ಟೀಂ ಇಂಡಿಯಾದಿಂದ ಎಕ್ಸಿಟ್‌ಗೆ ಅವಕಾಶ ಕೊಡಿ, ಬಿಸಿಸಿಐಗೆ ತಲುಪಿದ ಅಸಿಸ್ಟೆಂಟ್ ಕೋಚ್ ಡೊಶೆಟ್ ಪತ್ರ

Published : Jul 14, 2026, 06:18 PM IST

ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ನನಗೆ ತವರಿಗೆ ಮರಳಲು ಅವಕಾಶ ಕೊಡಿ ಎಂದು ರ್ಯಾನ್ ಟೆನ್ ಡೊಶೆಟ್ ಪತ್ರ ಬರೆದಿದ್ದಾರೆ. ಡೊಶೆಟ್ ರಾಜೀನಾಮೆ ಪತ್ರ ಬಿಸಿಸಿಐ ಹಾಗೂ ಗೌತಮ್ ಗಂಭೀರ್‌ಗೆ ತಲುಪಿದೆ.

PREV
15
ಟೀಂ ಇಂಡಿಯಾ ಜವಾಬ್ದಾರಿಯಿಂದ ಮುಕ್ತಿಗೊಳಿಸಿ

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ಕಹಿ ಜೊತೆಗೆ ತಂಡದಲ್ಲಿನ ಮಹತ್ತರ ಬದಲಾವಣೆಗೆ ಆಗ್ರಹ ಕೇಳಿಬರುತ್ತಿದೆ. ಇದರ ನಡುವೆ ಕೋಚಿಂಗ್ ಹಾಗೂ ಕೋಚಿಂಗ್ ಸ್ಟಾಫ್ ಬದಲಾವಣೆ ಕುರಿತು ಒತ್ತಡಗಳು ಕೇಳಿಬಂದಿತ್ತು. ಈ ಎಲ್ಲಾ ಬೆಳಣಿಗೆ ನಡುವೆ ಇದೀಗ ಭಾರತ ತಂಡದ ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್ ಡೊಶೆಟ್ ಜವಾಬ್ದಾರಿಯಿಂದ ಮುಕ್ತಿಗೊಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.

25
ಜುಲೈ 19ಕ್ಕೆ ವಿದಾಯ ಸಾಧ್ಯತೆ

ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್ ಡೊಶೆಟ್ ಪತ್ರ ಬಿಸಿಸಿಐ ಹಾಗೂ ಗೌತಮ್ ಗಂಭೀರ ಬಳಿ ತಲುಪಿದೆ. ಆದರೆ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಯಾವುದೇ ಉತ್ತರ ನೀಡಿಲ್ಲ. ಕ್ರಿಕ್‌ಬಝ್ ವರದಿ ಪ್ರಕಾರ ಇಂಗ್ಲೆಂಡ್ ವಿರುದ್ದದ 3 ಏಕದಿನ ಪಂದ್ಯ ಮುಗಿಯುತ್ತಿದ್ದಂತೆ ಅಂದರೆ ಜುಲೈ 19ರಂದು ಕೊನೆಯ ದಿನವಾಗುವ ಸಾಧ್ಯತೆ ಇದೆ.

35
ವೈಯುಕ್ತಿಕ ಕಾರಣಗಳಿಂದ ತವರಿಗೆ

ಡೊಶೆಟ್ ಈಗಾಗಲೇ ಬಿಸಿಸಿಐಗೆ ತಮ್ಮ ವಿದಾಯದ ಕುರಿತು ಮಾಹಿತಿ ನೀಡಿದ್ದರು. ಇದೀಗ ಅಧೀಕೃತವಾಗಿ ಪತ್ರದ ಮೂಲಕ ರವಾನಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದ ತವರಿಗೆ ಮರಳುತ್ತಿರುವುದಾಗಿ ಹೇಳಿದ್ದಾರೆ. 2 ವರ್ಷಗಳ ಹಿಂದೆ ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ನೆದರ್ಲೆಂಡ್ ಮಾಜಿ ಕ್ರಿಕೆಟಿಗ ಇದೀಗ ಮತ್ತೊಂದು ವರ್ಷಕ್ಕೆ ಅವಧಿ ಮುಂದುವರಿಸಲು ಬಯಸಿಲ್ಲ.

45
ಡೊಶೆಟ್ ವಿದಾಯಕ್ಕೆ ಕಾರಣವೇನು?

ಕಿರಿಯ ಮಗನ ಆರೈಕೆ ಮಾಡಬೇಕಿದೆ. ಪತ್ನಿ ವರ್ಕಿಂಗ್ ಇರುವ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಡೊಶೆಟ್ ಕುಟುಂಬ ಲಂಡನ್‌ನಲ್ಲಿ ನೆಲೆಸಿದೆ. ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

55
ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳುತ್ತಾರಾ ಟಿ ದಿಲೀಪ್

ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ರಾಜೀನಾಮೆ ನೀಡಿ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಇಷ್ಟೇ ಅಲ್ಲ ಟಿ ದಿಲೀಪ್ ಟೀಂ ಇಂಡಿಯಾದಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories