ರಿಷಭ್‌ ಪಂತ್‌ - ಸಿರಾಜ್‌ : ಯುಂಗ್‌ ಕ್ರಿಕೆಟಿಗರ ಲಕ್ಷುರಿ ಕಾರುಗಳು!

First Published Jun 27, 2021, 4:16 PM IST

ಟೀಮ್‌ ಇಂಡಿಯಾದ ಆಟಗಾರರು ಜನಪ್ರಿಯತೆ ಹಾಗೂ ಗಳಿಕೆ ಎರಡರಲ್ಲೂ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಆಟಗಾರ ಪರಿಶ್ರಮ ಹಾಗೂ ಸಾಧನೆಗೆ ಅನುಗುಣವಾಗಿ ಹೆಚ್ಚು ಹಣ, ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ. ಒಬ್ಬ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಲಕ್ಷಾಂತರ ಹಣ ಸಂಪಾದನೆ ಶುರಮಾಡುತ್ತಾನೆ.   ಕಳೆದ ಕೆಲವು ವರ್ಷಗಳಲ್ಲಿ ಅನೇಕ ಯುವ ಆಟಗಾರರು ಟೀಮ್‌ ಇಂಡಿಯಾಕ್ಕೆ ಸೇರ್ಪಡೆ ಆಗಿದ್ದು  ಸಖತ್‌ ಫೇಮಸ್‌ ಆಗಿದ್ದಾರೆ. ಅವರ ಆಟದ ಜೊತೆ ಲೈಫ್‌ಸ್ಟೈಲ್‌ ಸಹ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟ್ ತಂಡದ  ಯುವ ಆಟಗಾರ ಯಾವ ಕಾರುಗಳನ್ನು ಹೊಂದಿದ್ದಾರೆ ಗೊತ್ತಾ?

ರಿಷಭ್ ಪಂತ್ (Ford Mustang GT):ಟೀಮ್‌ ಇಂಡಿಯಾದ ಯುಂಗ್‌ ವ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್ ಪಂತ್‌ರ ಆಟಮಾತ್ರವಲ್ಲದೆ ಅದ್ದೂರಿ ಜೀವನಶೈಲಿಯೂ ಚರ್ಚೆಯಲ್ಲಿದೆ. ಇವರು ಹಳದಿ ಬಣ್ಣದ ಫೋರ್ಡ್ ಮುಸ್ತಾಂಗ್ ಜಿಟಿ ಕಾರನ್ನು ಹೊಂದಿದ್ದಾರೆ. ಇದಲ್ಲದೆ, Mercedes-Benz GLC SUV ಸಹ ಹೊಂದಿದ್ದಾರೆ.
undefined
ಮೊಹಮ್ಮದ್ ಸಿರಾಜ್ (BMW 520d) :ಕಳೆದ ವರ್ಷ ಆಸ್ಟ್ರೇಲಿಯಾ ಟೂರ್‌ ಸಮಯದಲ್ಲಿ ಟೀಮ್‌ಗೆ ಎಂಟ್ರಿ ಪಡೆದ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಸರಣಿ ಗೆದ್ದ ನಂತರ ಸ್ವತಃ ಬಿಎಂಡಬ್ಲ್ಯು 520 ಡಿ ಕಾರನ್ನು ಖರೀದಿಸಿದರು ಮತ್ತು ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ, ಸರಣಿಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಮಹೀಂದ್ರಾ ಥಾರ್ ಉಡುಗೊರೆಯಾಗಿ ನೀಡಲಾಯಿತು.
undefined
ಟಿ ನಟರಾಜನ್ (Mahindra Thar) :ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾಟೂರ್‌ ಸಮಯದಲ್ಲಿ ಟೀಮ್‌ಗೆ ಕಾಲಿಟ್ಟ ಯುವ ಬೌಲರ್ ಟಿ ನಟರಾಜನ್ ಮಹೀಂದ್ರಾದಿಂದ ಥಾರ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ.
undefined
ಸೂರ್ಯಕುಮಾರ್ ಯಾದವ್ (Land Rover Range Rover Velar) :ಬಹಳ ಸಮಯದಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ ಈ ವರ್ಷದ ಮಾರ್ಚ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಖರೀದಿಸಿದ್ದಾರೆ.
undefined
ಶ್ರೇಯಸ್ ಅಯ್ಯರ್ (Audi S5) :ಭಾರತೀಯ ತಂಡದ ಆಟಗಾರ ಮತ್ತು ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅದರಲ್ಲಿ ಆಡಿ ಎಸ್ 5 ಅವರ ನೆಚ್ಚಿನ ಕಾರು. ಇದಲ್ಲದೆ ಅವರ ಬಳಿ 35 ಲಕ್ಷದ ಬಿಎಂಡಬ್ಲ್ಯು ಕಾರು ಕೂಡ ಇದೆ.
undefined
ಶಾರ್ದುಲ್ ಠಾಕೂರ್ (Mahindra Thar) :ವರ್ಷ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಮಾಡಿದ 6 ಆಟಗಾರರಿಗೆ ಮಹೀಂದ್ರಾ ಥಾರ್ ಉಡುಗೊರೆ ನಿಡಲಾಗಿದೆ. ಇದರಲ್ಲಿ ಶಾರ್ದುಲ್ ಠಾಕೂರ್ ಕೂಡ ಒಬ್ಬರು. ಅವರು ಸಿಲ್ವರ್‌ ಕಲರ್‌ ಮಹೀಂದ್ರಾ ಥಾರ್ ಹೊಂದಿದ್ದಾರೆ ಶಾರ್ದುಲ್‌. ಈ ಸರಣಿಯಲ್ಲಿ ಅವರು ಮೂರು ವಿಕೆಟ್ ಪಡೆದರು ಮತ್ತು ವಾಷಿಂಗ್ಟನ್ ಸುಂದರ್ ಜೊತೆ 123 ರನ್ ಪಾರ್ಟನರ್‌ಶಿಪ್‌ ಹಂಚಿಕೊಂಡರು
undefined
ಇಶಾನ್ ಕಿಶನ್ (BMW X5) :ಯುವ ಆಟಗಾರ ಇಶಾನ್ ಕಿಶನ್ ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನೆಡೆದ ಮ್ಯಾಚ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಂಡರು. ವರದಿಗಳ ಪ್ರಕಾರ, ಇಶಾನ್ ಕಿಶನ್ ಇತ್ತೀಚೆಗೆ ಬಿಎಂಡಬ್ಲ್ಯು ಎಕ್ಸ್ 5ಖರೀದಿಸಿದ್ದಾರೆ.
undefined
click me!