ಸಚಿನ್ ತೆಂಡೂಲ್ಕರ್ ಅಂಜಲಿ ಜೋಡಿ ವಯಸ್ಸು ರಿವರ್ಸ್‌ ಗೇರ್‌ ಅಲ್ಲಿ ಹೋಗ್ತಿದ್ಯಾ?

First Published | Mar 4, 2024, 12:00 PM IST

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕೂಡ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಮುಕೇಶ್ ಅಂಬಾನಿ  ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಮಿಂಚಿದ್ದು, ಸಚಿನ್  ಅಂಜಲಿ ಜೋಡಿ ನೋಡಿದ ಅಭಿಮಾನಿಗಳು ಇವರ ವಯಸ್ಸು ರಿವರ್ಸ್ ಗೇರ್‌ನಲ್ಲಿ ಹೋಗ್ತಿದ್ಯಾ ಎಂದು ಕಾಮೆಂಟ್ ಮಾಡ್ತಿದ್ದಾರೆ. 

ಮುಕೇಶ್ ಅಂಬಾನಿ  ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆದು ಹೋಗಿದೆ. ಈ ಸಮಾರಂಭದಲ್ಲಿ ಭಾಗವಹಿಸದ ಗಣ್ಯರಿಲ್ಲ

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕೂಡ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಈ ವಿವಾಹ ಪೂರ್ವ ಸಮಾರಂಭದಲ್ಲಿ ಮಿಂಚಿದ್ದು, ಸಚಿನ್  ಅಂಜಲಿ ಜೋಡಿ ನೋಡಿದ ಅಭಿಮಾನಿಗಳು ಇವರ ವಯಸ್ಸು ರಿವರ್ಸ್ ಗೇರ್‌ನಲ್ಲಿ ಹೋಗ್ತಿದ್ಯಾ ಎಂದು ಕಾಮೆಂಟ್ ಮಾಡ್ತಿದ್ದಾರೆ. 

Tap to resize

ವಿವಾಹಪೂರ್ವ ಸಮಾರಂಭ ಮುಗಿಸಿ ಮುಂಬೈಗೆ ಹೊರಡುವ ವೇಳೆ ಪಾಪಾರಾಜಿ ಕ್ಯಾಮರಾಗೆ ಸೆರೆ ಸಿಕ್ಕಿ ಈ ಸುಂದರ ಕುಟುಂಬದ ಸ್ಟೈಲಿಶ್ ಲುಕ್‌ಗೆ ಜನ ಮನಸೋತಿದ್ದಾರೆ.

ಅಂಜಲಿ ತೆಂಡೂಲ್ಕರ್ ಕೆಂಪು ಬಣ್ಣದ ಟಾಪ್ ಹಾಗೂ ಶಾಲು, ಗೋಲ್ಡನ್ ಬಣ್ಣದ ಪ್ಯಾಂಟ್ ಧರಿಸಿ ಹಣೆಗೆ ಕೆಂಪು ಬಿಂದಿ ಇರಿಸಿ ನವ ತರುಣಿಯಂತೆ ಕಂಗೊಳಿಸುತ್ತಿದ್ದಾರೆ.  

ಇತ್ತ ಸಚಿನ್ ತೆಂಡೂಲ್ಕರ್‌ ಕೆನೆ ಅಥವಾ ಸಿಲ್ವರ್ ಮಿಶ್ರಿತ ಬಣ್ಣದ ಶೆರ್ವಾನಿ ಧರಿಸಿದ್ದು, ಚಿರಯುವಕನಂತೆ ಕಂಗೊಳಿಸ್ತಿದ್ದಾರೆ ಕ್ರಿಕೆಟ್ ಲೆಜೆಂಡ್.


ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಕಾರ್ಯಕ್ರಮಕ್ಕೆ ಗೈರಾಗಿದ್ದು, ಎಲ್ಲೂ ಕಾಣಿಸಿಲ್ಲ, ಈ ಹಿನ್ನೆಲೆಯಲ್ಲಿ ಕೆಲವರು ಅರ್ಜುನ್ ತೆಂಡೂಲ್ಕರ್ ಏಕೆ ಎಲ್ಲೂ ಕಾಣಿಸ್ತಿಲ್ಲ, ಮನೆಯಿಂದ ಹೊರಗೆ ಹಾಕಿದ್ರಾ ಹೇಗೆ ಎಂದು ಕಾಮೆಂಟ್ ಮಾಡ್ತಿದ್ದಾರೆ.

Sachin Tendulkar family

ಇನ್ನು ಸಚಿನ್ ಪುತ್ರಿ ಸಾರಾ ಲುಕ್ ನೋಡಿದ ಜನರಂತು ಫುಲ್ ಫಿದಾ ಆಗಿದ್ದಾರೆ. ಅಂಜಲಿ ಯಂಗರ್ ವರ್ಶನ್ ರೀತಿ ಇರುವ ಸಾರಾ ಅಪ್ಪನ ಬಟ್ಟೆಗೆ ಮ್ಯಾಚ್ ಆಗುವಂತೆ ಸುಂದರವಾದ ಧಿರಿಸು ಧರಿಸಿದ್ದು, ಹಾಲಿನಂತೆ ಹೊಳೆಯುವ ಆಕೆಯ ಮೈ ಬಣ್ಣಕ್ಕೂ ಧಿರಿಸಿಗೂ ಹೆಚ್ಚಿನ ವ್ಯತ್ಯಾಸ ಕಾಣಿಸ್ತಿಲ್ಲ, 

Sachin Tendulkar,

ಇತ್ತೀಚೆಗೆ ಸಚಿನ್ ಕುಟುಂಬ ಜಮ್ಮು ಕಾಶ್ಮೀರಕ್ಕೆ ಪ್ರವಾಸ ತೆರಳಿತ್ತು, ಅಲ್ಲೂ ಈ ಜೋಡಿ ಸುರಿಯುವ ಮಂಜಿನಲ್ಲಿ ಮಕ್ಕಳಂತೆ ಆಟವಾಡಿದರು, ಮಕ್ಕಳಾದ ಅರ್ಜುನ್ ಹಾಗೂ ಸಾರಾ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದು, ಮಕ್ಕಳಿಗೆ ಸ್ಪರ್ಧೆಯೊಡ್ಡುವಂತೆ ಈ ಜೋಡಿ ಲೈಫ್ ಎಂಜಾಯ್ ಮಾಡ್ತಿದೆ. 

Latest Videos

click me!