ಈ ಕ್ರಿಕೆಟಿಗನೊಂದಿಗೆ ಲವ್ವಲ್ಲಿ ಬಿದ್ದಿದ್ದ ಮಾಧುರಿ ದೀಕ್ಷಿತ್, ಆದ್ರೆ ಮದುವೆಯಾಗದಿರಲು ನಿರ್ಧರಿಸಿದ್ದೇಕೆ?

First Published | Jun 23, 2024, 2:05 PM IST

ಬೆಂಗಳೂರು: ಬಾಲಿವುಡ್ ತಾರೆಯರು ಹಾಗೂ ಭಾರತೀಯ ಕ್ರಿಕೆಟಿಗರ ನಡುವಿನ ಲವ್ ಅಫೇರ್‌ಗಳು ಸರ್ವೇ ಸಾಮಾನ್ಯ ಎನಿಸಿವೆ. ಕೆಲವೊಂದು ಲವ್ ಸ್ಟೋರಿಗಳು ಯಶಸ್ವಿಯಾದರೆ, ಮತ್ತೆ ಕೆಲವು ಸಲಿಬ್ರಿಟಿ ತಾರೆಯರ ಲವ್‌ಸ್ಟೋರಿ ಅರ್ಧದಲ್ಲೇ ಬ್ರೇಕ್‌ ಅಪ್ ಆಗಿವೆ. ನಾವಿಂದು ಬಾಲಿವುಡ್‌ನ ಸುಂದರ ನಟಿ ಮಾಧುರಿ ದೀಕ್ಷಿತ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗನ ಜತೆಗಿನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಹಾಗೂ ಬ್ರೇಕ್ ಅಪ್‌ ಬಗ್ಗೆ ತಿಳಿಯೋಣ ಬನ್ನಿ.
 

ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಬಾಲಿವುಡ್ ನಟಿಯರ ನಡುವಿನ ಲವ್ ಅಫೇರ್‌ಗಳಿಗೆ ದಶಕಗಳ ಇತಿಹಾಸವಿದೆ. ಭಾರತದ ಕ್ರಿಕೆಟಿಗರ ಜತೆಗೆ ಬಾಲಿವುಡ್ ನಟಿಯರ ಹೆಸರು ಆಗಾಗ ಥಳುಕು ಹಾಕಿಕೊಳ್ಳುತ್ತಲೇ ಬರುತ್ತಿದೆ.
 

ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ತೀರಾ ಇತ್ತೀಚೆಗೆ ಹಾರ್ದಿಕ್ ಪಾಂಡ್ಯವರೆಗೆ ಕ್ರಿಕೆಟಿಗರ ಹಾಗೂ ಬಾಲಿವುಡ್ ನಟಿಯರ ನಡುವಿನ ಲವ್ ಸ್ಟೋರಿಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ.

Tap to resize

ಆದರೆ ಬಾಲಿವುಡ್‌ನ ಅತ್ಯಂತ ಸುಂದರ ನಟಿ ಮಾಧುರಿ ದೀಕ್ಷಿತ್ ಕೂಡಾ ಟೀಂ ಇಂಡಿಯಾ ಕ್ರಿಕೆಟಿಗ ಲವ್ನಲ್ಲಿ ಬಿದ್ದಿದ್ದರು ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ.

35 ವರ್ಷಗಳ ಬಾಲಿವುಡ್ ಒಟನಾಡವಿದ್ದ ಮಾಧುರಿ ದೀಕ್ಷಿತ್, ಕಳ್ ನಾಯಕ್, ದೇವದಾಸ್‌, ದಿಲ್ ತೋ ಪಾಗಲ್ ಹೈ, ದಿಲ್ ಸೇರಿದಂತೆ ಹಲವಾರು ಬ್ಲಾಕ್‌ ಬಸ್ಟರ್ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದರು.

ಸುಂದರ ನಟಿ ಮಾಧುರಿ ದೀಕ್ಷಿತ್, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಆಗಿದ್ದ ಅಜಯ್ ಜಡೇಜಾ ಅವರ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ. ಒಂದು ಫೋಟೋಶೂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಯ ನಡುವೆ ಒಳ್ಳೆಯ ಭಾಂದವ್ಯ ಬೆಳೆದಿತ್ತಂತೆ.

90ರ ದಶಕದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆಗಿದ್ದ ಅಜಯ್ ಜಡೇಜಾಗೆ ಭಾರತದಲ್ಲಿ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳಿದ್ದರು. ಅದೇ ರೀತಿ ಜಡೇಜಾರನ್ನು ಮಾಧುರಿ ದೀಕ್ಷಿತ್ ವಿಪರೀತ ಪ್ರೀತಿ ಮಾಡುತ್ತಿದ್ದರು.

ಕೆಲ ಸಮಯದ ಬಳಿಕ ಈ ಜೋಡಿ ಬಹುತೇಕ ಮದುವೆಯಾಗುವ ಹಂತಕ್ಕೂ ಇವರ ಗೆಳೆತನ ಮುಂದುವರೆದಿತ್ತು. ಆದರೆ ಒಂದು ಜಡೇಜಾ ಬದುಕಿನಲ್ಲಿ ನಡೆದ ಒಂದು ಘಟನೆ ಮಾಧುರಿ ತಮ್ಮ ನಿರ್ಧಾರವನ್ನೇ ಬದಲಿಸುವಂತೆ ಮಾಡಿತು.

ಹೌದು, 2000ನೇ ಇಸವಿಯಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್ ಹಗರಣದಲ್ಲಿ ಅಜಯ್ ಜಡೇಜಾ ಹೆಸರು ಥಳುಕು ಹಾಕಿಕೊಂಡಿತ್ತು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು. 

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಾಧುರಿ ದೀಕ್ಷಿತ್, ಅಜಯ್ ಜಡೇಜಾ ಅವರನ್ನು ಮದುವೆಯಾಗದಿರಲು ತೀರ್ಮಾನ ಮಾಡಿದರು ಎಂದು ವರದಿಯಾಗಿದೆ.

ಇದಾದ ಬಳಿಕ ಮಾಧುರಿ ದೀಕ್ಷಿತ್ 1999ರಲ್ಲಿ ಡಾ. ಶ್ರೀರಾಮ್‌ ನೆನೆ ಎನ್ನುವವರನ್ನು ಮದುವೆಯಾಗಿ ಅಮೆರಿಕಗಾಗಿ ವಲಸೆ ಹೋದರು. ಈ ಜೋಡಿಗೆ ಅರಿನ್ ಹಾಗೂ ರಿಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.

Latest Videos

click me!