ಸೋಲಿನಲ್ಲೂ ವಿಶ್ವದಾಖಲೆ ಬರೆದ ಶ್ರೀಲಂಕಾ ಕ್ರಿಕೆಟ್ ತಂಡ..!

Suvarna News   | Asianet News
Published : Jul 02, 2021, 04:38 PM IST

ನವದೆಹಲಿ: ಮಾಜಿ ಏಕದಿನ ವಿಶ್ವಕಪ್ ಚಾಂಪಿಯನ್‌ ಶ್ರೀಲಂಕಾ ಕ್ರಿಕೆಟ್‌ ತಂಡ ಇತ್ತೀಚಿನ ದಿನಗಳಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸೋತು ಸುಣ್ಣವಾಗಿ ಹೋಗಿದೆ. ಒಂದು ಕಾಲದಲ್ಲಿ ಅರ್ಜುನ ರಣತುಂಗ, ಸನತ್ ಜಯಸೂರ್ಯ, ಸಂಗಕ್ಕರ, ಜಯವರ್ಧನೆ, ಚಮಿಂದ ವಾಸ್‌, ಮುತ್ತಯ್ಯ ಮುರುಳೀಧರನ್ ಅವರಂತಹ ದಿಗ್ಗಜ ಆಟಗಾರರು ಇದ್ದ ತಂಡದಲ್ಲೀಗ ಶೂನ್ಯ ಭಾವ. ಇದೀಗ ಲಂಕಾ ಕ್ರಿಕೆಟ್ ತಂಡವು ಸೋಲಿನಲ್ಲಿ ವಿಶ್ವದಾಖಲೆ ಬರೆದಿದೆ.  

PREV
18
ಸೋಲಿನಲ್ಲೂ ವಿಶ್ವದಾಖಲೆ ಬರೆದ ಶ್ರೀಲಂಕಾ ಕ್ರಿಕೆಟ್ ತಂಡ..!

ಶ್ರೀಲಂಕಾ ಕ್ರಿಕೆಟ್ ತಂಡವು ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯವನ್ನು ಸೋಲುವ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿದೆ.

28

ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ ತಂಡವು 428ನೇ ಸೋಲು ಅನುಭವಿಸಿದೆ.

38

ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಹಿಂದಿಕ್ಕಿ ಅತಿಹೆಚ್ಚು ಸೋಲು ಕಂಡ ತಂಡ ಎನ್ನುವ ಕುಖ್ಯಾತಿಗೆ ಶ್ರೀಲಂಕಾ ಪಾತ್ರವಾಗಿದೆ.

48

ಇದುವರೆಗೂ ಒಟ್ಟು 860 ಏಕದಿನ ಪಂದ್ಯಗಳನ್ನಾಡಿರುವ ಶ್ರೀಲಂಕಾ 390 ಗೆಲುವು ಹಾಗೂ 428 ಸೋಲುಗಳನ್ನು ಕಾಣುವ ಮೂಲಕ ಅತಿ ಹೆಚ್ಚು ಸೋಲುಕಂಡ ತಂಡ ಎನ್ನುವ ವಿಶ್ವದಾಖಲೆ ಬರೆದಿದೆ.

58

ಇನ್ನು ಭಾರತ ಕ್ರಿಕೆಟ್‌ ತಂಡವು 427 ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ತಂಡವು 414 ಸೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
 
68

ಭಾರತವು ಇದುವರೆಗೂ 993 ಪಂದ್ಯಗಳನ್ನು ಅಂದರೆ ಶ್ರೀಲಂಕಾಗಿಂತ 133 ಹೆಚ್ಚು ಪಂದ್ಯಗಳನ್ನಾಡಿ 427 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿದೆ.

78

ಏಕದಿನ ಸರಣಿಗೂ ಮುನ್ನ ಇಂಗ್ಲೆಂಡ್ ಎದುರು ಶ್ರೀಲಂಕಾ ಕ್ರಿಕೆಟ್‌ ತಂಡವು 3 ಪಂದ್ಯಗಳ ಟಿ20 ಸರಣಿಯನ್ನಾಡಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು.

88

ಇನ್ನು ಟಿ20 ಕ್ರಿಕೆಟ್‌ನಲ್ಲೂ ಅತಿ ಹೆಚ್ಚು ಸೋಲು ಕಂಡ ಕುಖ್ಯಾತಿ ಶ್ರೀಲಂಕಾ ಹೆಸರಿನಲ್ಲಿಯೇ ಇದೆ. ಶ್ರೀಲಂಕಾ 70 ಪಂದ್ಯಗಳಲ್ಲಿ ಸೋಲು ಕಂಡರೆ, ವೆಸ್ಟ್ ಇಂಡೀಸ್ 67 ಹಾಗೂ ಪಾಕಿಸ್ತಾನ 65 ಟಿ20 ಪಂದ್ಯಗಳಲ್ಲಿ ಸೋಲನುಭವಿಸಿದೆ
 
click me!

Recommended Stories