ಇವತ್ತು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಹೈವೋಲ್ಟೇಜ್ ಏಕದಿನ ಕದನ ನಡೆಯಲಿದೆ. ತುಂಬಾ ದಿನಗಳ ನಂತರ ನಡೆಯುತ್ತಿರವ ಇವತ್ತಿನ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಈ ಏಳು ಆಟಗಾರರ ಮೇಲೆ ಇಂಗ್ಲೆಂಡ್ ಮತ್ತು ಭಾರತದ ಫ್ಯಾನ್ಸ್ ದೊಡ್ಡ ಕಣ್ಣಿಟ್ಟಿದ್ದಾರೆ.
ಎಡ್ಜ್‌ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದ್ದು, 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಇತ್ತೀಚೆಗಷ್ಟೇ ನಡೆದ ಟಿ20 ಸರಣಿಯಲ್ಲಿ 0-4 ಅಂತರದ ಭಾರಿ ಮುಖಭಂಗ ಅನುಭವಿಸಿದೆ. ಹೀಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮೇಲೆ ಒತ್ತಡವಿದೆ. ಏಕದಿನ ಸರಣಿಗೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇತ್ತ ಇಂಗ್ಲೆಂಡ್ ತಂಡಕ್ಕೆ ಅನುಭವಿ ಬ್ಯಾಟರ್ ಜೋ ರೂಟ್ ವಾಪಸಾಗಿದ್ದಾರೆ.
28
ಆ 7 ಪ್ರಮುಖ ಆಟಗಾರರು ಯಾರು?
ವಿರಾಟ್ ಕೊಹ್ಲಿ
ಪ್ರಸ್ತುತ ತಂಡದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ 'ಕಿಂಗ್' ಕೊಹ್ಲಿ ಹೆಸರಲ್ಲಿದೆ. ಅವರು 38 ಇನ್ನಿಂಗ್ಸ್‌ಗಳಲ್ಲಿ 1397 ರನ್ ಗಳಿಸಿದ್ದು, ಇದರಲ್ಲಿ 3 ಶತಕಗಳು ಸೇರಿವೆ. ಗಾಯದ ಕಾರಣ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ ವಾಪಸಾತಿ ಭಾರತೀಯ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
38
ಹ್ಯಾರಿ ಬ್ರೂಕ್
ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಸದ್ಯ ಭಾರತೀಯ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಟಿ20 ಸರಣಿಯಲ್ಲಿ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ಅವರು, ಕೊನೆಯ ಎರಡು ಪಂದ್ಯಗಳಲ್ಲಿ ಅಜೇಯ 79 ಮತ್ತು 95 ರನ್ ಸಿಡಿಸಿ ಅಬ್ಬರಿಸಿದ್ದರು. ಏಕದಿನದಲ್ಲೂ ಇವರು ಫಾರ್ಮ್ ಮುಂದುವರಿಸಿದರೆ ಭಾರತಕ್ಕೆ ಸಂಕಷ್ಟ ತಪ್ಪಿದ್ದಲ್ಲ.
ಹಿಟ್‌ಮನ್ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ 23 ಇನ್ನಿಂಗ್ಸ್‌ಗಳಲ್ಲಿ 846 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 137 ರನ್‌ಗಳ ಗರಿಷ್ಠ ಮೊತ್ತವನ್ನು ಹೊಂದಿರುವ ರೋಹಿತ್, ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
58
ಜೋ ರೂಟ್
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನ ದಿಗ್ಗಜ ಜೋ ರೂಟ್ ಭಾರತದ ವಿರುದ್ಧ 23 ಇನ್ನಿಂಗ್ಸ್‌ಗಳಲ್ಲಿ 851 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ. ಮಧ್ಯಮ ಓವರ್‌ಗಳಲ್ಲಿ ಇವರ ವಿಕೆಟ್ ಪಡೆಯುವುದು ಭಾರತೀಯ ಬೌಲರ್‌ಗಳಿಗೆ ದೊಡ್ಡ ಸವಾಲಾಗಲಿದೆ.
68
ಜೋಫ್ರಾ ಆರ್ಚರ್
ಟಿ20 ಸರಣಿಯಲ್ಲಿ ಭಾರತದ ಬ್ಯಾಟರ್‌ಗಳನ್ನು ನಡುಗಿಸಿದ್ದ ವೇಗಿ ಜೋಫ್ರಾ ಆರ್ಚರ್, ಏಕದಿನದಲ್ಲೂ ಕಂಟಕವಾಗುವ ಸಾಧ್ಯತೆ ಇದೆ. ಟಿ20 ಸರಣಿಯ 4 ಪಂದ್ಯಗಳಲ್ಲಿ ಅವರು 7 ವಿಕೆಟ್ ಕಬಳಿಸಿದ್ದರು. ಎಡ್ಜ್‌ಬಾಸ್ಟನ್‌ನ ಪಿಚ್‌ನಲ್ಲಿ ಇವರ ವೇಗ ಮತ್ತು ಬೌನ್ಸ್ ಅಪಾಯಕಾರಿಯಾಗಬಲ್ಲದು.
78
ಜಸ್ಪ್ರೀತ್ ಬುಮ್ರಾ
ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕೇವಲ 7 ಏಕದಿನ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಬುಮ್ರಾ ಅವರ ಯಾರ್ಕರ್ ಮತ್ತು ವೇಗದ ಮಿಶ್ರಣ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಹಕಾರಿಯಾಗಲಿದೆ.
88
ಶುಭಮನ್ ಗಿಲ್
ಟಿ20 ಸರಣಿ ಸೋಲಿನ ಬಳಿಕ ನಾಯಕ ಶುಭಮನ್ ಗಿಲ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ 126 ರನ್ ಮತ್ತು ಏಕದಿನದಲ್ಲಿ ಅಜೇಯ 84 ರನ್ ಸಿಡಿಸಿದ್ದ ಗಿಲ್ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂದು ನಾಯಕನ ಆಟವಾಡಿ ತಂಡವನ್ನು ಗೆಲುವಿನ ಹಾದಿಗೆ ತರುತ್ತಾರಾ ಎಂಬ ಕುತೂಹಲ ಮೂಡಿದೆ. ಟಿ20 ಸರಣಿಯ ಸೋಲಿನ ಕಹಿ ಮರೆತು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಲಿದೆಯೇ? ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.