ಬೆಂಗಳೂರು: ಕ್ರಿಕೆಟಿಗರಿಗೂ ಹಾಗೂ ಬಾಲಿವುಡ್ ನಟಿಯರಿಗೂ ಇರುವ ಲಿಂಕ್ ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಇದಕ್ಕೆ ತದ್ವಿರುದ್ದ ಎನ್ನುವಂತೆ ಡೇಟಿಂಗ್ ನಡೆಸಿ ಕೊನೆಗೆ ಅವರನ್ನು ಮದುವೆಯಾಗದೇ ಕೈಕೊಟ್ಟಿದ್ದೂ ಇದೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ತಮ್ಮ ಪತ್ನಿ ರಿತು ಅವರಿಂದ ದೂರವಾಗಿ ಸಾಕಷ್ಟು ಸಮಯಗಳೇ ಕಳೆದಿವೆ. ಇದಾದ ಬಳಿಕ ಬಾಲಿವುಡ್ ನಟಿ ನಿಮ್ರತ್ ಕೌರ್ ಜತೆ ರವಿ ಶಾಸ್ತ್ರಿ ಹೆಸರು ಥಳಕು ಹಾಕಿಕೊಂಡಿತ್ತು.
210
ಕೆಲ ವರ್ಷಗಳ ಕಾಲ ರವಿಶಾಸ್ತ್ರಿ ಹಾಗೂ ನಿಮ್ರತ್ ಕೌರ್ ಡೇಟಿಂಗ್ ನಡೆಸುತ್ತಿರುವುದರ ಕುರಿತಂತೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಈ ಜೋಡಿಯ ಮೇಲೆ ಯಾರ ಕೆಂಗಣ್ಣು ಬಿತ್ತೋ ಗೊತ್ತಿಲ್ಲ, ಇಬ್ಬರು ಕೆಲ ಸಮಯದ ಬಳಿಕ ದೂರವಾದರು. ಹೀಗಾಗಿ ಇವರ ಲವ್ ಸ್ಟೋರಿ ಡೇಟಿಂಗ್‌ನಲ್ಲೇ ಅಂತ್ಯವಾಯಿತು.
310
2. ನಗ್ಮಾ-ಸೌರವ್ ಗಂಗೂಲಿ:
2000ನೇ ಇಸವಿಯ ಆರಂಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಜತೆ ನಟಿ ನಗ್ಮಾ ಹೆಸರು ಥಳಕು ಹಾಕಿಕೊಂಡಿತ್ತು. ಗುಟ್ಟಾಗಿ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದರು ಎಂದು ಆಗ ಮಾಧ್ಯಮಗಳಲ್ಲಿ ವರದಿಯಾಗಿತ್ತು.
410
ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕರಾಗಿ ನೇಮಕವಾದ ಬಳಿಕ ಮಾಧ್ಯಮಗಳ ಗಮನ ದಾದಾ ಮೇಲೆ ಹೆಚ್ಚು ಎನ್ನುವಂತೆ ಆಯಿತು. ಕೊನೆಗೆ ಅದೇನಾಯಿತೋ ಗೊತ್ತಿಲ್ಲ ನಗ್ಮಾ ಹಾಗೂ ಸೌರವ್ ಗಂಗೂಲಿ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.
510
3. ಯುವರಾಜ್ ಸಿಂಗ್-ದೀಪಿಕಾ ಪಡುಕೋಣೆ:
2008ರಲ್ಲಿ ಯುವರಾಜ್ ಸಿಂಗ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅವರ ಜತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವೆ ಡೇಟಿಂಗ್ ನಡೆಯುತ್ತಿತ್ತು. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಸಂದರ್ಭದಲ್ಲಿ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದರು.
610
ಒಂದು ಕಡೆ ಯುವಿ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದರೆ, ದೀಪಿಕಾ ಪಡುಕೋಣೆ ಸಹಾ ಬಾಲಿವುಡ್‌ನಲ್ಲಿ ಯಶಸ್ಸಿನ ಮೆಟ್ಟಿಲು ಏರಲಾರಂಭಿಸಿದರು. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದ ಈ ಜೋಡಿ, ಆಮೇಲೆ ಡೇಟಿಂಗ್‌ನಲ್ಲೇ ಈ ಲವ್ ಸ್ಟೋರಿ ಅಂತ್ಯವಾಯಿತು. ಯುವಿ, ಹೇಜಲ್ ಕೀಚ್ ಅವರನ್ನು ವರಿಸಿದರೆ, ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರ ಕೈಹಿಡಿದರು.
710
4. ಸೋಫಿಯಾ ಹೈಯತ್-ರೋಹಿತ್ ಶರ್ಮಾ:
2012ರ ವೇಳೆಯಲ್ಲಿ ವಿವಾದಿತ ನಟಿ ಸೋಫಿಯಾ ಹೈಯತ್ ಅವರು ತಾವು ಕ್ರಿಕೆಟಿಗ ರೋಹಿತ್ ಶರ್ಮಾ ಜತೆ ಡೇಟಿಂಗ್ ನಡೆಸುತ್ತಿರುವುದಾಗಿ ಹೇಳಿದ ಹೇಳಿಕೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಈ ಸಂಬಂಧ ಹೆಚ್ಚು ಹೊತ್ತು ಉಳಿಯಲಿಲ್ಲ.
810
ರೋಹಿತ್ ಶರ್ಮಾ ಹಾಗೂ ಸೋಫಿಯಾ ಹೈಯತ್ ಯಾವ ಕಾರಣಕ್ಕೆ ಬೇರ್ಪಟ್ಟರು ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ಸಂದರ್ಶನದಲ್ಲಿ ಸೋಫಿಯಾ, ತಾವು ರೋಹಿತ್ ಜತೆ ಡೇಟಿಂಗ್ ಮಾಡುವಾಗ ಜಂಟಲ್‌ಮನ್ ರೀತಿ ಕಾಣುತ್ತಿದ್ದರು ಎಂದು ಹೇಳಿದ್ದರು. ಸದ್ಯ ರೋಹಿತ್ ಶರ್ಮಾ, ರಿತಿಕಾ ಸಜ್ದೇ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಒಂದು ಸುಂದರ ಮಗುವಿದೆ.
910
5. ಇಶಾ ಶರ್ವಾನಿ-ಜಹೀರ್ ಖಾನ್:
ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್, ಬಾಲಿವುಡ್ ನಟಿ ಸಾಗರಿಕ ಘಾಟ್ಗೆ ಅವರನ್ನು ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಆದರೆ ಜಾಕ್, ಸಾಗರಿಕಾ ಅವರನ್ನು ಮದುವೆಯಾಗುವ ಮುನ್ನ ನಟಿ ಇಶಾ ಶರ್ವಾನಿ ಜತೆ ಡೇಟಿಂಗ್ ನಡೆಸಿದ್ದು ಗುಟ್ಟಾಗಿ ಏನೂ ಉಳಿದಿಲ್ಲ.
1010
ಜಹೀರ್ ಖಾನ್ ಹಾಗೂ ಇಶಾ ಶರ್ವಾನಿ ಬರೋಬ್ಬರಿ 8 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಇಬ್ಬರು ಮದುವೆಗೆ ವೆಡ್ಡಿಂಗ್ ಕಾರ್ಡ್ ಕೂಡಾ ಪ್ರಿಂಟ್ ಹಾಕಿಸಿದ್ದರು ಎಂದೆಲ್ಲಾ ವರದಿಯಾಗಿತ್ತು. ಆದರೆ ಕಾರಣಾಂತರದಿಂದ ಈ ಜೋಡಿ ಪ್ರೇಮಕಥೆ ಮದುವೆ ಎನ್ನುವ ಬಂಧನಕ್ಕೆ ಒಳಗಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.