ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್

Published : Jun 06, 2026, 05:00 PM IST

ಟೀಂ ಇಂಡಿಯಾ ಟಿ20 ನಾಯಕತ್ವ ಹಾಗೂ ಟಿ20 ತಂಡದಿಂದಲೂ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಕ್ಯಾಪ್ಟೆನ್ಸಿ ನೀಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಮೊದಲ ಪೋಸ್ಟ್ ಮೂಲಕ ಮನದಾಳ ಹೇಳಿಕೊಂಡಿದ್ದಾರೆ.

PREV
16
ಟೀಂ ಇಂಡಿಯಾ ನಾಯಕತ್ವದಿಂದ ಸೂರ್ಯ ಔಟ್

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಟಿ20 ತಂಡ ಪ್ರಕಟಗೊಂಡಿದೆ. 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ಮಾತ್ರವಲ್ಲ ತಂಡದಿಂದಲೂ ಗೇಟ್ ಪಾಸ್ ನೀಡಲಾಗಿದೆ. ಸೂರ್ಯ ಬದಲು ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಿದ್ದಾರೆ.

26
ಸೂರ್ಯಕುಮಾರ್ ಯಾದವ್ ಮೊದಲ ಪೋಸ್ಟ್

ಟೀಂ ಇಂಡಿಯಾ ನಾಯಕ ಹಾಗೂ ತಂಡದಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್ ಯಾದವ್ ಮೊದಲ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಹೊಸ ತಂಡದ ಪೋಸ್ಟರ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ಸವಾಲು ಎದುರಿಸಲು ಹೊರಟ ತಂಡಕ್ಕೆ ಶುಭಕೋರಿದ್ದಾರೆ.

36
ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಪ್ರತಿಭಾನ್ವಿತ ತಂಡಕ್ಕೆ ಶುಭಾಶಯಗಳು. ಮುಂಬರುವ ಸವಾಲು ಎದುರಿಸಲು ಆಲ್ ದಿ ಬೆಸ್ಟ್ ಎಂದು ಸೂರ್ಯಕುಮಾರ್ ಯಾದವಾ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಹೇಳಿದ್ದಾರೆ. ಈ ಮೂಲಕ ತಂಡದಿಂದ ಹೊರಬಿದ್ದರೂ ತಂಡಕ್ಕೆ ಸೂರ್ಯಕುಮಾರ್ ಯಾದವ್ ಶುಭಕೋರಿ ಪಾಸಿಟೀವ್ ಆಗಿ ತೆಗೆದುಕೊಂಡಿದ್ದಾರೆ.

46
ವೈಭವ್ ಸೂರ್ಯವಂಶಿ ಆಟ ನೋಡಲು ಕಾತರ

ಟೀಂ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಿರುವ 15ರ ಬಾಲಕ ವೈಭವ್ ಸೂರ್ಯವಂಶಿ ಕುರಿತು ಸೂರ್ಯಕುಮಾರ್ ಯಾದವ್ ಪೋಸ್ಟ್ ಮಾಡಿದ್ದಾರೆ. ಈ ಸ್ಥಾನವನ್ನು ನೀವು ಗಳಿಸಿದ್ದೀರಿ. ನಿಮ್ಮ ಅದ್ಭುತ ಪಯಣ ನೋಡಲು ಕಾತರನಾಗಿದ್ದೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

56
ಟೀಂ ಇಂಡಿಯಾ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದ್ರ, ವರುಣ್ ಚಕ್ರವರ್ತಿ, ರವಿ ಬಿಶ್ನೋಯ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ

66
ಜೂನ್ 26 ರಿಂದ ಟೂರ್ನಿ

ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಟೂರ್ನಿ ಜೂನ್ 26 ರಿಂದ ಆರಂಭಗೊಳ್ಳಲಿದೆ. ಎರಡು ಟಿ20 ಪಂದ್ಯ ಆಯೋಜಿಸಲಾಗಿದೆ. ಜೂನ್ 26 ಹಾಗೂ ಜೂನ್ 28 ರಂದು ಎರಡು ಟಿ20 ಪಂದ್ಯ ನಡೆಯಲಿದೆ. ಬೆಲ್‌ಫಾಸ್ಟ್ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories