ಗೆಳತಿ ದಿವ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಮುಕೇಶ್, ಡಿ.4ಕ್ಕೆ ಆರತಕ್ಷತೆ!

First Published | Nov 30, 2023, 3:28 PM IST

ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ ವೇಗಿ ಮುಕೇಶ್ ಕುಮಾರ್ ಸರಣಿ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ದಿವ್ಯ ಸಿಂಗ್ ಹಾಗೂ ಮುಕೇಶ್ ಕುಮಾರ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಡಿಸೆಂಬರ್ 4 ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿ ಗಮನಸೆಳೆದಿರುವ ಮುಕೇಶ್ ಕುಮಾರ್ ಸರಣಿ ನಡುವೆ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ದಿವ್ಯ ಸಿಂಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
 

ಉತ್ತರ ಪ್ರದೇಶದ ಗೋರಖಪುರದ ಖಾಸಗಿ ಹೊಟೆಲ್‌ನಲ್ಲಿ ಮುಕೇಶ್ ಕುಮಾರ್ ಹಾಗೂ ದಿವ್ಯ ಸಿಂಗ್ ಅದ್ಧೂರಿ ವಿವಾಹ ಮಹೋತ್ಸ ನೆರವೇರಿದೆ. ಮುಕೇಶ್ ಹಾಗೂ ದಿವ್ಯ ಸಿಂಗ್ ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

Latest Videos


ಮದುವೆ ಕಾರಣ ವೇಗಿ ಮುಕೇಶ್ ಕುಮಾರ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯಕ್ಕೆ ಗೈರಾಗಿದ್ದರು. ಇನ್ನುಳಿದ ಟಿ20 ಪಂದ್ಯಕ್ಕೆ ಮುಕೇಶ್ ಕುಮಾರ್ ಲಭ್ಯರಾಗಿದ್ದಾರೆ. 

ಮುಕೇಶ್ ಹುಟ್ಟಿ ಬೆಳೆದಿದ್ದು ಬಿಹಾರವಾದರೂ, ಕ್ರಿಕೆಟ್‌ನಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಇತ್ತ ಮುಕೇಶ್ ಗೆಳತಿ ದಿವ್ಯ ಬೋಜಪುರಿ ಮೂಲದವರಾಗಿದ್ದಾರೆ.
 

ಮುಕೇಶ್ ಕುಮಾರ್ ಹಾಗೂ ದಿವ್ಯ ಸಿಂಗ್ ಗೆಳೆತನ ಆತ್ಮೀಯವಾಗಿ, ಪ್ರೀತಿಯಾಗಿ ಬಳಿಕ ಮದುವೆ ಅರ್ಥ ಪಡೆದಿತ್ತು. ಇದೀಗ ಮುಕೇಶ್ ಹಾಗೂ ದಿವ್ಯ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
 

ಡಿಸೆಂಬರ್ 4 ರಂದು ಮುಕೇಶ್ ಕುಮಾರ್ ಸ್ವಗ್ರಾಮ್ ಕಾಂಕರ್ ಕುಂಡ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ.
 

ಟಿ20 ಸರಣಿ ಮದುವೆಯಾದ ಕಾರಣ ಟೀಂ ಇಂಡಿಯಾ ಕ್ರಿಕೆಟಿಗರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗರಿಲ್ಲ. ಡಿಸೆಂಬರ್ 3ಕ್ಕೆ ಭಾರತ ಆಸ್ಟ್ರೇಲಿಯಾ ಟಿ20 ಸರಣಿ ಅಂತ್ಯಗೊಳ್ಳಲಿದೆ.

ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮುಕೇಶ್ ಕುಮಾರ್, ಇದೀಗ ಟೀಂ ಇಂಡಿಯಾ ಟಿ20 ತಂಡದ ಭಾಗವಾಗಿದ್ದಾರೆ. 
 

click me!