ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಜೊತೆ ಪಾಕ್ ವೇಗಿ ಶಾಹೀನ್ ಆಫ್ರಿದಿ ಮದುವೆ!

First Published | Nov 7, 2022, 5:22 PM IST

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ ಜೊತೆ ಪಾಕಿಸ್ತಾನದ ವೇಗಿ ಶಾಹೀನ್ ಆಫ್ರಿದಿ ಮದುವೆಯಾಗುತ್ತಿದ್ದಾರೆ. ಈ ಕುರಿತು ಸ್ವತಃ ಶಾಹೀನ್ ಆಫ್ರಿದಿ ಕುತೂಹಲ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮಾರಕ ದಾಳಿ ಮೂಲಕ ಪಾಕಿಸ್ತಾನ ತಂಡವನ್ನು ಸೆಮಿಫೈನಲ್ ಕೊಂಡೊಯ್ದ ವೇಗಿ ಶಾಹೀನ್ ಆಫ್ರಿದಿ ತನ್ನ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಆಫ್ರಿದಿ ಹೃದಯ ಕದ್ದು ಹುಡುಗಿ ಬೇರಾರು, ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಪುತ್ರಿ ಅನ್ಶಾ ಆಫ್ರಿದಿ. ಶೀಘ್ರದಲ್ಲೇ ಶಾಹಿದ್ ಆಫ್ರಿದಿ ಹಾಗೂ ಅನ್ಶಾ ಆಫ್ರಿದಿ ಮದುವೆಯಾಗುತ್ತಿದ್ದಾರೆ. 
 

ಪಾಕಿಸ್ತಾನದ ಜಿಯೋ ವಾಹಿನಿ ಜೊತೆ ಶಾಹೀನ್ ಆಫ್ರಿದಿ ಮದುವೆ ಕುರಿತು ಮಾತನಾಡಿದ್ದಾರೆ. ಈಗಾಗಲೇ ನಮ್ಮಿಬ್ಬರ ಪ್ರೀತಿ ಆಳವಾಗಿದೆ. ಶೀಘ್ರದಲ್ಲೇ ಅನ್ಶಾ ಜೊತೆಗೆ ಹೊಸ ಬದುಕಿಗೆ ಕಾಲಿಡುತ್ತೇನೆ ಎಂದು ಶಾಹೀನ್ ಆಫ್ರಿದಿ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅನ್ಶಾ ಆಫ್ರಿದಿ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

Tap to resize

ಶಾಹೀನ್ ಆಫ್ರಿದಿ ವಯಸ್ಸು 22. ಪಾಕಿಸ್ತಾನ ಕ್ರಿಕೆಟಿಗರ ಪೈಕಿ ಅತೀ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಶಾಹೀನ್ ಆಫ್ರಿದಿ ಹೊಂದಿದ್ದಾರೆ. ಇಷ್ಟು ಬೇಗ ಮದುವೆ ಫಿಕ್ಸ್ ಮಾಡಿಕೊಂಡು ಮಹಿಳಾ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಶಾಹೀನ್ ಆಫ್ರಿದಿ ಉತ್ತರಿಸಿದ್ದಾರೆ. ಅನ್ಶಾ ನನ್ನ ಹೃದಯ ಕದ್ದಿದ್ದಾರೆ. ನನ್ನ ಮನಸ್ಸು ಕೂಡ ಅನ್ಶಾ ಕಡೆ ವಾಲಿದೆ. ನನಗಷ್ಟು ಸಾಕು ಎಂದಿದ್ದಾರೆ

ಶಾಹೀದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ ಹಾಗೂ ಶಾಹೀನ್ ಆಫ್ರಿದಿ ಹಲವು ವರ್ಷಗಳಿಂದ ಪರಿಯಚಸ್ಥರಾಗಿದ್ದಾರೆ. ಶಾಹೀನ್ ಆಫ್ರಿದಿ ಬೌಲಿಂಗ್ ಕುರಿತು ಮಾಜಿ ಕ್ರಿಕೆಟಿಗ ಆಫ್ರಿದಿ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಶಾಹೀದ್ ಆಫ್ರಿದಿ ಕೂಡ ಮಗಳ ಮದುವೆ ಸುಳಿವು ನೀಡಿದ್ದರು. ಇಷ್ಟೇ ಅಲ್ಲ ಶಾಹೀನ್ ಆಫ್ರಿದಿ ಮದುವೆಯಾಗುತ್ತಿರುವ ಕುರಿತು ಮಾಹಿತಿ ನೀಡಿದ್ದರು.

ಶಾಹೀನ್ ಆಫ್ರಿದಿ ಹಾಗೂ ಅನ್ಶಾ ಆಫ್ರಿದಿ ಮದುವೆ ದಿನಾಂಕ ಬಹಿರಂಗವಾಗಿಲ್ಲ. ಎರಡೂ ಕುಟುಂಬದವರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸೂಕ್ತ ದಿನಾಂಕ ನೋಡಿ ಮದುವೆ ಫಿಕ್ಸ್ ಮಾಡುವ ಸಾಧ್ಯತೆ ಇದೆ. ಇತ್ತ ಶಾಹೀನ್ ಆಫ್ರಿದಿ ದಿನಾಂಕ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಶಾಹೀನ್ ಆಫ್ರಿದಿ ಅತೀ ವೇಗದ ಬೌಲರ್. ಯುವ ಕ್ರಿಕೆಟಿಗ 2021ರ ಸಾಲಿನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಶಾಹಿನ್ ಆಫ್ರಿದಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಕೇವಲ 9 ಟೆಸ್ಟ್ ಪಂದ್ಯದಿಂದ 47 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತ್ಯುತ್ತಮ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. 
 

ಶಾಹೀನ್ ಹಾಗೂ ಅನ್ಶಾ ಪ್ರೀತಿ ವಿಚಾರ ಬಹಿರಂಗವಾಗುತ್ತಿದ್ದಂತೆ ಪಾಕಿಸ್ತಾನ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಆಫ್ರಿದಿ ಮದುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
 

Latest Videos

click me!