ಈ ಭಾರತೀಯ ಕ್ರಿಕೆಟಿಗರು ಹೈಲೀ ಕ್ವಾಲಿಫೈಡ್‌!

First Published Sep 16, 2020, 7:01 PM IST

ಸಾಮಾನ್ಯವಾಗಿ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿಯಿದ್ದರೆ, ಕೆಲವರು ಶೈಕ್ಷಣಿಕವಾಗಿ ಹಿಂದುಳಿರುತ್ತಾರೆ. ಆದರೆ ಟೀಮ್‌ ಇಂಡಿಯಾದ ಈ ಕ್ರಿಕೆಟಿಗರು ಇದಕ್ಕೆ ಹೊರತಾಗಿದ್ದಾರೆ. ಅಶ್ವಿನ್ನಿಂದ ಶ್ರೀನಾಥ್ ಮತ್ತು ಕುಂಬ್ಳೆ ಮತ್ತು ಇನ್ನೂ ಅನೇಕರು ಈ ಭಾರತೀಯ ಕ್ರಿಕೆಟಿಗರು ಆಟದಲ್ಲಿ ಮಾತ್ರವಲ್ಲ, ಪಾಠದಲ್ಲೂ ಮುಂದೆ. ಈ ಭಾರತೀಯ ಕ್ರಿಕೆಟರ್ಸ್‌ ಹೈಲೀ ಕ್ವಾಲಿಫೈಡ್. ಇಲ್ಲಿದೆ ಇವರ ಶೈಕ್ಷಣೀಕ ವಿವರ.

ಕ್ರಿಕೆಟ್ ಕ್ರೀಡೆಯು ಪ್ರತಿಭಾವಂತ ಕ್ರಿಕೆಟಿಗರಿಂದ ರೂಪುಗೊಳ್ಳುತ್ತದೆ, ಅವರು ತಮ್ಮ ಉತ್ತಮ ಕ್ರಿಕೆಟಿಂಗ್ ಕೌಶಲ್ಯದಿಂದ ರಂಜಿಸುತ್ತಾರೆ. ಇದಕ್ಕಾಗಿ ಅವರು ಚಿಕ್ಕ ವಯಸ್ಸಿನಿಂದ ಸಾಕಷ್ಟು ಶ್ರಮ ಹಾಕಿರುತ್ತಾರೆ.
undefined
ಕೆಲವು ಕ್ರಿಕೆಟಿಗರು ಆಟವಾಡಲು ಶಿಕ್ಷಣವನ್ನು ಸಹ ಕಡೆಗಣಿಸಿದ್ದಾರೆ. ಆದರೆ ಕೆಲವರು ತಮ್ಮ ಓದಿಗೆ ತೊಂದರೆಯಾಗದಂತೆ, ಆಟದಲ್ಲಿ ಮುಂದುವರಿದ ಉದಾಹರಣೆಗಳಿವೆ. ಇವರು ಭಾರತೀಯ ತಂಡದ ಹೈಲೀಕ್ವಾಲಿಫೈಡ್‌ ಕ್ರಿಕೆಟಿಗರು.
undefined
ಅನಿಲ್ ಕುಂಬ್ಳೆ: ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ 600 ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
undefined
ಮುರಳಿ ವಿಜಯ್: ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ ತಮಿಳುನಾಡಿನ ಮುರಳಿ ವಿಜಯ್ ಐಪಿಎಲ್‌ನಲ್ಲೂ ಸಖತ್‌ ಫೇಮಸ್. ಭಾರತೀಯ ಟೆಸ್ಟ್ ತಂಡದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಪ್ರತಿಭಾನ್ವಿತ ಓಪನರ್ ಆಗಿರುವುದರ ಜೊತೆಗೆ, ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕಪೂರ್ವ ಪದವಿ ಪಡೆದಿದ್ದಾರೆ.
undefined
ರವಿಚಂದ್ರನ್ ಅಶ್ವಿನ್: ತಮಿಳುನಾಡಿನ ಮತ್ತೊಬ್ಬ ಆಟಗಾರ ಯಶಸ್ವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಉತ್ತಮ ಶೈಕ್ಷಣಿಕ ಅರ್ಹತೆ ಪಡೆದಿದ್ದಾರೆ. 350ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ ಮಾಹಿತಿ ತಂತ್ರಜ್ಞಾನದಲ್ಲಿ ಡಿಗ್ರಿ ಹೋಲ್ಡರ್‌. ಕ್ರಿಕೆಟ್‌ ಅನ್ನು ಕೆರಿಯರ್‌ ಆಗಿ ಆಯ್ಕೆ ಮಾಡಿಕೊಳ್ಳುವ ಮೊದಲು ಅಶ್ವಿನ್‌ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್‌ನಲ್ಲಿ ಉದ್ಯೋಗದಲ್ಲಿದ್ದರು.
undefined
ರಾಹುಲ್ ದ್ರಾವಿಡ್: ಭಾರತೀಯ ಕ್ರಿಕೆಟ್‌ನ 'ದಿ ವಾಲ್' ರಾಹುಲ್ ದ್ರಾವಿಡ್. ಕಾಮರ್ಸ್‌ ಡಿಗ್ರಿಯ ನಂತರ ಮಾಸ್ಟರ್ಸ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅನ್ನು ಯಶಸ್ವಿಯಾಗಿ ಪೂರೈಸಿದರು.
undefined
ಜವಾಗಲ್ ಶ್ರೀನಾಥ್: ಮಾಜಿ ಭಾರತೀಯ ಜಾವಗಲ್ ಶ್ರೀನಾಥ್ ಎಲ್ಲರಿಗಿಂತ ಹೆಚ್ಚು ಕ್ವಾಲಿಫೈಡ್‌ ಕ್ರಿಕೆಟಿಗರಲ್ಲಿ ಒಬ್ಬರು. ಭಾರತಕ್ಕೆ 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಫಾಸ್ಟ್‌ ಬೌಲರ್‌ ಇವರು.ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ಡಿಗ್ರಿಯೊಂದಿಗೆ ಕಂಪ್ಯೂಟರ್ ಎಂಜಿನಿಯರ್ ಕೂಡ ಹೌದು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
undefined
click me!