಟ್‌ ಕೊಹ್ಲಿ ಚೆಸಿಲ್‌ ಫಿಟ್‌ನೆಸ್‌ & ಕಾರ್ನರ್‌ಸ್ಟೋನ್‌ ಸ್ಫೋರ್ಟ್ಸ್‌ ಎಂಟರ್‌ಟೇನ್‌ಮೆಂಟ್‌ ಕಂಪನಿಯಲ್ಲಿ 50 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ದೇಶಾದ್ಯಂತ ಚೆಸಿಲ್‌ ಫಿಟ್‌ನೆಸ್‌ ತನ್ನ ಜಿಮ್‌ ಸರ್ಕಲ್‌ಅನ್ನು ಬಿಲ್ಡ್‌ ಮಾಡುತ್ತಿದೆ.

2022ರಲ್ಲಿ ವಿರಾಟ್‌ ಕೊಹ್ಲಿ ರೇಜ್‌ ಕಾಫಿ ಕಂಪನಿ ಮೇಲೆ ಹೂಡಿಕೆ ಮಾಡಿದ್ದಾರೆ. ದೆಹಲಿ ಮೂಲದ ಎಫ್‌ಎಂಸಿಜಿ ಬ್ರ್ಯಾಂಡ್‌ ಇದಾಗಿದೆ. 2018ರಲ್ಲಿ ಸ್ಥಾಪನೆಯಾದ ಈ ಕಂಪನಿ, ಇಂದು ದೇಶಾದ್ಯಂತ 2500ಕ್ಕೂ ಅಧಿಕ ಸ್ಟೋರ್‌ಗಳನ್ನು ಹೊಂದಿದೆ.

Latest Videos

click me!