ಅಪ್ಪ ತೆಗೆದುಕೊಂಡ ಆ ಒಂದು ದಿಟ್ಟ ನಿರ್ಧಾರ ನನ್ನ ಹಣೆಬರಹ ಬದಲಿಸಿತು - ಸಂಜು ಭಾವುಕ

Published : Jul 04, 2026, 09:26 PM IST

ತುಳಿಯೋರ ನಡುವೆ ಕ್ರಿಕೆಟ್‌ನಲ್ಲಿ ಕ್ಲಿಕ್ ಆಗಿರುವ ಹಿಂದಿನ ಅಸಲಿ ಸಿಕ್ರೇಟ್ ಅನ್ನು ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ. ನನ್ನ ತಂದೆ ತೆಗೆದುಕೊಂಡು ಆ ಒಂದು ನಿರ್ಧಾರದಿಂದ ನನ್ನ ಬದುಕೇ ಬದಲಾಯ್ತು ಎಂದು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ದೆಹಲಿಯಲ್ಲಿ ಆಗಿದ್ದೇನು? ಕಂಪ್ಲೀಟ್ ಸ್ಟೋರಿ ಇಲ್ಲಿದೆ.

PREV
15
ಸಂಜು ಸಕ್ಸಸ್ ಸಿಕ್ರೇಟ್

ಇವತ್ತು ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್! ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ. ಈ ಯಶಸ್ಸಿನ ಹಿಂದೆ ದೆಹಲಿಯ ಕ್ರಿಕೆಟ್ ಮೈದಾನಗಳಲ್ಲಿ ಅನುಭವಿಸಿದ ನೋವು ಮತ್ತು ತಿರಸ್ಕಾರದ ಕಥೆಯಿದೆ. ಅರ್ಹ ಪ್ರತಿಭೆಗಳ ಕನಸನ್ನು ಹೊಸಕಿ ಹಾಕುತ್ತದೆ ಎಂಬ ಹಣೆಪಟ್ಟಿ ಹೊತ್ತಿರುವ ದೆಹಲಿ ಕ್ರಿಕೆಟ್ ಸಂಸ್ಥೆ (DDCA), ಅಂದು ಸಂಜು ಸ್ಯಾಮ್ಸನ್ ಅವರನ್ನೂ ಕಡೆಗಣಿಸಿತ್ತು. ಆದರೆ, ಅವರ ತಂದೆ ತೆಗೆದುಕೊಂಡ ಒಂದು ಕ್ಷಣದ ನಿರ್ಧಾರ ಸಂಜು ಅವರ ಹಣೆಬರಹ ಬದಲಿಸಿತು.

25
ದೆಹಲಿ ಕ್ರಿಕೆಟ್‌ನಲ್ಲಿ ಕನಸು ಕಂಡಿದ್ದ ಬಾಲಕ

ಇತ್ತೀಚೆಗೆ JioStar ಜೊತೆ ಮಾತನಾಡಿದ ಸಂಜು ಸ್ಯಾಮ್ಸನ್, ತಮ್ಮ ಬಾಲ್ಯದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಶಾಲೆಯಲ್ಲಿದ್ದಾಗ ನನ್ನ ಗೆಳೆಯರು ಡಿಡಿಸಿಎ (DDCA) ಜಾಕೆಟ್ ಧರಿಸಿ ದೆಹಲಿ ತಂಡದ ಪರ ಆಡುವುದರ ಬಗ್ಗೆ ಮಾತನಾಡುತ್ತಿದ್ದರು. ಅದನ್ನು ನೋಡಿ ನನಗೂ ದೆಹಲಿ ಪರ ಆಡಬೇಕೆಂಬ ಹಂಬಲವಿತ್ತು. ನಾನು ಟ್ರಯಲ್ಸ್‌ಗಳಿಗೆ ಹೋಗುತ್ತಿದ್ದೆ, ರನ್ ಬಾರಿಸುತ್ತಿದ್ದೆ. ಎರಡು-ಮೂರು ಬಾರಿ ಸ್ಟೇಟ್ ಕ್ಯಾಂಪ್‌ಗೆ ಆಯ್ಕೆಯಾದರೂ, ಅಂತಿಮ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎಂದು ಸಂಜು ಬೇಸರ ವ್ಯಕ್ತಪಡಿಸಿದ್ದಾರೆ.

35
ತಂದೆಯ ಲೈಫ್ ಚೇಂಜಿಂಗ್ ನಿರ್ಧಾರ

ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ದೆಹಲಿ ಪೊಲೀಸ್ ಅಧಿಕಾರಿಯಾಗಿದ್ದರು. ದೆಹಲಿ ಕ್ರಿಕೆಟ್‌ನಲ್ಲಿ ರಾಜಕೀಯ ಅಥವಾ ಕಠಿಣ ಸ್ಪರ್ಧೆಯಿಂದ ಮಗನಿಗೆ ಅವಕಾಶ ಸಿಗುತ್ತಿಲ್ಲ ಎಂದು ಅರಿತ ಅವರು, ಅಂದು ಒಂದು ದೊಡ್ಡ ಸಾಹಸಕ್ಕೆ ಕೈಹಾಕಿದರು.

ಒಂದು ದಿನ ಟ್ರಯಲ್ಸ್ ಮುಗಿಸಿ ಬಂದ ನಂತರ ತಂಡದ ಪಟ್ಟಿ ಪ್ರಕಟವಾಯಿತು. ಅದರಲ್ಲಿ ನನ್ನ ಹೆಸರಿರಲಿಲ್ಲ. ನಾವೆಲ್ಲರೂ ಮೌನವಾಗಿ ಮನೆಗೆ ಬಂದೆವು. ಮನೆಗೆ ಬಂದ ತಕ್ಷಣ ನನ್ನ ತಂದೆ ಅಮ್ಮನಿಗೆ ಹೇಳಿದರು. ನಾವು ಕೇರಳಕ್ಕೆ ಶಿಫ್ಟ್ ಆಗೋಣ, ಇಲ್ಲಿ ಮಗನಿಗೆ ಭವಿಷ್ಯವಿಲ್ಲ ಎಂದು. ಆಗ ಅಮ್ಮ, ಮಕ್ಕಳು ಇನ್ನೂ 6ನೇ ತರಗತಿಯಲ್ಲಿದ್ದಾರೆ, ಕನಿಷ್ಠ 10ನೇ ತರಗತಿ ಮುಗಿಸಲಿ ಎಂದರು. ಆದರೆ ತಂದೆ ಕೇಳಲಿಲ್ಲ, ಇಲ್ಲ ನಾವು ಈಗಲೇ ಹೋಗಬೇಕು, ಮೂರು ದಿನದಲ್ಲಿ ಟಿಕೆಟ್ ಬುಕ್ ಮಾಡುತ್ತಿದ್ದೇನೆ ಎಂದು ಹಠ ಹಿಡಿದರು ಎಂದು ಸಂಜು ಆ ದಿನವನ್ನು ಸ್ಮರಿಸಿದ್ದಾರೆ.

45
ಕೇರಳದಲ್ಲಿ ಅರಳಿದ ಪ್ರತಿಭೆ

ತಂದೆಯ ಮಾತಿನಂತೆ ಇಡೀ ಕುಟುಂಬ ದೆಹಲಿ ಬಿಟ್ಟು ಕೇರಳಕ್ಕೆ ಶಿಫ್ಟ್ ಆಯಿತು. 6ನೇ ತರಗತಿಯಲ್ಲಿದ್ದ ಸಂಜು ಕೇರಳದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಇಲ್ಲಿ ಸಂಜು ಅವರ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿತು. ಪರಿಣಾಮವಾಗಿ, ಸಂಜು ಸ್ಯಾಮ್ಸನ್ ತಮ್ಮ 17ನೇ ವಯಸ್ಸಿನ ಮೊದಲೇ ಕೇರಳದ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಐಪಿಎಲ್ ಮತ್ತು ಭಾರತೀಯ ತಂಡದವರೆಗೆ ಅವರ ಪಯಣ ಸಾಗಿತು.

55
ತಿರಸ್ಕಾರವೇ ಯಶಸ್ಸಿನ ಮೆಟ್ಟಿಲು

ಅಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಸಂಜು ಅವರನ್ನು ತಿರಸ್ಕರಿಸದಿದ್ದರೆ, ಬಹುಶಃ ಇಂದಿನ ಈ ಸ್ಟಾರ್ ಆಟಗಾರ ನಮಗೆ ಸಿಗುತ್ತಿರಲಿಲ್ಲವೇನೋ! ದೆಹಲಿಯಲ್ಲಿ ಅನುಭವಿಸಿದ ಆ 'ಹಾರ್ಟ್‌ಬ್ರೇಕ್' ಸಂಜು ಸ್ಯಾಮ್ಸನ್ ಕುಟುಂಬಕ್ಕೆ ಒಂದು ದೊಡ್ಡ ತಿರುವು ನೀಡಿತು. ಇಂದು ಅವರು ಇಡೀ ಭಾರತದ ಹೆಮ್ಮೆಯ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories