Round UP 2021: T20 ಕ್ರಿಕೆಟ್‌ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ನಲ್ಲಿ ಒಬ್ಬ ಭಾರತೀಯನೂ ಇಲ್ಲ..!

First Published Dec 17, 2021, 6:55 PM IST

2021 ರಲ್ಲಿ ಟಿ20 ಅಂತರಾಷ್ಟ್ರೀಯ (T20 International)  ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ (Team India) ಒಬ್ಬ ಆಟಗಾರನೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ತಂಡದ ನಾಯಕ ರೋಹಿತ್ ಶರ್ಮಾ (Rohit Shrama) ಹೆಸರು ಭಾರತೀಯ ಆಟಗಾರರಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ರೋಹಿತ್‌ ಶರ್ಮಾ T20 ಅಂತರಾಷ್ಟ್ರೀಯ ಕ್ರಿಕೆಟ್‌ನ 11 ಇನ್ನಿಂಗ್ಸ್‌ಗಳಲ್ಲಿ 38.54 ಸರಾಸರಿ ಮತ್ತು 150.88 ಸ್ಟ್ರೈಕ್ ರೇಟ್‌ನಲ್ಲಿ 424 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 5 ಅರ್ಧ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕವೂ ಬರಲಿಲ್ಲ. ಈ ಪಟ್ಟಿಯಲ್ಲಿ ರೋಹಿತ್ ನಂತರ ವಿರಾಟ್ ಕೊಹ್ಲಿ (Virat Kohli) 47 ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಈ ವರ್ಷ ಟಿ20ಯ 8 ಇನ್ನಿಂಗ್ಸ್‌ಗಳಲ್ಲಿ 74.75 ಸರಾಸರಿ ಮತ್ತು 132.88 ಸ್ಟ್ರೈಕ್ ರೇಟ್‌ನಲ್ಲಿ 299 ರನ್ ಗಳಿಸಿದ್ದಾರೆ. ಯಾವ ದೇಶದ ಯಾವ ಆಟಗಾರರು ಈ ವರ್ಷ ಈ ಲಿಸ್ಟ್‌ನಲ್ಲಿ ಸ್ಥಾನ ಗಳಿಸಿದ್ದಾರೆ ನೋಡಿ.

Mohammad Rizwan

1. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ):

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್  ಈ ವರ್ಷ ODI ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಹಾಗೂ ಅಲ್ಪಾವಧಿಯಲ್ಲಿಯೇ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

Babar Azam

2. ಬಾಬರ್ ಅಜಮ್ (ಪಾಕಿಸ್ತಾನ):

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ನಾಯಕತ್ವ ಮತ್ತು ಬ್ಯಾಟಿಂಗ್‌ಗೆ ಸಾಟಿಯಿಲ್ಲ. ಅವರು ತಮ್ಮ ನಾಯಕತ್ವದ ಸಾಮರ್ಥ್ಯದಿಂದ ಪಾಕಿಸ್ತಾನ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

న్యూజిలాండ్ ప్లేయర్ మార్టిన్ గుప్టిల్, మొదటిసారి ఐపీఎల్ ఆడేందుకు ఆసక్తి చూపించిన ఆస్ట్రేలియా ప్లేయర్ మార్నస్ లబుషేన్‌లతో పాటు రస్సీ వాన్ డే దుస్సేన్, మిచెల్ మెక్‌క్లెనగన్, మాథ్యూ వేడ్ వంటి ప్లేయర్లకు నిరాశే ఎదురైంది.

3. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್):

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ ಬಹಳ ಕಾಲದಿಂದ ಕ್ರಿಕೆಟ್ ಆಡುತ್ತಿದ್ದರೂ  ಇಂದಿಗೂ ಕಿವೀಸ್ ತಂಡಕ್ಕೆ ಅವರ ಅವಶ್ಯಕತೆ ಹಾಗೆಯೇ ಉಳಿದಿದೆ. ಅವರು ಓಪನಿಂಗ್‌ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ತ್ವರಿತ ಆರಂಭವನ್ನು ನೀಡುತ್ತಾರೆ, ಇದರಿಂದ ನಂತರದ ಬ್ಯಾಟ್ಸ್‌ಮನ್‌ಗಳು ಆರಾಮಾಗಿ ಆಡಬಹುದು.

4. ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ):

ಮಿಚೆಲ್ ಮಾರ್ಷ್ ತಮ್ಮ ಸ್ಥಿರ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡಕ್ಕೆ ಸಮಬಲ ಒದಗಿಸುತ್ತಿದ್ದಾರೆ. ಮಿಚೆಲ್ ಆಲ್ ರೌಂಡರ್ ಆಗಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಮತ್ತು ಅವರ ಪ್ರದರ್ಶನವನ್ನು ನೋಡಿದರೆ, ಅವರ ಭವಿಷ್ಯವು ತುಂಬಾ ಉಜ್ವಲವಾಗಿ ಕಾಣುತ್ತದೆ. 

Jos Butler

5. ಜೋಸ್ ಬಟ್ಲರ್ (ಇಂಗ್ಲೆಂಡ್):

ಜೋಸ್ ಬಟ್ಲರ್  ಅವರು ಅದ್ಭುತ ಬ್ಯಾಟ್ಸ್‌ಮನ್ ಮಾತ್ರವಲ್ಲ,  ಅವಶ್ಯಕತೆಗೆ ಅನುಗುಣವಾಗಿ ಮತ್ತು ತಂಡದಲ್ಲಿ ಬ್ಯಾಲೆನ್ಸ್‌ ಸಮತೋಲನವನ್ನು  ಮಾಡಲು ವಿಕೆಟ್‌ಕೀಪರ್‌ನ ಪಾತ್ರವನ್ನು ಸಹ ವಹಿಸುತ್ತಿದ್ದಾರೆ. ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಹೊಡೆಯುವ ಪ್ರತಿಭೆ ಅವರಲ್ಲಿದೆ. 
 

batsmen who scored the most runs in T20 International cricket in 2021

6. ಮೊಹಮ್ಮದ್ ನಯೀಮ್ (ಬಾಂಗ್ಲಾದೇಶ):

ಬಾಂಗ್ಲಾದೇಶದಂ ತಂಡದಲ್ಲಿ ಆಡುತ್ತಿರುವ ಮೊಹಮ್ಮದ್ ನಯೀಮ್ ಅವರ ಪ್ರದರ್ಶನವು ತುಂಬಾ ಪ್ರಭಾವಿತವಾಗಿದೆ. ಅವರು ನಿರಂತರವಾಗಿ ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸುತ್ತಿದ್ದಾರೆ ಮತ್ತು ನಿಧಾನವಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿದ್ದಾರೆ. 

4. Aiden Markram

7. ಏಡನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ):

ಏಡನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾದ ಸೀಮಿತ ಓವರ್‌ಗಳ ಕ್ರಿಕೆಟ್‌ನ ಪ್ರಮುಖ ಆಟಗಾರ. ತಮ್ಮ ಪ್ರದರ್ಶನದಿಂದ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಈ ವರ್ಷ ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಅರ್ಧಶತಕಗಳನ್ನು ಗಳಿಸಿದ್ದಾರೆ 

Quinton de Kock

8. ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ):

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ  ಕ್ವಿಂಟನ್ ಡಿ ಕಾಕ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ತಮ್ಮ ಅತ್ಯುತ್ತಮ ವಿಕೆಟ್ ಕೀಪಿಂಗ್ ಮತ್ತು ಬಲಿಷ್ಠ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿ ಲಾಂಗ್‌ ಶಾಟ್‌ಗಳ ಮೂಲಕ ಎದುರಾಳಿಗಳನ್ನು ಹೊಡೆಯುವ ಅವರ ತಂತ್ರ  ತಂಡಕ್ಕೆ ಮತ್ತು ಅವರಿಗೆ ಲಾಭದಾಯಕವಾಗಿದೆ.

9. ಮೊಹಮ್ಮದ್ ಮಹಮ್ಮದುಲ್ಲಾ (ಬಾಂಗ್ಲಾದೇಶ):

ಮೊಹಮ್ಮದ್ ಮಹಮ್ಮದುಲ್ಲಾ ಕಳೆದ ಕೆಲವು ಸಮಯದಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟಿ20 ಹೊರತಾಗಿ, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಸೇರಿದ್ದಾರೆ ಎಂಬ ಅಂಶದಿಂದ ಅವರ ಸಾಮರ್ಥ್ಯವನ್ನು ಅಳೆಯಬಹುದು.

Evin Lewis

10. ಎವಿನ್ ಲೆವಿಸ್ (ವೆಸ್ಟ್ ಇಂಡೀಸ್):

ಅಮೋಘ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿರುವ ಎವಿನ್ ಲೂಯಿಸ್ ಈ ವರ್ಷ ಟಿ20 ಕ್ರಿಕೆಟ್ ನಲ್ಲಿ 155.73ರ  ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಶಾಟ್ ಆಯ್ಕೆ ಅದ್ಭುತವಾಗಿದೆ ಮತ್ತು ಅವರ ಬ್ಯಾಟಿಂಗ್ ನೋಡುವುದು ಕ್ರಿಕೆಟ್‌ ಪ್ರಿಯರಿಗೆ ಹಬ್ಬ.

click me!