T20 World Cup 2024 ಆಸ್ಟ್ರೇಲಿಯಾ ಎದುರಿನ ಮಹತ್ವದ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

First Published | Jun 24, 2024, 1:18 PM IST

ಸೇಂಟ್ ಲೂಸಿಯಾ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಪಂದ್ಯದಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇದರ ಬೆನ್ನಲ್ಲೇ ಭಾರತ ಸಂಭಾವ್ಯ ತಂಡ ಪ್ರಕಟವಾಗಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.
 

1. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಇದೀಗ ಸೆಮೀಸ್ ಪಂದ್ಯಕ್ಕೂ ಮುನ್ನ ಬಲಾಢ್ಯ ಆಸ್ಟ್ರೇಲಿಯಾ ಎದುರು ದೊಡ್ಡ ಮೊತ್ತ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಜ್ಜಾಗಿದ್ದಾರೆ.
 

2. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್, ನಿಧಾನವಾಗಿ ಫಾರ್ಮ್‌ ಕಂಡುಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ಕಳೆದ ಪಂದ್ಯದಲ್ಲಿ ಚುರುಕಿನ 37 ರನ್ ಸಿಡಿಸಿದ್ದರು. ಇಂದು ಕೂಡಾ ಕೊಹ್ಲಿ ದೊಡ್ಡ ಇನಿಂಗ್ಸ್ ಆಡಲು ಎದುರು ನೋಡುತ್ತಿದ್ದಾರೆ.

Tap to resize

3. ರಿಷಣ್ ಪಂತ್:

ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ನಿಜವಾದ ಬ್ಯಾಟಿಂಗ್ ಆಪತ್ಬಾಂಧವ ಎನಿಸಿರುವ ಪಂತ್ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದು, ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಯಶಸ್ವಿಯಾಗಿದ್ದಾರೆ.

4. ಸೂರ್ಯಕುಮಾರ್ ಯಾದವ್:

ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಕೇವಲ ಒಂದು ಸಿಕ್ಸರ್ ಸಿಡಿಸಿ ವಿಕೆಟ್ ಒಪ್ಪಿಸಿದ್ದರು. ಇಂದು ಆಸೀಸ್ ಎದುರು ಭಾರತ ಗೆಲ್ಲಬೇಕಿದ್ದರೇ ಸೂರ್ಯ ಸಿಡಿಯಲೇಬೇಕಿದೆ.

5. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

6. ಶಿವಂ ದುಬೆ:

ನೀಳಕಾಯದ ಎಡಗೈ ಬ್ಯಾಟರ್ ಶಿವಂ ದುಬೆ ಕಳೆದ ಪಂದ್ಯದಲ್ಲಿ ಬಾಂಗ್ಲಾ ಎದುರು ಆಕರ್ಷಕ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ದುಬೆಗೆ ಮತ್ತೊಂದು ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

7. ರವೀಂದ್ರ ಜಡೇಜಾ:

ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾಗೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಕಬಳಿಸಿ ಮಿಂಚಿದ್ದರು.

8. ಅಕ್ಷರ್ ಪಟೇಲ್:

ಟೀಂ ಇಂಡಿಯಾದ ಮತ್ತೊರ್ವ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್, ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯೋದು ಗ್ಯಾರಂಟಿ.

9. ಕುಲ್ದೀಪ್ ಯಾದವ್:

ಟೀಂ ಇಂಡಿಯಾದ ತಜ್ಞ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಕಳೆದೆರಡು ಪಂದ್ಯಗಳಲ್ಲೂ ಅದ್ಭುತ ದಾಳಿ ನಡೆಸುತ್ತಿದ್ದಾರೆ. ಬಾಂಗ್ಲಾ ಎದುರು ಕುಲ್ದೀಪ್ ಪ್ರಮುಖ 3 ಬಲಿ ಪಡೆದಿದ್ದರು.

10. ಆರ್ಶದೀಪ್ ಸಿಂಗ್:

ಟೀಂ ಇಂಡಿಯಾ ಪರ ಈ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿರುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಡೆತ್ ಓವರ್‌ನಲ್ಲಿ ಹಾಗೂ ಪವರ್‌ಪ್ಲೇ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.

11. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಎದುರು ರನ್ ಗಳಿಸಲು ಎದುರಾಳಿ ಬ್ಯಾಟರ್‌ಗಳು ಪರದಾಡುತ್ತಿದ್ದಾರೆ. ಇಂದು ಕೂಡಾ ಬುಮ್ರಾ ಭಯದಲ್ಲೇ ಕಾಂಗರೂ ಪಡೆ ಕಣಕ್ಕಿಳಿದರೂ ಅಚ್ಚರಿಯಿಲ್ಲ.

Latest Videos

click me!