ಬೆಂಗಳೂರು: ವಿಶ್ವಕ್ರಿಕೆಟ್ ಕಂಡ ಸ್ಟಾರ್ ಆಲ್ರೌಂಡರ್, ಕೆರಿಬಿಯನ್ ಪ್ರತಿಭೆ ಡ್ವೇನ್ ಬ್ರಾವೋ (Dwayne Bravo) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ(Retire from International Cricket) ಘೋಷಿಸಿದ್ದಾರೆ. ಅಬುಧಾಬಿಯಲ್ಲಿ (Abu Dhabi) ನಡೆಯಲಿರುವ ಆಸ್ಟ್ರೇಲಿಯಾ ವಿರುದ್ದದ ಟಿ20 ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಡ್ವೇನ್ ಬ್ರಾವೋ ಘೋಷಿಸಿದ್ದಾರೆ. ಇನ್ನು ಚೆನ್ನೆ ಸೂಪರ್ ಕಿಂಗ್ಸ್ ತಂಡದ ತಾರಾ ಆಲ್ರೌಂಡರ್ ಆಗಿರುವ ಬ್ರಾವೋ 2022ರ ಐಪಿಎಲ್ ಆಡುತ್ತಾರೋ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಲ್ರೌಂಡರ್ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಅಸ್ಟ್ರೇಲಿಯಾ ವಿರುದ್ದ ಟಿ20 ಪಂದ್ಯ ತನ್ನ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ ಎಂದು ಡ್ವೇನ್ ಬ್ರಾವೋ ಘೋಷಿಸಿದ್ದಾರೆ.
210
ಶ್ರೀಲಂಕಾ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಡ್ವೇನ್ ಬ್ರಾವೋ, ಮಹತ್ವದ ಘೋಷಣೆ ಮಾಡಿದ್ದು, ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ.
310
dwayne bravo
ನನ್ನ ಪ್ರಕಾರ ಇದು ಸರಿಯಾದ ಸಮಯ ಎನಿಸುತ್ತಿದೆ. 18 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ ಆತ್ಮತೃಪ್ತಿಯಿದೆ. ಈ 18 ವರ್ಷಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಒಂದು ಕ್ಷಣ ಹಿಂತಿರುಗಿ ನೋಡಿದಾಗ ಇಷ್ಟು ದೀರ್ಘಕಾಲ ಕೆರಿಬಿಯನ್ನರನ್ನು ಪ್ರತಿನಿಧಿಸಿದ ಬಗ್ಗೆ ತೃಪ್ತಿಯಿದೆ ಎಂದು ಬ್ರಾವೋ ಹೇಳಿದ್ದಾರೆ.
410
ಇನ್ನೇನಿದ್ದರೂ ಇಲ್ಲಿಯವರೆಗೆ ನಾನು ಗಳಿಸಿಕೊಂಡಿದ್ದ ಅನುಭವ ಹಾಗೂ ಮಾಹಿತಿಯನ್ನು ಯುವ ತಲೆಮಾರಿನ ಕ್ರಿಕೆಟಿಗರಿಗೆ ಹಂಚಲು ಬಯಸುತ್ತೇನೆ ಎಂದು ಡ್ವೇನ್ ಬ್ರಾವೋ ತಿಳಿಸಿದ್ದಾರೆ.
510
CSK
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಡ್ವೇನ್ ಬ್ರಾವೋ ಐಪಿಎಲ್ ಟೂರ್ನಿಯಲ್ಲಿ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.
610
ಡ್ವೇನ್ ಬ್ರಾವೋ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ ಐಪಿಎಲ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ರಾವೋ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
710
2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿ ಬ್ರಾವೋ ಕೂಡಾ ಮಹತ್ತರ ಪಾತ್ರ ವಹಿಸಿದ್ದರು. ಐಪಿಎಲ್‌ನ ಸ್ಟಾರ್ ಆಲ್ರೌಂಡರ್ ಅಗಿರುವ ಬ್ರಾವೋ ಬೌಲಿಂಗ್‌ನಲ್ಲಿ 167 ವಿಕೆಟ್ ಹಾಗೂ ಬ್ಯಾಟಿಂಗ್‌ನಲ್ಲಿ 1537 ರನ್ ಬಾರಿಸಿದ್ದಾರೆ.
810
ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಡ್ವೆನ್ ಬ್ರಾವೋ ಅಸಾಧಾರಣ ದಾಖಲೆ ಹೊಂದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದ ಆಟಗಾರ ಎನ್ನವ ದಾಖಲೆಯೂ ಬ್ರಾವೋ ಹೆಸರಿನಲ್ಲಿದೆ
910
ಇನ್ನು ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆ 553 ವಿಕೆಟ್ ಕಬಳಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆಗೆ ಬ್ರಾವೋ ಪಾತ್ರರಾಗಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ 6617 ರನ್ ಸಿಡಿಸಿದ್ದಾರೆ.
1010
ಇನ್ನು ವೆಸ್ಟ್ ಇಂಡೀಸ್ ಪರ ಬ್ರಾವೋ 90 ಟಿ20 ಪಂದ್ಯಗಳನ್ನಾಡಿ 78 ವಿಕೆಟ್ ಕಬಳಿಸಿದ್ದಾರೆ. ಇನ್ನು 164 ಏಕದಿನ ಪಂದ್ಯಗಳನ್ನಾಡಿ 199 ವಿಕೆಟ್ ಕಬಳಿಸಿದ್ದಾರೆ. ಅಂದಹಾಗೆ ಬ್ರಾವೋ 2012 ಹಾಗೂ 2016ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಕೂಡಾ ಹೌದು.