2007 ರಲ್ಲಿ ಮತ್ತೊಮ್ಮೆ ಆಫ್ರೋ-ಏಷ್ಯಾ ಕಪ್ ಪಂದ್ಯ ನಡೆಯಿತು. ಮಹೇಲ ಜಯವರ್ಧನೆ ಏಷ್ಯಾ XI ಏಕದಿನ ತಂಡದ ನಾಯಕರಾಗಿದ್ದರು. ಟಿ20 ತಂಡಕ್ಕೆ ಸೋಯಬ್ ಮಲಿಕ್ ನಾಯಕರಾಗಿದ್ದರು. ಏಷ್ಯಾ ಟಿ20 ತಂಡದಲ್ಲಿ ಸಚಿನ್ ತೆಂಡೂಲ್ಕರ್, ಮುನಾಫ್ ಪಟೇಲ್ ಇದ್ದರು. ಅದೇ ರೀತಿ, ಏಕದಿನ ತಂಡದಲ್ಲಿ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಇದ್ದರು.
ಈ ಮಧ್ಯೆ, ಎಸಿಎ ಐಪಿಎಲ್‌ನ ಮಿನಿ ಆವೃತ್ತಿಯನ್ನು ಪರಿಚಯಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ. "ಮಂಡಳಿಯ ಅನುಮೋದನೆ ಪಡೆದ ನಂತರ, ಆಫ್ರಿಕಾ ಪ್ರೀಮಿಯರ್ ಲೀಗ್ ಅನ್ನು ತರಲು ನಾವು ಯೋಜಿಸಿದ್ದೇವೆ. ಪ್ರಸ್ತುತ ನಾವು ಪ್ರಾಯೋಜಕತ್ವದಲ್ಲಿ ನಿರತರಾಗಿದ್ದೇವೆ. ಅದು ಒಟ್ಟಿಗೆ ಸೇರಿದ ನಂತರ, ನಾವು ಮಂಡಳಿಗೆ ಹೋಗುತ್ತೇವೆ, ಮಂಡಳಿ ಅದನ್ನು ಅನುಮೋದಿಸುತ್ತದೆ, ನಂತರ ನಾವು ಅದನ್ನು ಮುಂದುವರಿಸುತ್ತೇವೆ.