ಆಟಗಾರರ ರೀಟೈನ್ ಬಳಿಕ ಯಾವ ಫ್ರಾಂಚೈಸಿ ಪರ್ಸ್‌ನಲ್ಲಿ ಐಪಿಎಲ್ ಹರಾಜಿಗೆ ಎಷ್ಟು ಹಣ ಉಳಿದಿದೆ?

First Published | Nov 7, 2024, 3:34 PM IST

ಬೆಂಗಳೂರು: ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಆಟಗಾರರ ರೀಟೈನ್ ಬಳಿಕ ಮೆಗಾ ಹರಾಜಿಗೆ ಯಾವ ಫ್ರಾಂಚೈಸಿ ಪರ್ಸ್‌ನಲ್ಲಿ ಎಷ್ಟು ಹಣ ಬಾಕಿ ಉಳಿದಿದೆ ತಿಳಿಯೋಣ ಬನ್ನಿ.
 

1. ಚೆನ್ನೈ ಸೂಪರ್ ಕಿಂಗ್ಸ್‌: 55 ಕೋಟಿ ರುಪಾಯಿ

ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಎಂ ಎಸ್ ಧೋನಿ ಸೇರಿದಂತೆ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಆಟಗಾರರ ರೀಟೈನ್ ಬಳಿಕ ಹರಾಜಿಗೆ ಸಿಎಸ್‌ಕೆ ಫ್ರಾಂಚೈಸಿ ಬಳಿ 55 ಕೋಟಿ ರುಪಾಯಿ ಉಳಿದುಕೊಂಡಿದೆ.
 

2. ಕೋಲ್ಕತಾ ನೈಟ್ ರೈಡರ್ಸ್‌: 51 ಕೋಟಿ ರುಪಾಯಿ

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಸುನಿಲ್ ನರೈನ್, ರಿಂಕು ಸಿಂಗ್, ಆಂಡ್ರೆ ರಸೆಲ್ ಸೇರಿದಂತೆ 6 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಸದ್ಯ ಕೆಕೆಆರ್ ಪರ್ಸ್‌ನಲ್ಲಿ ಹರಾಜಿಗೆ 51 ಕೋಟಿ ರುಪಾಯಿ ಉಳಿದಿದೆ.
 

Latest Videos


3. ರಾಜಸ್ಥಾನ ರಾಯಲ್ಸ್: 41 ಕೋಟಿ ರುಪಾಯಿ

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತನ್ನ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಧೃವ್ ಜುರೆಲ್ ಸೇರಿದಂತೆ 6 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಹರಾಜಿಗೆ ರಾಜಸ್ಥಾನ ಫ್ರಾಂಚೈಸಿಯು ಕೇವಲ 41 ಕೋಟಿ ರುಪಾಯಿ ಉಳಿಸಿಕೊಂಡಿದೆ.
 

4. ಮುಂಬೈ ಇಂಡಿಯನ್ಸ್‌: 45 ಕೋಟಿ ರುಪಾಯಿ

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಐವರು ಕ್ಯಾಪ್ಡ್‌ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಹರಾಜಿಗೆ 45 ಕೋಟಿ ರುಪಾಯಿ ಉಳಿಸಿಕೊಂಡಿದೆ.
 

5. ಸನ್‌ರೈಸರ್ಸ್‌ ಹೈದರಾಬಾದ್: 45 ಕೋಟಿ ರುಪಾಯಿ

ಸನ್‌ರೈಸರ್ಸ್ ಹೈದರಾಬಾದ್ ತಂಡವು ನಾಯಕ ಪ್ಯಾಟ್ ಕಮಿನ್ಸ್, ಹೆನ್ರಿಚ್ ಕ್ಲಾಸೆನ್, ಟ್ರಾವಿಸ್ ಹೆಡ್ ಸೇರಿದಂತೆ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಹರಾಜಿಗೆ 45 ಕೋಟಿ ರುಪಾಯಿ ಉಳಿಸಿಕೊಂಡಿದೆ.

6. ಗುಜರಾತ್ ಟೈಟಾನ್ಸ್: 69 ಕೋಟಿ ರುಪಾಯಿ

ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಶುಭ್‌ಮನ್ ಗಿಲ್, ರಶೀದ್ ಖಾನ್ ಸೇರಿದಂತೆ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೆ ಗುಜರಾತ್ ಫ್ರಾಂಚೈಸಿಯು 69 ಕೋಟಿ ರುಪಾಯಿ ಉಳಿಸಿಕೊಂಡಿದೆ.

7. ರಾಯಲ್ ಚಾಲೆಂಜರ್ಸ್ ಬೆಂಗಳೂರು: 83 ಕೋಟಿ ರುಪಾಯಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಮೆಗಾ ಹರಾಜಿಗೆ 83 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.

8. ಡೆಲ್ಲಿ ಕ್ಯಾಪಿಟಲ್ಸ್: 73 ಕೋಟಿ ರುಪಾಯಿ

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಟ್ರಿಸ್ಟಿನ್ ಸ್ಟಬ್ಸ್‌ ಸೇರಿದಂತೆ 4 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಹರಾಜಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 73 ಕೋಟಿ ರುಪಾಯಿ ಉಳಿಸಿಕೊಂಡಿದೆ.

9. ಪಂಜಾಬ್ ಕಿಂಗ್ಸ್‌: 110.5 ಕೋಟಿ ರುಪಾಯಿ

ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಕೇವಲ ಇಬ್ಬರು ಅನ್‌ಕ್ಯಾಪ್ಡ್‌ ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಐಪಿಎಲ್ ಹರಾಜಿಗೆ ಗರಿಷ್ಠ ಅಂದರೆ 110.5 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

10. ಲಖನೌ ಸೂಪರ್ ಜೈಂಟ್ಸ್‌: 69 ಕೋಟಿ ರುಪಾಯಿ

ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ನಿಕೋಲಸ್ ಪೂರನ್ ಸೇರಿದಂತೆ 5 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೆ ಲಖನೌ ಫ್ರಾಂಚೈಸಿ ಬಳಿ 69 ಕೋಟಿ ರುಪಾಯಿ ಹಣ ಇದೆ

click me!