2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ, ಟಿ20 ಟೀಂ ಬದಲಾವಣೆ ಹಿಂದಿನ ಕಾರಣ ಬಯಲು

Published : Jun 06, 2026, 06:54 PM IST

ರೋಹಿತ್ ಶರ್ಮಾ ನಿರ್ಗಮನದ ಬಳಿಕ ಟೀಂ ಇಂಡಿಯಾ ಟಿ20 ತಂಡದಲ್ಲಿನ ಕಿತ್ತಾಟವೇ ಇದೀಗ ನಾಯಕತ್ವ ಬದಲಾವಣೆ, ತಂಡದಲ್ಲಿನ ಭಾರಿ ಬದಲಾವಣೆಗೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ನಡುವಿನ ಕಿತ್ತಾಟಕ್ಕೂ ಇದೆ ಕಾರಣ.

PREV
16
ಇಬ್ಬರ ಜಗಳದಿಂದ ತಂಡದಲ್ಲಿ ಭಾರಿ ಬದಲಾವಣೆ

ಟೀಂ ಇಂಡಿಯಾ ಟಿ20 ತಂಡದ ಆಯ್ಕೆ ಬೆನ್ನಲ್ಲೇ ಟೀಂ ಇಂಡಿಯಾದ ಕಿತ್ತಾಟವೂ ಬಯಲಾಗಿದೆ. ಇದೇ ಕಿತ್ತಾಟದಿಂದ ಇಬ್ಬರೂ ತಂಡದಿಂದ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕತ್ವ ಹಾಗೂ ತಂಡದಿಂದ ಕೊಕ್ ನೀಡಲಾಗಿದೆ. ಯಾದವ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಇಲ್ಲ. ಇವರಿಬ್ಬರ ನಡುವಿನ ಜಗಳವೇ ಭಾರತ ಟಿ20 ತಂಡದ ಭಾರಿ ಬದಲಾವಣೆಗೆ ಕಾರಣ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

26
2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು. ಈ ವೇಳೆ ಸ್ಟಾಂಡ್ ಬೈ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಆಯ್ಕೆ ಸಮಿತಿ ನೇರವಾಗಿ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಿತು. ಇಲ್ಲಿಂದಲೇ ಹಾರ್ದಿಕ್ ಅಸಮಾಧಾನ ಶುರುವಾಗಿತ್ತು ಎಂದು ವರದಿಗಳು ಪ್ರಕಟಗೊಂಡಿದೆ.

36
ಟೀಂ ಇಂಡಿಯಾದಲ್ಲಿ ಕಿತ್ತಾಟ, ಮುಂಬೈ ತಂಡದಲ್ಲೂ ಕಿತ್ತಾಟ

ನಾಯಕತ್ವ ಆಯ್ಕೆ ವೇಳೆ ಕೆಲ ಹಿರಿಯ ಕ್ರಿಕೆಟಿಗರು ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್‌ಗೆ ಮತ ಹಾಕಿದ್ದರು. ಹೀಗೆ ಮತ ಹಾಕಿದವರ ಬೈಕಿ ಒಬ್ಬರು ರೋಹಿತ್ ಶರ್ಮಾ. ಇತ್ತ ಟೀಂ ಇಂಡಿಯಾಗದಲ್ಲಿ ಸೂರ್ಯಕುಮಾರ್ ವಿರುದ್ದ ದ್ವೇಷಗೊಂಡ ಹಾರ್ದಿಕ್ ಪಾಂಡ್ಯ ಕಿಡಿಕಾರುತ್ತಲೇ ಇದ್ದರು ಎಂದು ಹೇಳಲಾಗುತ್ತಿದೆ. ಇದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಗೊಂಡಿರುವುದು ಅಭಿಮಾನಿಗಳು ಗಮನಿಸಿದ್ದಾರೆ.

46
ಕಿತ್ತಾಟದಿಂದ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾ ವಿರುದ್ಧ, ಸೂರ್ಯಕುಮಾರ್ ವಿರುದ್ಧ ರೇಗಾಡಿದ್ದರು. ಇದರಿಂದ ಇಡೀ ತಂಡದ ವಾತಾವರಣವೇ ಹಾಳಾಗಿತ್ತು. ಮುಂಬೈ ಇಂಡಿಯನ್ಸ್ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

56
ಟೀಂ ಇಂಡಿಯಾದಲ್ಲಿ ಇದೇ ಕಿತ್ತಾಟ

ಟೀಂ ಇಂಡಿಯಾದಲ್ಲೂ ಇದೇ ಕಿತ್ತಾಟಗಳು ನಡೆದಿತ್ತು ಅನ್ನೋದು ರಹಸ್ಯವಾಗಿತ್ತು. ಆದರೆ ಟಿ20 ತಂಡದಲ್ಲಿ ಇದೀಗ ಮಾಡಿದ ಭಾರಿ ಬದಲಾವಣೆಯೊಂದಿಗೆ ಒಂದೊಂದೆ ಕಹಾನಿಗಳು ಹೊರಬರುತ್ತಿದೆ. ಇದೀಗ ಮುನಿಸಿಕೊಂಡ ಇಬ್ಬರು ತಂಡದಿಂದ ಹೊರಬಿದ್ದಿದ್ದಾರೆ.

66
ಪ್ಲಾನ್ ಬಿ ರೂಪಿಸಿದ ಬಿಸಿಸಿಐ

ಬಿಸಿಸಿಐ ಹಲವು ಪ್ರಯೋಗ ಮಾಡುತ್ತಿದೆ. ಈ ಪೈಕಿ ಮೂರು ತಂಡಕ್ಕೆ ಮೂರು ನಾಯಕ, ಮೂರು ಬೇರೆ ಬೇರೆ ತಂಡಗಳನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದನ್ನೇ ಮಾದರಿ ಮಾಡಲು ಮುಂದಾಗಿದೆ. ಈ ಮೂಲಕ ಎಲ್ಲಾ ಕಿತ್ತಾಟಕ್ಕೆ ಅಂತ್ಯ ಹಾಡಿ ಎಲ್ಲಾ ಮಾದರಿಯಲ್ಲಿ ನಂಬರ್ 1 ತಂಡ ಮಾಡುವ ಗುರಿ ಇಟ್ಟುಕೊಂಡಿದೆ. ಆದರೆ ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ, ಜಾರಿಯಾಗಲಿದೆ ಅನ್ನೋದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories