ಶೋಯೆಬ್ ಮಲಿಕ್ - ಸಾನಿಯಾ ಮಿರ್ಜಾ ಡಿವೋರ್ಸ್? ಇನ್‌ಸ್ಟಾ ಬಯೋದಲ್ಲಿ ಪತ್ನಿ ಹೆಸರು ಕೈಬಿಟ್ಟ ಪಾಕ್‌ ಕ್ರೆಕಿಟಿಗ

Published : Aug 03, 2023, 05:32 PM IST

ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik)  ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಬಯೋವನ್ನು ಬದಲಾಯಿಸಿದ್ದಾರೆ ಮತ್ತು ಪತ್ನಿ ಸಾನಿಯಾ ಮಿರ್ಜಾ (Sania Mirza) ಹೆಸರನ್ನು ತೆಗೆದುಹಾಕಿದ್ದಾರೆ.  ಈ ಮೂಲಕ ಕ್ರಿಕೆಟಿಗ ಶೋಯೆಬ್ ಮಲಿಕ್  ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನದ ವದಂತಿಯನ್ನು ಮತ್ತೆ ಹುಟ್ಟುಹಾಕಿದ್ದಾರೆ. 

PREV
18
 ಶೋಯೆಬ್ ಮಲಿಕ್ - ಸಾನಿಯಾ ಮಿರ್ಜಾ ಡಿವೋರ್ಸ್? ಇನ್‌ಸ್ಟಾ ಬಯೋದಲ್ಲಿ ಪತ್ನಿ ಹೆಸರು ಕೈಬಿಟ್ಟ ಪಾಕ್‌ ಕ್ರೆಕಿಟಿಗ

ಪಾಕಿಸ್ತಾನದ ಮಾಜಿ ನಾಯಕ ಮತ್ತು ಆಲ್‌ರೌಂಡರ್ ಶೋಯೆಬ್ ಮಲಿಕ್ ಅವರು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗಿನ  ಡಿವೋರ್ಸ್  ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.

28

ಸೋಶಿಯಲ್ ಮೀಡಿಯಾದಲ್ಲಿ ಬಯೋ ಬದಲಾಯಿಸಿದ ನಂತರ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನದ ವದಂತಿ ಮತ್ತೆ ಹುಟ್ಟಿ ಕೊಂಡಿದೆ.

38

ಈ ಹಿಂದೆ, ಶೋಯೆಬ್ ಮಲಿಕ್ ಅವರ ಇನ್‌ಸ್ಟಾಗ್ರಾಮ್ ಬಯೋನಲ್ಲಿ husband to a superwoman @mirzasaniar' ಎಂದು ಬರೆದುಕೊಂಡಿದ್ದರು, ಅದನ್ನು ಈಗ Father to One True Blessing ಎಂದು ಬದಲಾಯಿಸಿದ್ದಾರೆ.

48

T20 ಆಲ್‌ರೌಂಡರ್ ಶೋಯೆಬ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಯೋವನ್ನು ಬದಲಾಯಿಸಿದ್ದರಿಂದ ಸೆಲೆಬ್ರಿಟಿ ದಂಪತಿ ಡಿವೋರ್ಸ್‌ನತ್ತ ಸಾಗುತ್ತಿದ್ದಾರೆ ಎಂಬ ವದಂತಿಗಳು ಮತ್ತೊಮ್ಮೆ ಎದ್ದಿವೆ.

58

ಸ್ವಲ್ಪ ಸಮಯದ ಹಿಂದೆ ಕೂಡ ಪ್ರತ್ಯೇಕತೆಯ ವದಂತಿಗಳು ಆನ್‌ಲೈನ್‌ನಲ್ಲಿ ಹರಡಲು ಪ್ರಾರಂಭಿಸಿದಾಗ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸುದ್ದಿಯಲ್ಲಿದ್ದರು. 

68

ಕಳೆದ ವರ್ಷ ನವೆಂಬರ್‌ನಿಂದ ಸಾನಿಯಾ ಅವರ ನಿಗೂಢ ಸಂದೇಶಗಳು ವದಂತಿಗಳನ್ನು ಹೆಚ್ಚಿಸಿವೆ, ಆದರೂ ಈ ವರದಿಗಳ ಬಗ್ಗೆ ಶೋಯೆಬ್ ಅಥವಾ ಸಾನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

78

ಏಪ್ರಿಲ್ 12, 2010 ರಂದು, ಭಾರತದ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಸಮಾರಂಭದಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆಯಾದರು.

88

ನಂತರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ವಲೀಮಾ ಸಮಾರಂಭವೂ ನಡೆಯಿತು. ದಂಪತಿಗಳ ಮೊದಲ ಮಗು ಇಜಾನ್ 2018 ರಲ್ಲಿ ಜನಿಸಿದರು.

Read more Photos on
click me!

Recommended Stories