ಇಶಾನ್ ಕಿಶನ್‌ಗೆ ಅದೆಷ್ಟು ಸೊಕ್ಕು..? BCCI ನೀಡಿದ ಆಫರ್ ತಿರಸ್ಕರಿಸಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ..!

First Published Mar 3, 2024, 1:58 PM IST

ಬೆಂಗಳೂರು: ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಂತೆ ಆಗಿದೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಪಾಡು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುವ ಇಶಾನ್ ಕಿಶನ್, ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದು ಏಕೆ ಎನ್ನುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

ಕೆಲದಿನಗಳ ಹಿಂದಷ್ಟೇ ಬಿಸಿಸಿಐ 2023-24ನೇ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಸೇರಿದಂತೆ 30 ಆಟಗಾರರು ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಇಶಾನ್‌ ಕಿಶನ್‌ ಅವರು ಮೊದಲ ಬಾರಿಗೆ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನು ಇದೆಲ್ಲದರ ನಡುವೆ ರಾಂಚಿ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ ಅವರು ಬಿಸಿಸಿಐ ನೀಡಿದ ಆಫರ್ ತಿರಸ್ಕರಿಸಿದ್ದರು ಎನ್ನುವ ಅಚ್ಚರಿಯ ವಿಚಾರವೊಂದು ವರದಿಯಾಗಿದೆ.

ಹೌದು, ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿದೆ. ಈಗಾಗಲೇ ಮೊದಲ 4 ಪಂದ್ಯಗಳು ಮುಕ್ತಾಯವಾಗಿದ್ದು, 3-1 ರಲ್ಲಿ ಮುನ್ನಡೆ ಸಾಧಿಸಿದೆ.

ಈ ಟೆಸ್ಟ್ ಸರಣಿ ಆಡುವಂತೆ ಬಿಸಿಸಿಐ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಕೇಳಿಕೊಂಡಿತ್ತು ಎಂದು ವರದಿಯಾಗಿದೆ. ಆದರೆ ತಾವಿನ್ನು ಟೀಂ ಇಂಡಿಯಾಗೆ ಮರಳಲು ಮಾನಸಿಕವಾಗಿ ಸಿದ್ದರಿಲ್ಲ ಎಂದು ತಿಳಿಸಿದ್ದರು ಎಂದು ವರದಿಯಾಗಿದೆ.

ಈ ಮೊದಲು ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗಲೂ, ಇಶಾನ್ ಕಿಶನ್ ಈ ಸರಣಿಗೆ ತಾವು ಮಾನಸಿಕವಾಗಿ ಸಿದ್ದರಿಲ್ಲ ಎನ್ನುವ ಕಾರಣ ನೀಡಿ, ಭಾರತಕ್ಕೆ ಬಂದು ಕೌನ್‌ ಬನೇಗಾ ಕರೋಡ್‌ಪತಿ ಶೋನಲ್ಲಿ ಕಾಣಿಸಿಕೊಂಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು.

ಇದೀಗ ಇಂಗ್ಲೆಂಡ್ ಎದುರಿನ ಸರಣಿಯಿಂದ ಹೊರಗುಳಿದ ಬಳಿಕ ರಣಜಿ ಟೂರ್ನಿಯಲ್ಲೂ ಪಾಲ್ಗೊಳ್ಳದೇ, ಐಪಿಎಲ್‌ಗೆ ಪ್ರತ್ಯೇಕ ತಯಾರಿ ನಡೆಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಖಾಸಗಿ ಟಿ20 ಟೂರ್ನಿಯೊಂದರಲ್ಲೂ ಆಡುತ್ತಿದ್ದಾರೆ.

ಇದೇ ಕಾರಣಕ್ಕೆ ಇಶಾನ್ ಕಿಶನ್ ಮೇಲೆ ಸಿಟ್ಟಾದ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಅವರನ್ನು ಹೊರಹಾಕಿದೆ ಎಂದು ವರದಿಯಾಗಿದೆ. ಈ ಮೂಲಕ ಸಣ್ಣ ವಯಸ್ಸಿನಲ್ಲೇ ಇಶಾನ್ ಕಿಶನ್ ಅಂತಾರಾಷ್ಟ್ರೀಯ ವೃತ್ತಿಬದುಕು ಅತಂತ್ರ ಎನಿಸ ತೊಡಗಿದೆ.

ಇನ್ನು ಐಪಿಎಲ್ ಟೂರ್ನಿಯ ಮೂಲಕ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಪಂತ್ ಜತೆಗೆ ಧೃವ್ ಜುರೆಲ್ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಸ್ಥಾನ ಪಡೆದರೆ, ಇಶಾನ್ ಕಿಶನ್ ಕೆರಿಯರ್ ಖತಂ.

click me!