#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

Suvarna News   | Asianet News
Published : Jul 12, 2021, 06:34 PM IST

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಯಾಕೋ ಏನೋ ಸರಿಯಾಗಿ ಕಾಲಕೂಡಿ ಬಂದಿಲ್ಲ ಅಂತ ಕಾಣುತ್ತೆ. ಇಂಡೋ-ಲಂಕಾ ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐ ಭಾರತ ಬಿ ತಂಡಕ್ಕೆ ಲಂಕಾಗೆ ಕಳಿಸಿ ಅವಮಾನ ಮಾಡಿದೆ ಎಂದು ಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ಕೊಂಕು ನುಡಿದಿದ್ದರು. ಇದಾದ ಬಳಿಕ ಕೋವಿಡ್‌ ಕಾರಣದಿಂದಾಗಿ ಟೂರ್ನಿ 5 ದಿನಗಳ ಮುಂದೂಡಲ್ಪಟ್ಟಿತ್ತು. ಜುಲೈ 13ರಿಂದ ಆರಂಭವಾಗಬೇಕಿದ್ದ ಏಕದಿನ ಸರಣಿಯು ಜುಲೈ 18ಕ್ಕೆ ಮುಂದೂಡಲ್ಪಟ್ಟಿದೆ. ಇದೆಲ್ಲದರ ನಡುವೆ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆಗಳಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

PREV
18
#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿಯು ಜುಲೈ 18ರಿಂದ ಆರಂಭವಾಗಲಿದೆ.

28

ಶಿಖರ್ ಧವನ್‌ ನೇತೃತ್ವದ ಟೀಂ ಇಂಡಿಯಾವು ಲಂಕಾ ಪ್ರವಾಸದಲ್ಲಿ 6 ಸೀಮಿತ ಓವರ್‌ಗಳ ಪಂದ್ಯವನ್ನಾಡಲಿದ್ದು, ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ಬಳಿಕ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

38

ವಿರಾಟ್ ಕೊಹ್ಲಿ ನೇತೃತ್ವದ ತಂಡವು ಇಂಗ್ಲೆಂಡ್ ಎದುರಿನ ಸರಣಿಗೆ ಪ್ರವಾಸ ಕೈಗೊಂಡಿರುವುದರಿಂದ, ಶಿಖರ್ ಧವನ್‌ ಲಂಕಾ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

48

ಪೂರ್ವ ನಿಗದಿಯಂತೆ ಏಕದಿನ ಸರಣಿಯು ಜುಲೈ 13ರಿಂದ ಆರಂಭವಾಗಬೇಕಿತ್ತು. ಆದರೆ ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಹಾಗೂ ವಿಡಿಯೋ ಅನಾಲಿಸ್ಟ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಸರಣಿಯನ್ನು ಜುಲೈ 18ಕ್ಕೆ ಮುಂದೂಡಲಾಗಿತ್ತು.

58

ಇದೇ ವೇಳೆ ಏಕದಿನ ಸರಣಿಯು ಮಧ್ಯಾಹ್ನ 2.30ಕ್ಕೆ ಆರಂಭವಾಗಬೇಕಿತ್ತು ಹಾಗೆಯೇ ಟಿ20 ಸರಣಿಯ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಬೇಕೆಂದು ನಿಗದಿ ಪಡಿಸಲಾಗಿತ್ತು.

68

ಇದೀಗ ಪಂದ್ಯ ಆರಂಭದ ಸಮಯವನ್ನು ಬದಲಿಸಲಾಗಿದ್ದು, ಏಕದಿನ ಪಂದ್ಯಗಳು ಅರ್ಧಗಂಟೆ ತಡವಾಗಿ ಅಂದರೆ ಮಧ್ಯಾಹ್ನ 3 ಗಂಟೆ ಆರಂಭವಾಗಲಿವೆ. ಇನ್ನು ಟಿ20 ಪಂದ್ಯಗಳು ಒಂದು ಗಂಟೆ ತಡವಾಗಿ ಅಂದರೆ 8 ಗಂಟೆಗೆ ಆರಂಭವಾಗಲಿವೆ.

78

ಏಕದಿನ ಪಂದ್ಯಗಳ ಸರಣಿಯು ಕ್ರಮವಾಗಿ ಜುಲೈ 18, 20 ಹಾಗೂ 23ರವರೆಗೆ ನಡೆಯಲಿವೆ. ಇನ್ನು ಮೂರು ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ಜುಲೈ 25, 27 ಹಾಗೂ 29ರಂದು ನಡೆಯಲಿದೆ. 

88

ಈ ಎಲ್ಲಾ ಪಂದ್ಯಗಳಿಗೆ ಕೊಲಂಬೊದ ಆರ್‌. ಪ್ರೇಮದಾಸ ಮೈದಾನ ಆತಿಥ್ಯವನ್ನು ವಹಿಸಲಿದೆ. ಈ ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್, ಸೋನಿ ಟೆನ್‌ ಹಾಗೂ ದೂರದರ್ಶನದಲ್ಲಿ ನೇರಪ್ರಸಾರವಾಗಲಿದೆ.

click me!

Recommended Stories