ಅದ್ಭುತ ಕ್ಯಾಚ್‌ ಹಿಡಿದು ವೈರಲ್‌ ಆದ ಹರ್ಲೀನ್ ಡಿಯೋಲ್‌ ಯಾರು?

First Published Jul 12, 2021, 11:50 AM IST

ಭಾರತದ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಖತ್‌ ಸುದ್ದಿಯಲ್ಲಿದ್ದಾರೆ.ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ 20 ಸರಣಿಯಲ್ಲಿ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್ ಈ ದಿನಗಳಲ್ಲಿ ನ್ಯೂಸ್‌ನಲ್ಲಿದೆ. ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಆಮಿ ಜೋನ್ಸ್ ಅವರನ್ನು  ಔಟ್ ಮಾಡಲು ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಅವರ ಈ ಅತ್ಯುತ್ತಮ ಕ್ಯಾಚ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. 

ಕೇವಲ 2 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಹಾರ್ಲೀನ್‌ ತನ್ನ ಆಟ ಮತ್ತು ಸೌಂದರ್ಯದಿಂದ ಯಾವಾಗಲೂ ಚರ್ಚೆಯಲ್ಲಿರುತ್ತಾರೆ.
undefined
ಇವರು ವಿಶ್ವದ ಅತ್ಯಂತ ಸುಂದರ ಮಹಿಳಾ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
undefined
ಭಾರತ ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ಟಿ 20 ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿ ಆಮಿ ಜೋನ್ಸ್ 19 ನೇ ಓವರ್‌ನಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆದರೆ ಹಾರ್ಲೀನ್ ಡಿಯೋಲ್ ಕ್ಯಾಚ್ ಮಾಡಿ ಔಟ್‌ ಮಾಡಿದರು.
undefined
ಲಾಂಗ್‌ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ಲೀನ್ ಅದ್ಭುತವಾಗಿ ಕ್ಯಾಚ್ ತೆಗೆದುಕೊಂಡರು.
undefined
ಆಮಿ ಚೆಂಡನ್ನು ಸಿಕ್ಸರ್‌ಗೆ ಹೊಡೆಯಲು ಪ್ರಯತ್ನಿಸಿದಾಗ, ಚೆಂಡು ಬೌಂಡರಿ ದಾಟಿತ್ತು. ಆದರೆ ಹಾರ್ಲೀನ್ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು ಬೌಂಡರಿಯೊಳಗೆ ಎಸೆದು ನಂತರ ಚೆಂಡನ್ನು ನೆಲಕ್ಕೆ ಬೀಳುವ ಮೊದಲು ಮತ್ತೆ ಬೌಂಡರಿ ಒಳಗೆ ನೆಗೆದು ಅದನ್ನು ಹಿಡಿದರು. ಕೆಲವೇ ಸೆಕೆಂಡುಗಳಲ್ಲಿ, ಈ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
undefined
ಈ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೋತರೂ, ಹಾರ್ಲೀನ್ ಅವರ ಈ ಕ್ಯಾಚ್ ಸಖತ್‌ ಫೇಮಸ್‌ ಆಯಿತು.
undefined
ಇದಲ್ಲದೆ, ಅವರು 24 ಎಸೆತಗಳಲ್ಲಿ 17 ರನ್ ಗಳಿಸುವ ಮೂಲಕ ಈ ಪಂದ್ಯದಲ್ಲಿ ನಾಟ್ ಔಟ್ ಆಗಿದ್ದಾರೆ.
undefined
ಹಾರ್ಲೀನ್ 8 ವರ್ಷ ವಯಸ್ಸಿನಿಂದ ಕ್ರಿಕೆಟ್ ಆಡುವ ಉತ್ಸಾಹ ಹೊಂದಿದ್ದರು. ಮೊದಲಿಗೆ ಬೀದಿ ಹುಡುಗರು ಮತ್ತು ಅವಳ ಸಹೋದರನೊಂದಿಗೆ ಕ್ರಿಕೆಟ್ ಆಡುತ್ತಿದ್ದ ಅವರು 13 ನೇ ವಯಸ್ಸಿನಲ್ಲಿ, ಹಿಮಾಚಲದಲ್ಲಿ ಕ್ರಿಕೆಟ್‌ಗೆ ವೃತ್ತಿಪರ ತರಬೇತಿ ಪಡೆಯಲು ಪ್ರಾರಂಭಿಸಿದರು.
undefined
ಹಾರ್ಲೀನ್ ಡಿಯೋಲ್ ಅವರು ಫೆಬ್ರವರಿ 22, 2019 ರಂದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಪಾದಾರ್ಪಣೆ ಮಾಡಿದರು.
undefined
ಅವರು ಭಾರತ ತಂಡಕ್ಕಾಗಿ ಒಂದು ಏಕದಿನ ಮತ್ತು 10 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಏಕದಿನ ಪಂದ್ಯಗಳಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಟಿ 20 ಯಲ್ಲಿ ಅವರು 127 ರನ್ ಮತ್ತು 6 ವಿಕೆಟ್ ಪಡೆದಿದ್ದಾರೆ.
undefined
ಆಟದ ಜೊತೆ ತನ್ನ ಸೌಂದರ್ಯದಿಂದಲೂ ಎಲ್ಲರ ಗಮನ ಸೆಳೆದಿರುವ 23 ವರ್ಷದ ಹಾರ್ಲೀನ್‌ ಯಾವುದೇ ಬಾಲಿವುಡ್ ನಟಿಗಿಂತ ಕಡಿಮೆಯಿಲ್ಲ.
undefined
ಲಕ್ಷಾಂತರ ಯುವ ಅಭಿಮಾನಿಗಳನ್ನು ಹೊಂದಿರುವ ಈಕೆ ಇನ್ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
undefined
ಬಾಲ್ಯದಿಂದಲೂ ಆಟದ ಬಗ್ಗೆ ಒಲವಿರುವ ಹಾರ್ಲಿನ್‌ ಕ್ರಿಕೆಟ್ ಮಾತ್ರವಲ್ಲದೆ ಹಾಕಿ, ಫುಟ್ಬಾಲ್, ಬಾಸ್ಕೆಟ್‌ಬಾಲ್ ಕೂಡ ಆಡಿದ್ದರು. ಶಾಲೆಯ ಅತ್ಯುತ್ತಮ ಕ್ರೀಡಾಪಟು ಆಗಿದ್ದರು. ಭಾರತೀಯ ತಂಡದಲ್ಲೂ ಬ್ಯಾಟಿಂಗ್‌ನ ಹೊರತಾಗಿ, ಹಲವು ಬಾರಿ ಬೌಲಿಂಗ್‌ ಕೂಡ ಮಾಡುತ್ತಾರೆ.
undefined
ಆಟದ ಜೊತೆ ಪಾಠದಲ್ಲೂ ಮುಂದಿರುವ ಹಾರ್ಲೀನ್‌ ಅವರು 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳಲ್ಲಿ 80% ಅಂಕಗಳನ್ನು ಗಳಿಸಿದ್ದರು.
undefined
ಇದಲ್ಲದೆ ಚಂಡೀಗಡದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಎರಡನೇ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
undefined
click me!