ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯ; ನಾಳೆಯಿಂದ ಕ್ರಿಕೆಟ್ ಆಡಲು ಮುಕ್ತ!

First Published | Sep 13, 2020, 5:45 PM IST

ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮೇಲಿದ್ದ ನಿಷೇಧ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ  ವಿಧಿಸಿದ್ದ ನಿಷೇಧ ಅಂತ್ಯಗೊಂಡಿದೆ. ನಾಳೆಯಿಂದ(ಸೆ.14) ಶ್ರೀಶಾಂತ್ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಈ ಕುರಿತು ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ ವೇಗಿ ಶ್ರೀಶಾಂತ್ ಮೇಲೆ ವಿಧಿಸಿದ್ದ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯಗೊಂಡಿದೆ. ಇಂದು (ಸೆಪ್ಟೆಂಬರ್ 13) ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯಗೊಂಡಿದೆ.
undefined
ಸತತ 7 ವರ್ಷ ಕ್ರಿಕೆಟ್‌ನಿಂದ ದೂರ ಉಳಿದ ಕೇರಳ ಎಕ್ಸ್‌ಪ್ರೆಸ್ ಶ್ರೀಶಾಂತ್ ನಾಳೆಯಿಂದ(ಸೆಪ್ಟೆಂಬರ್ 14) ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದಾರೆ.
undefined

Latest Videos


ನಿಷೇಧ ಅಂತ್ಯಗೊಂಡ ಬೆನ್ನಲ್ಲೇ ಶ್ರೀಶಾಂತ್ ಸಂತಸ ಹಂಚಿಕೊಂಡಿದ್ದಾರೆ. ಇಂದಿನಿಂದ ನಾನು ಸ್ವತಂತ್ರನಾಗಿದ್ದೇನೆ. ನನಗೆ ಸಿಕ್ಕ ಅತೀ ದೊಡ್ಡ ರಿಲೀಫ್ ಇದು. ಇತರರಿಗೆ ಎಷ್ಟು ಅರ್ಥವಾಗುತ್ತೋ ಗೊತ್ತಿಲ್ಲ, ಆದರೆ ನನಗೆ ಸಿಕ್ಕ ಅತಿ ದೊಡ್ಡ ಗೆಲುವಿದು ಎಂದು ಶ್ರೀಶಾಂತ್ ಹೇಳಿದ್ದಾರೆ.
undefined
ಫ್ರೆಂಡ್ಲಿ ಮ್ಯಾಚ್‌ನಲ್ಲೂ ನಾನು ಮೋಸ ಮಾಡಿಲ್ಲ. ಪ್ರತಿ ಎಸೆತದಲ್ಲಿ ರನ್ ಹೋಗಲಿ ಎಂದು ಹಾಕಿಲ್ಲ, ಸೋಲನ್ನು ಇಷ್ಟಪಡುವುದಿಲ್ಲ. ನಾನೀಗ ಎಲ್ಲಾ ಆರೋಪಗಳಿಂದ ಮುಕ್ತನಾಗಿದ್ದೇನೆ. ನಾನು ಅತೀ ಹೆಚ್ಚು ಇಷ್ಟಪಡುವ ಕ್ರಿಕೆಟ್‌ನ್ನು ಮತ್ತೆ ಪ್ರತಿನಿಧಿಸುತ್ತೇನೆ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.
undefined
2013ರಲ್ಲಿ ಶ್ರೀಶಾಂತ್ ಮೇಲೆ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಕೇಳಿ ಬಂದಿತ್ತು. ಇತ್ತ ಬಿಸಿಸಿಐ ಶ್ರೀಶಾಂತ್ ಸೇರಿದಂತೆ ಮೂವರು ಕ್ರಿಕೆಟಿಗರ ಮೇಲೆ ಅಜೀವ ನಿಷೇದ ಶಿಕ್ಷೆ ವಿಧಿಸಿತು.
undefined
ಸುದೀರ್ಘ ತನಿಖೆ ವಿಚಾರಣೆ ಬಳಿಕ ಕೋರ್ಟ್ ಶ್ರೀಶಾಂತ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಸಿಸಿಐ ನಿಷೇಧ ವಾಪಸ್ ಪಡೆಯಲಿಲ್ಲ. ಮತ್ತೆ ಶ್ರೀಶಾಂತ್ ಕಾನೂನು ಹೋರಾಟ ನಡೆಸಿದ್ದರು.
undefined
ಶ್ರೀಶಾಂತ್ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಬಿಸಿಸಿಐ ಅಜೀವ ನಿಷೇಧ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸಿತು. ಸದ್ಯ 37 ವರ್ಷದ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡಲು ಬಯಸಿದ್ದಾರೆ. ಕೊರೋನಾ ಕಾರಣ ದೇಸಿ ಟೂರ್ನಿಗಳು ರದ್ದಾಗಿದೆ. ಹೀಗಾಗಿ ಮತ್ತೆ ಕಮ್‌ಬ್ಯಾಕ್ ಮತ್ತಷ್ಟು ಕಠಿಣವಾಗಿದೆ.
undefined
ಮೇ ತಿಂಗಳಿನಿಂದ ಶ್ರೀಶಾಂತ್ ಅಭ್ಯಾಸ ಆರಂಭಿಸಿದ್ದಾರೆ. ಕೊರೋನಾ ಕಾರಣ ಶ್ರೀಶಾಂತ್ ದೇಸಿ ಅಥವಾ ಸ್ಥಳೀಯ ಟೂರ್ನಿ ಆಡಲು ಅವಕಾಶ ಇಲ್ಲದಾಗಿದೆ. ಹೀಗಾಗಿ ವಿದಾಯಕ್ಕೆ ಯೋಚಿಸಿದ್ದರು. ಮತ್ತೆ ನಿರ್ಧಾರ ಬದಲಿಸಿದ ಶ್ರೀ, ಕ್ರಿಕೆಟ್ ಆಡಿಯೇ ಸಿದ್ದ ಎಂದು ಅಚಲ ನಿರ್ಧಾರ ಮಾಡಿದ್ದಾರೆ.
undefined
ನಿಷೇಧದ ಬಳಿಕ ಶ್ರೀಶಾಂತ್ ನಟನಾಗಿ ಹೆಚ್ಚು ಸದ್ದು ಮಾಡಿದ್ದಾರೆ. ಮಲೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.
undefined
2016ರ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀಶಾಂತ್ ಬಿಜೆಪಿ ಅಭ್ಯರ್ಥಿಯಾಗಿ ತಿರುವಂತನಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಶಿವಕುಮಾರ್ ವಿರುದ್ಧ 11,710 ಮತಗಳಿಂದ ಸೋಲು ಅನುಭವಿಸಿದರು.
undefined
click me!