ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿ!

First Published Sep 17, 2020, 5:39 PM IST

ಭಾರತ ಕ್ರಿಕೆಟ್‌ ತಂಡ  ಕಂಡ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ  ರವಿಚಂದ್ರನ್ ಅಶ್ವಿನ್. ಇವರ ಸ್ಪಿನ್‌ ಮೋಡಿಗೆ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಬಲಿಯಾಗುತ್ತಿದ್ದರು. 17 ಸೆಪ್ಟೆಂಬರ್ 1986 ರಂದು ಜನಿಸಿದ  ಆಲ್‌ರೌಂಡರ್ ಅಶ್ವಿನ್‌ ತಮಿಳುನಾಡಿನವರು. ಈ ಅಂತರರಾಷ್ಟ್ರೀಯ ಕ್ರಿಕೆಟಿಗ ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಈ ಸಮಯದಲ್ಲಿ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು  ಇಲ್ಲಿವೆ.

ರವಿಚಂದ್ರನ್ ಅಶ್ವಿನ್ ಭಾರತ ಕಂಡ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು.
undefined
350 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳು ಮತ್ತು 150 ಏಕದಿನ ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ 2011 ರ ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
undefined
2014 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಅಶ್ವಿನ್‌ 2013 ಮತ್ತು 2015-17ರಲ್ಲಿ ಐಸಿಸಿ ಟೆಸ್ಟ್ ತಂಡದಲ್ಲಿದ್ದರು.
undefined
2016 ರಲ್ಲಿ, ಅವರು ವರ್ಷದ ಐಸಿಸಿ ಟೆಸ್ಟ್ ಪ್ಲೇಯರ್ ಮತ್ತು ವರ್ಷದ ಐಸಿಸಿ ಕ್ರಿಕೆಟ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಜೊತೆಗೆ 2016-17ನೇ ಸಾಟ್ ಸಿಯಾಟ್ ಇಂಟರ್ನ್ಯಾಷನಲ್ ಕ್ರಿಕೆಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
undefined
2015 ರಲ್ಲಿ, ಶ್ರೀಲಂಕಾದ ಕುಮಾರ್ ಸಂಗಾಕ್ಕರ ಭಾರತ ವಿರುದ್ಧ ತಮ್ಮ ಲಾಸ್ಟ್‌ ಟೆಸ್ಟ್ ಸರಣಿಯನ್ನು ಆಡುತ್ತಿದ್ದಾಗ, ಅವರನ್ನು ನಾಲ್ಕು ಬಾರಿ ಅಶ್ವಿನ್ ಔಟ್ ಮಾಡಿದರು.
undefined
ಯಶಸ್ವಿ ಕ್ರಿಕೆಟಿಗ ಮೊದಲು ಫುಟ್ಬಾಲ್ ಆಡುವುದನ್ನು ಇಷ್ಟಪಡುತ್ತಿದ್ದರು ಎಂದು ಅವರ ಫ್ರೆಂಡ್ಸ್‌ ಹೇಳುತ್ತಾರೆ.
undefined
ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಮರೆಯಾಗಿದ್ದರೂ, ಇನ್ನೂ ಟೆಸ್ಟ್ ತಂಡದಲ್ಲಿದ್ದಾರೆ ಅಶ್ವಿನ್‌.
undefined
ಅಶ್ವಿನ್ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್ ಕೆರಿಯರ್‌ ಆಗಿ ಆರಿಸಿಕೊಳ್ಳುವ ಮೊದಲು ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್‌ನಲ್ಲಿ ಉದ್ಯೋಗದಲ್ಲಿದ್ದರು.
undefined
ಅಪ್ಪಟ್ಟ ಸಸ್ಯಾಹಾರಿ ರವಿಚಂದ್ರನ್ ಅಶ್ವಿನ್, ಬಹುಃಶ ಇದು ಅವರ ಬ್ರಾಹ್ಮಣ ಸಂಸ್ಕೃತಿಯ ಪ್ರಭಾವವಾಗಿರಬಹುದು.
undefined
ಅಶ್ವಿನ್ ತನ್ನ ಬಾಲ್ಯದ ಗೆಳೆಯ ಪ್ರಿತಿಯನ್ನು ಮದುವೆಯಾಗಿದ್ದಾರೆ.
undefined
ಶಾಲೆಯಲ್ಲಿ ತಾನು ತುಂಬಾ ತುಂಟನಾಗಿದ್ದೆ ಎಂದು ಸ್ವತಹ ಅವರೇ ಹಿಂದೊಮ್ಮೆ ಒಪ್ಪಿಕೊಂಡಿದ್ದಾರೆ. ಎಂಟನೇ ತರಗತಿಯಲ್ಲಿದ್ದಾಗ ಅವರ ತುಂಟತನ ತಡೆಯಲು ಸಾಧ್ಯವಿರಲಿಲ್ಲ ಎಂದು ಹೆಂಡತಿಯೂ ಹೇಳಿದ್ದಾರೆ.
undefined
click me!