ಶುಭ್‌ಮನ್ ಗಿಲ್ ಡೇಟಿಂಗ್ ಕಹಾನಿ: ಸಾರಾ ಒಬ್ಬಳೇ ಅಲ್ಲ ಈ ಐವರ ಜತೆ ಗಿಲ್ ಗುಟ್ಟಾಗಿ ಡೇಟಿಂಗ್..!

First Published | Jun 16, 2024, 1:25 PM IST

ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಹಾಗೂ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ನಾವಿಂದು, ಶುಭ್‌ಮನ್ ಗಿಲ್ ಗುಟ್ಟಾಗಿ ಡೇಟಿಂಗ್ ಮಾಡಿದ ಐವರು ಗೆಳತಿಯರ ಪರಿಚಯ ಮಾಡಿಕೊಡುತ್ತೇವೆ ನೋಡಿ.
 

ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಗುರುತಿಸಲ್ಪಟ್ಟಿರುವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅವರನ್ನು ಭಾರತದ ತಂಡದ 'ಯುವರಾಜ(ಪ್ರಿನ್ಸ್)' ಎಂದೇ ಗುರುತಿಸಲಾಗುತ್ತಿದೆ.

ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಟೀಂ ಇಂಡಿಯಾ ಪರ ಛಾಪು ಮೂಡಿಸಿರುವ ಶುಭ್‌ಮನ್ ಗಿಲ್, ತಮ್ಮ ಕ್ರಿಕೆಟ್ ಆಟ ಮಾತ್ರವಲ್ಲದೇ ತಮ್ಮ ಲವ್ ಲೈಪ್ ಕೂಡಾ  ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಲೇ ಬಂದಿದೆ.

Tap to resize

ಪಂಜಾಬ್ ಮೂಲದ ಶುಭ್‌ಮನ್ ಗಿಲ್ ಅವರ ಹೆಸರು ಕೆಲ ಗ್ಲಾಮರರ್ಸ್ ಗೊಂಬೆಗಳ ಜತೆಗೆ ಥಳುಕು ಹಾಕಿಕೊಳ್ಳುತ್ತಲೇ ಬಂದಿದೆ. ಗಿಲ್ ಅವರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಸದಾ ಉತ್ಸುಕರಾಗಿರುತ್ತಾರೆ.

ಬನ್ನಿ ನಾವಿಂದು ಟೀಂ ಇಂಡಿಯಾ 'ಯುವರಾಜ್' ಖ್ಯಾತಿಯ ಶುಭ್‌ಮನ್ ಗಿಲ್ ಯಾರ್ಯಾರ ಜತೆಗೆ ಗುಟ್ಟಾಗಿ ಡೇಟಿಂಗ್ ನಡೆಸಿದ್ದಾರೆ ಎಂದು ತಿಳಿದುಕೊಳ್ಳೋಣ

1. ಸಾರಾ ತೆಂಡುಲ್ಕರ್:

ಹಲವು ವರದಿಗಳ ಪ್ರಕಾರ, ಈಗಲೂ ಟೀಂ ಇಂಡಿಯಾ ಕ್ರಿಕೆಟಿಗ ಶುಭ್‌ಮನ್ ಗಿಲ್, ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜತೆ ಡೇಟಿಂಗ್ ನಡೆಸುತ್ತಾ ಬಂದಿದ್ದಾರೆ. ಆದರೆ ಈ ಬಗ್ಗೆ ಈ ಇಬ್ಬರೂ ಇದುವರೆಗೂ ತುಟಿಬಿಚ್ಚಿಲ್ಲ.

2. ಮರಿಯಾ ಅರ್ಯೋಗ್:

ಶುಭ್‌ಮನ್ ಗಿಲ್ ಸ್ಪಾನೀಷ್ ಮಹಿಳೆ ಮರಿಯಾ ಅರ್ಯೋಗ್ ಎನ್ನುವ ಮಹಿಳೆಯ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಮರಿಯಾ ಐಪಿಎಲ್ ಟೂರ್ನಿಯ ವೇಳೆ ಸ್ಟೇಡಿಯಂಗೆ ಬಂದು ಸ್ಟ್ಯಾಂಡ್‌ನಲ್ಲಿ ಗಿಲ್ ಅವರಿಗೆ ಚಿಯರ್ ಅಪ್ ಮಾಡಿ ಗಮನ ಸೆಳೆದಿದ್ದರು.

3. ಸಾರಾ ಅಲಿ ಖಾನ್:

ಶುಭ್‌ಮನ್ ಗಿಲ್ ಅವರ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜತೆಗೂ ಥಳುಕು ಹಾಕಿಕೊಂಡಿದ್ದು ಗುಟ್ಟಾಗಿಯೇನೂ ಉಳಿದಿಲ್ಲ. ಹಲವು ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಆದರೆ ಈ ವಿಚಾರವನ್ನು 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಅಲ್ಲಗಳೆದಿದ್ದರು.

4. ರಿಧಿಮಾ ಪಂಡಿತ್:

ಶುಭ್‌ಮನ್ ಗಿಲ್, ನಟಿ ರಿಧಿಮಾ ಪಂಡಿತ್ ಅವರೊಂದಿಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಸ್ವತಃ ರಿಧಿಮಾ ಈ ವಿಚಾರವನ್ನು ನಿರಾಕರಿಸಿದ್ದು, ನನಗೆ ಗಿಲ್ ಯಾರೆಂಬುದೇ ಗೊತ್ತಿಲ್ಲ ಎಂದಿದ್ದರು.
 

5. ಸೋನಂ ಭಾಜ್ವಾ:

ಶುಭ್‌ಮನ್ ಗಿಲ್ ಅವರ ಹೆಸರಿನ ಜತೆ ಪಂಜಾಬಿ ನಟಿ ಸೂನಂ ಭಾಜ್ವಾ ಅವರ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಸೋನಂ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ನೀಡಿ, ಇದೆಲ್ಲಾ ಗಾಳಿಸುದ್ದಿ ಎಂದು ಹೇಳಿದ್ದರು.

Latest Videos

click me!