T20 ನಂಬರ್‌ 1 ಬ್ಯಾಟ್ಸ್‌ಮನ್‌ ಸೂರ್ಯ ಕುಮಾರ್ ಯಾದವ್ ನೆಟ್‌ವರ್ತ್‌ ಎಷ್ಷು ಗೊತ್ತಾ?

Published : Nov 08, 2022, 04:58 PM ISTUpdated : Nov 08, 2022, 05:13 PM IST

ಟಿ20 ವಿಶ್ವಕಪ್‌ನಲ್ಲಿ (T20 World Cup) ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಬಲಿಷ್ಠ ಬ್ಯಾಟಿಂಗ್‌ಗೆ ಇಡೀ ವಿಶ್ವವೇ ಖುಷಿ ಪಡುತ್ತಿದೆ. ಜಿಂಬಾಬ್ವೆ ವಿರುದ್ಧ 25 ಎಸೆತಗಳಲ್ಲಿ 61 ರನ್‌ಗಳ ಇನ್ನಿಂಗ್ಸ್‌ನಲ್ಲಿ ಸೂರ್ಯ ಅವರ ಅದ್ಭುತ ಸಿಕ್ಸರ್‌ಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ .ಟಿ20 ವಿಶ್ವಕಪ್‌ನಲ್ಲಿ 225 ರನ್ ಗಳಿಸಿದ್ದ ಸೂರ್ಯ ವಿರಾಟ್ ಕೊಹ್ಲಿಗಿಂತ ಹಿಂದೆ ಉಳಿದಿದ್ದಾರೆ. ಭಾರತದ  ಸೆಮಿಫೈನಲ್ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಅವರ  ಅದ್ಭುತ ಇನ್ನಿಂಗ್ಸ್ ಕಾಣಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಸೂರ್ಯ ಕುಮಾರ್‌ ಅವರ ಪರ್ಸನಲ್‌ ಲೈಫ್‌ನ ಬಗ್ಗೆ ಸುದ್ದಿಗಳು ವೈರಲ್‌ ಆಗುತ್ತಿವೆ  ಸೂರ್ಯಕುಮಾರ್ ಯಾದವ್ ಅವರ networth ಮತ್ತು  ಅವರ  ಪತ್ನಿ ದೇವಿಶಾ ಶೆಟ್ಟಿ  (Devisha Shetty)ಬಗ್ಗೆ ವಿವರ ಇಲ್ಲಿದೆ.

PREV
110
T20 ನಂಬರ್‌ 1 ಬ್ಯಾಟ್ಸ್‌ಮನ್‌ ಸೂರ್ಯ ಕುಮಾರ್ ಯಾದವ್  ನೆಟ್‌ವರ್ತ್‌ ಎಷ್ಷು ಗೊತ್ತಾ?

ಸೂರ್ಯ, ಐಷಾರಾಮಿ ಕಾರುಗಳೆಂದರೆ ಒಲವು. .ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಕೂಡ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. BMW 5 Series 530d M Sport, Audi A6, Range Rover, Hyundai i20, Fortuner ನಂತಹ ಕಾರುಗಳನ್ನು ಸಹ ಅವರು ಹೊಂದಿದ್ದಾರೆ.


 

210

ಇದರ ಜೊತೆಗೆ ಸ್ಪೋರ್ಟ್ಸ್ ಬೈಕ್‌ಗಳನ್ನು ಇಷ್ಟಪಡುವ ಸೂರ್ಯ ಕುಮಾರ್‌ ಅವರು ಸುಜುಕಿ ಹಯಾಬುಸಾ ಮತ್ತು ಹಾರ್ಲೆ ಡೇವಿಡ್‌ಸನ್ ಬೈಕ್‌ಗಳನ್ನು ಹೊಂದಿದ್ದಾರೆ.

310

ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಆಗಿದ್ದು, ಟೂರ್ನಿಯಲ್ಲಿ ಇದುವರೆಗೆ 225 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


 

410

ಸೂರ್ಯಕುಮಾರ್ ಯಾದವ್ ಅವರು ದೇವಿಶಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ. ದೇವಿಶಾ ವೃತ್ತಿಯಲ್ಲಿ ನೃತ್ಯ ತರಬೇತುದಾರರು. ಉತ್ತಮ ನೃತ್ಯಗಾರಾಗಿರುವ ದೇವಿಶಾ ಶೆಟ್ಟಿ ಅವರು ಮುಂಬೈನಲ್ಲಿ ಡ್ಯಾನ್ಸ್‌ಟಿಚರ್‌ ಆಗಿ ದೊಡ್ಡ ಹೆಸರನ್ನು ಹೊಂದಿದ್ದಾರೆ.  

510

ಅಡುಗೆ ಮಾಡುವುದನ್ನು  ಇಷ್ಟ ಪಡುವ ದೇವಿಶಾ ಶೆಟ್ಟಿ  ಸೂರ್ಯಕುಮಾರ್ ಯಾದವ್ ಅವರ ಫಿಟ್ನೆಸ್ ಬಗ್ಗೆಯೂ  ಅಷ್ಟೇ ಗಮನ ಹರಿಸಿದ್ದಾರೆ.


 

610

ಸೂರ್ಯಕುಮಾರ್ ಯಾದವ್  ಅವರು ಸುಮಾರು 15 ಕೋಟಿ ಬಂಡವಾಳವನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ ಈ ಆಟಗಾರನಿಗೆ ಐಪಿಎಲ್‌ನಲ್ಲಿ ಬೆಂಬಲ ನೀಡಿದೆ. ಫ್ರಾಂಚೈಸಿ ಅವರನ್ನು ವಾರ್ಷಿಕ 3.2 ಕೋಟಿ ರೂಗೆ ಖರೀದಿ ಮಾಡಿದೆ.

710

ಸೂರ್ಯಕುಮಾರ್ ಯಾದವ್ ಅವರ ಮಾಸಿಕ ಗಳಿಕೆ 10 ರಿಂದ 15 ಲಕ್ಷ ರೂಪಾಯಿಗಳ ನಡುವೆ ಇದೆ. ಐಪಿಎಲ್ ಸಮಯದಲ್ಲಿ ಅವರ ಗಳಿಕೆ 40 ರಿಂದ 50 ಲಕ್ಷ ರೂಪಾಯಿಗಳಿಗೆ ಏರುತ್ತದೆ.


 

810

ಟಿ20 ವಿಶ್ವಕಪ್‌ನಲ್ಲಿ  ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ , ಈ ವರ್ಷ 1000 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

910
Suryakumar Yadav

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ ಸೂರ್ಯ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸೂರ್ಯ 2022 ರಲ್ಲಿ 28 ಇನ್ನಿಂಗ್ಸ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

1010

2022 ರ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅತಿ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ವಿರಾಟ್ ಕೊಹ್ಲಿಗಿಂತ ಹಿಂದಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 5 ಪಂದ್ಯಗಳಲ್ಲಿ ಒಟ್ಟು 246 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ 225 ರನ್ ಗಳಿಸಿ ಅವರ ಹಿಂದೆ ಇದ್ದಾರೆ. 

Read more Photos on
click me!

Recommended Stories