ನಿಮ್ಮ ನೆಚ್ಚಿನ ಟೀಂ ಇಂಡಿಯಾ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ಧೋನಿ, ವಿರಾಟ್, ರೋಹಿತ್ ಎಜುಕೇಶನ್

First Published | Aug 3, 2023, 1:59 PM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನಕ್ಕಿಳಿದರೆ, ಎದುರಾಳಿ ಯಾವುದೇ ತಂಡವಿದ್ದರೂ ಮೈಚಳಿ ಬಿಟ್ಟು ಆಡುತ್ತಾರೆ. ಕ್ರಿಕೆಟಿಗರ ಪರ್ಸನಲ್ ಲೈಫ್, ಲವ್ ಸ್ಟೋರಿ, ಬ್ರ್ಯಾಂಡ್ ಅಂಬಾಸಿಡರ್‌ಗಳ ಬಗ್ಗೆ ಗೊತ್ತಿರುತ್ತದೆ. ಆದರೆ ತಮ್ಮ ನೆಚ್ಚಿನ ಕ್ರಿಕೆಟಿಗರ ಶೈಕ್ಷಣಿಕ ಅರ್ಹತೆ ಎಷ್ಟು ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿರುವುದಿಲ್ಲ. ನಾವಿಂದು ಆ ಇಂಟ್ರೆಸ್ಟಿಂಗ್ ಸಂಗತಿಯನ್ನು ಮುಂದಿಡುತ್ತಿದ್ದೇವೆ ನೋಡಿ.
 

1. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಓದಿದ್ದು ಕೇವಲ 12ನೇ ತರಗತಿ ಮಾತ್ರ. ತುಂಬಾ ಚಿಕ್ಕ ವಯಸ್ಸಿಗೆ ಟೀಂ ಇಂಡಿಯಾ ಪರ ಆಡಲು ಅವಕಾಶ ಪಡೆದ ಹಿಟ್‌ ಮ್ಯಾನ್‌, ಪಿಯುಸಿ ಬಳಿಕ ಎಜುಕೇಶನ್‌ ಮುಂದುವರೆಸಲಿಲ್ಲ.

2. ಕೆ ಎಲ್ ರಾಹುಲ್‌:

ಟೀಂ ಇಂಡಿಯಾ ತಾರಾ ಕ್ರಿಕೆಟಿಗ ಕೆ ಎಲ್ ರಾಹುಲ್‌, ಮಂಗಳೂರಿನ ಸೂರತ್ಕಲ್‌ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡಿದ್ದರು. ಇದಾದ ಬಳಿಕ ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದುಕೊಂಡಿದ್ದಾರೆ.

Latest Videos


3. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 9ನೇ ತರಗತಿವರೆಗೂ ದೆಹಲಿಯ ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ಕೊಹ್ಲಿ 12ನೇ ತರಗತಿವರೆಗೂ ಸೇವಿಯರ್ ಕಾನ್ವೆಂಟ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.
 

4. ಸೂರ್ಯಕುಮಾರ್ ಯಾದವ್:

ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಮುಂಬೈನ ಆಟೋಮಿಕ್‌ ಎನರ್ಜಿ ಸೆಂಟ್ರಲ್ ಸ್ಕೂಲ್‌ನಲ್ಲಿ ಪ್ರಾಥಮಿಕ & ಪ್ರೌಢ ಶಿಕ್ಷಣ ಪಡೆದರು. ಇದಾದ ಬಳಿಕ ಸೂರ್ಯ, ಮುಂಬೈನ ಪಿಲ್ಲೈ ಆರ್ಟ್ಸ್‌, ಕಾಮರ್ಸ್‌ & ಸೈನ್ಸ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ(ಬಿ ಕಾಂ)ನಲ್ಲಿ ಪದವಿ ಪಡೆದಿದ್ದಾರೆ.

5. ಎಂ ಎಸ್ ಧೋನಿ

ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, ರಾಂಚಿಯ ಡಿಎವಿ ಜವಹರ್ ವಿದ್ಯಾ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದರು. ಧೋನಿ ಎಸ್‌ಎಸ್‌ಎಲ್ಸಿಯಲ್ಲಿ 66% ಮಾರ್ಕ್ಸ್ ಪಡೆದುಕೊಂಡಿದ್ದರು. ಇನ್ನು ಇಂಟರ್‌ ಮೀಡಿಯೇಟ್‌ ಪರೀಕ್ಷೆಯಲ್ಲಿ ಮಹಿ 56% ಅಂಕ ಪಡೆದಿದ್ದರು.
 

6. ರಿಷಭ್ ಪಂತ್:

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ರೂರ್ಕಿಯಲ್ಲಿರುವ ಸೇಂಟ್ ಗೇಬ್ರಿಯೆಲ್ ಅಕಾಡೆಮಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಇದಾದ ಬಳಿಕ ಡೆಲ್ಲಿ ಯೂನಿವರ್ಸಿಟಿಯ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ,ಕಾಂ ಪದವಿ ಪೂರೈಸಿದ್ದಾರೆ.
 

7. ಹಾರ್ದಿಕ್ ಪಾಂಡ್ಯ

ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಎಂ.ಕೆ ಹೈಸ್ಕೂಲ್‌ನಲ್ಲಿ ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿದ್ದರು. ಇದಾದ ಬಳಿಕ ಕ್ರಿಕೆಟ್‌ನತ್ತ ಗಮನ ಹರಿಸಲು ಪಾಂಡ್ಯ, ಓದಿಗೆ ಟಾಟಾ ಮಾಡಿದರು.

8. ರವಿಚಂದ್ರನ್ ಅಶ್ವಿನ್‌:

ಟೀಂ ಇಂಡಿಯಾ ಹಾಲಿ ಕ್ರಿಕೆಟಿಗರ ಪೈಕಿ ಅಶ್ವಿನ್‌, ಅತಿಹೆಚ್ಚು ಶಿಕ್ಷಣ ಪಡೆದ ಆಟಗಾರ ಎನಿಸಿದ್ದಾರೆ. ಅಶ್ವಿನ್, ಎಸ್‌ಎಸ್‌ಎನ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್‌ಫಾರ್ಮೇಶನ್‌ ಟೆಕ್ನಾಲಜಿ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
 

9. ಯುಜುವೇಂದ್ರ ಚಹಲ್:

ಟೀಂ ಇಂಡಿಯಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್, ಝಿಂದ್‌ನ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದಾರೆ. ಹರ್ಯಾಣದ ಮಹಾತ್ಮ ಗಾಂಧಿ  ಕಾಲೇಜ್ ಆಫ್ ಹೆಲ್ತ್‌ ಸೈನ್ಸ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.  

10. ಸಚಿನ್ ತೆಂಡುಲ್ಕರ್‌

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರಿಂದಾಗಿ, ಕೇವಲ 12ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಲು ಸಾಧ್ಯವಾಯಿತು. ತೆಂಡುಲ್ಕರ್ ಮುಂಬೈನ ಶಾರದಾಶ್ರಮ ವಿದ್ಯಾಮಂದಿರದಲ್ಲಿ ಪಿಯುಸಿ ಪೂರೈಸಿದ್ದರು.
 

11. ಯುವರಾಜ್ ಸಿಂಗ್

2011ರ ವಿಶ್ವಕಪ್ ಹೀರೋ ಯುವರಾಜ್ ಸಾಕಷ್ಟು ಬಾರಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು. ಕ್ರಿಕೆಟ್ ಆಸಕ್ತಿಯಿಂದಾಗಿ ಹೈಸ್ಕೂಲ್ ಹಂತದಲ್ಲಿ ಯುವಿ ಓದಿಗೆ ಗುಡ್‌ಬೈ ಹೇಳಿದ್ದರು. ಯುವಿ ಹೈಸ್ಕೂಲ್ ಓದಿದ್ದು ಚಂಡೀಘಡದ ಡಿಎವಿ ಪಬ್ಲಿಕ್ ಶಾಲೆಯಲ್ಲಿ.

click me!