ಮತ್ತಷ್ಟು ಬಲಿಷ್ಠ ಟೀಮ್ ಕಟ್ಟಲು ಆರೆಂಜ್ ಆರ್ಮಿ ರೆಡಿ: ಈ 5 ಆಟಗಾರರ ಮೇಲೆ ಕಣ್ಣಿಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್!

First Published | Nov 7, 2024, 4:44 PM IST

ಬೆಂಗಳೂರು: ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಮೆಗಾ ಹರಾಜಿನಲ್ಲೂ ಕೆಲವು ಟಿ20 ಸ್ಪೆಷಲಿಸ್ಟ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಕಾವ್ಯ ಮಾರನ್ ಕಣ್ಣಿಟ್ಟಿರುವ ಆ 5 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ

2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಆರೆಂಜ್ ಆರ್ಮಿ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಹರಾಜಿಗೆ 45 ಕೋಟಿ ರುಪಾಯಿ ಉಳಿಸಿಕೊಂಡಿದೆ.

ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪ್ಯಾಟ್ ಕಮಿನ್ಸ್‌, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ ಹಾಗೂ ಟ್ರ್ಯಾವಿಸ್ ಹೆಡ್ ಹೀಗೆ 5 ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಈ 5 ಆಟಗಾರರ ಮೇಲೆ ಕಣ್ಣಿಟ್ಟಿದೆ.

Latest Videos


1. ಟಿ ನಟರಾಜನ್:

ತಮಿಳುನಾಡು ಮೂಲದ ಎಡಗೈ ವೇಗದ ಬೌಲರ್ ತಂಗವೇಲು ನಟರಾಜನ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿಯು ರಿಲೀಸ್ ಮಾಡಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 19 ವಿಕೆಟ್ ಕಬಳಿಸಿದ್ದ ನಟರಾಜನ್ ಅವರನ್ನು ಆರೆಂಜ್ ಆರ್ಮಿ ಮತ್ತೊಮ್ಮೆ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಎದುರು ನೋಡುತ್ತಿದೆ.

2. ವೆಂಕಟೇಶ್ ಅಯ್ಯರ್:

ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಫ್ರಾಂಚೈಸಿ ರಿಲೀಸ್ ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎದುರು ನೋಡುತ್ತಿದ್ದು, ವೆಂಕಟೇಶ್ ಅಯ್ಯರ್ ಆರೆಂಜ್ ಆರ್ಮಿಗೆ ಉತ್ತಮ ಆಯ್ಕೆ ಆಗಲಿದೆ.

3. ಮೊಹಮ್ಮದ್ ಸಿರಾಜ್:

ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ 2015-17ರ ಅವಧಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಆರ್‌ಸಿಬಿ ಮಾಜಿ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡರೆ ಅಚ್ಚರಿಯೇನಿಲ್ಲ.

4. ರವಿಚಂದ್ರನ್ ಅಶ್ವಿನ್:

ಚೆನ್ನೈ ಮೂಲದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದು, ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ರಿಲೀಸ್ ಮಾಡಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಅಶ್ವಿನ್‌ಗೆ ಗಾಳಹಾಕಲು ರೆಡಿಯಾಗಿದೆ.

Abdul Samad

2020ರಿಂದಲೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಸ್ಪೋಟಕ ಬ್ಯಾಟರ್ ಅಬ್ದುಲ್ ಸಮದ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಕಡಿಮೆ ಮೊತ್ತಕ್ಕೆ ಸಮದ್ ಅವರನ್ನು ಮತ್ತೊಮ್ಮೆ ಖರೀದಿಸಲು ಆರೆಂಜ್ ಆರ್ಮಿ ಮಾಸ್ಟರ್ ಪ್ಲಾನ್ ರೂಪಿಸಿದೆ.
 

click me!