ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

First Published | Nov 27, 2023, 5:40 PM IST

ಬೆಂಗಳೂರು(ನ.27): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಾಗಲೇ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. ಡಿಸೆಂಬರ್ 19ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಕೆಲವು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇನ್ನು ಬೇಡವಾದ ಆಟಗಾರರನನು ರಿಲೀಸ್ ಮಾಡಿದೆ. ಇದರ ಜತೆಗೆ ಕೆಲವು ಆಟಗಾರರನ್ನು ಟ್ರೇಡ್‌ ಕೂಡಾ ಮಾಡಿದೆ. ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಹರಾಜಿಗೆ ಎಷ್ಟು ಹಣ ಉಳಿದುಕೊಂಡಿದೆ ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
 

1. ಗುಜರಾತ್ ಟೈಟಾನ್ಸ್: 38.15 ಕೋಟಿ ರುಪಾಯಿ

ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಲೀಸ್ ಮಾಡಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಟ್ರೇಡ್ ಮಾಡಿದೆ. ಹೀಗಾಗಿ ಟೈಟಾನ್ಸ್ ಹರಾಜಿಗೆ 38.15 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. 

2. ಸನ್‌ರೈಸರ್ಸ್ ಹೈದರಾಬಾದ್: 34 ಕೋಟಿ ರುಪಾಯಿ

2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹ್ಯಾರಿ ಬ್ರೂಕ್ ಅವರಂತಹ ಆಟಗಾರರನ್ನು ರಿಲೀಸ್ ಮಾಡಿದ್ದು, ಮುಂಬರುವ ಹರಾಜಿಗೆ 34 ಕೋಟಿ ರುಪಾಯಿಗಳನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿದೆ.

Tap to resize

3. ಕೋಲ್ಕತಾ ನೈಟ್ ರೈಡರ್ಸ್‌: 32 ಕೋಟಿ ರುಪಾಯಿ

ಕೋಲ್ಕತಾ ನೈಟ್ ರೈಡರ್ಸ್‌ ಫ್ರಾಂಚೈಸಿಯು ಜೇಸನ್ ರಾಯ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಆಟಗಾರರ ಹರಾಜಿಗೆ 32 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

4. ಚೆನ್ನೈ ಸೂಪರ್ ಕಿಂಗ್ಸ್: 31.4 ಕೋಟಿ ರುಪಾಯಿ

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬೆನ್ ಸ್ಟೋಕ್ಸ್, ಡ್ವೇನ್ ಪ್ರಿಟೋರಿಯಸ್ ಅವರಂತಹ ಆಟಗಾರರನ್ನು ರಿಲೀಸ್ ಮಾಡಿದ್ದು, ಹರಾಜಿಗೆ ಬರೋಬ್ಬರಿ 31.4 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.

5. ಪಂಜಾಬ್ ಕಿಂಗ್ಸ್‌: 29.1 ಕೋಟಿ ರುಪಾಯಿ

ಪ್ರೀತಿ ಝಿಂಟಾ ಸಹಾ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಶಾರುಕ್ ಖಾನ್, ಭನುಕಾ ರಾಜಪಕ್ಸಾ ಅವರಂತಹ ಆಟಗಾರರನ್ನು ರಿಲೀಸ್ ಮಾಡಿದ್ದು, ಹರಾಜಿಗೆ 29.1 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. 

6. ರಾಯಲ್ ಚಾಲೆಂಜರ್ಸ್ ಬೆಂಗಳೂರು: 23.25 ಕೋಟಿ ರುಪಾಯಿ

ಆರ್‌ಸಿಬಿ ಫ್ರಾಂಚೈಸಿಯು ಜೋಶ್ ಹೇಜಲ್‌ವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್ ಅವರನ್ನು ರಿಲೀಸ್ ಮಾಡಿದೆ. ಇದರ ಜತೆಗೆ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ತಂಡದಿಂದ ಟ್ರೇಡ್ ಮಾಡಿದೆ. ಇದೀಗ ಹರಾಜಿಗೆ ಆರ್‌ಸಿಬಿ ಫ್ರಾಂಚೈಸಿ 23.25 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

7. ಡೆಲ್ಲಿ ಕ್ಯಾಪಿಟಲ್ಸ್‌: 28.95 ಕೋಟಿ ರುಪಾಯಿ

ಡೆಲ್ಲಿ ಫ್ರಾಂಚೈಸಿಯು ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಹಲವು ಆಟಗಾರರನ್ನು ರಿಲೀಸ್ ಮಾಡಿದೆ. ಇದೀಗ ಹರಾಜಿಗೆ ಡೆಲ್ಲಿ ಫ್ರಾಂಚೈಸಿ 28.95 ಕೋಟಿ ರುಪಾಯಿ ಉಳಿಸಿಕೊಂಡಿದೆ.
 

8. ಮುಂಬೈ ಇಂಡಿಯನ್ಸ್: 17.75 ಕೋಟಿ ರುಪಾಯಿ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಜೋಫ್ರಾ ಆರ್ಚರ್ ಅವರನ್ನು ರಿಲೀಸ್ ಮಾಡಿದೆ. ಇದರ ಜತೆಗೆ ಗುಜರಾತ್ ಟೈಟಾನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಂಡಿದೆ. ಇದೀಗ ಹರಾಜಿಗೆ ಮುಂಬೈ ಫ್ರಾಂಚೈಸಿ 17.75 ಕೋಟಿ ರುಪಾಯಿ ಉಳಿಸಿಕೊಂಡಿದೆ.

9. ರಾಜಸ್ಥಾನ ರಾಯಲ್ಸ್: 14.5 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಜೋ ರೂಟ್, ಜೇಸನ್ ಹೋಲ್ಡರ್, ಒಬೆಡ್ ಮೆಕಾಯ್ ಅವರನ್ನು ರಿಲೀಸ್ ಮಾಡಿದೆ. ಇದೀಗ ಹರಾಜಿಗೆ ರಾಜಸ್ಥಾನ ಫ್ರಾಂಚೈಸಿಯು 14.5 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

10. ಲಖನೌ ಸೂಪರ್ ಜೈಂಟ್ಸ್‌:

ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಈಗಾಗಲೇ ದೇವದತ್ ಪಡಿಕ್ಕಲ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದೀಗ ಲಖನೌ ಫ್ರಾಂಚೈಸಿಯು 13.15 ಕೋಟಿ ರುಪಾಯಿ ರೀಟೈನ್ ಮಾಡಿಕೊಂಡಿದೆ. 
 

Latest Videos

click me!