World's Most Admired List: ಜಗತ್ತಿನ ಅಚ್ಚುಮೆಚ್ಚಿನ ಕ್ರೀಡಾಪಟುಗಳಲ್ಲಿ ತೆಂಡುಲ್ಕರ್‌ಗೆ ಮೂರನೇ ಸ್ಥಾನ

Suvarna News   | Asianet News
Published : Dec 17, 2021, 01:52 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಪರಿಗಣಿಸಿದರೆ, ಸಚಿನ್ ತೆಂಡುಲ್ಕರ್ (Sachin Tendulkar) ಅವರನ್ನು ಕ್ರಿಕೆಟ್ ದೇವರು ಎಂದು ಬಣ್ಣಿಸಲಾಗುತ್ತದೆ. ಹೌದು, ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇದೀಗ ಯೂಗೊವ್ ಎನ್ನುವ ಸಂಸ್ಥೆಯೊಂದು 2021ನೇ ಸಾಲಿನ ಜಗತ್ತಿನ ಅತ್ಯಂತ ಅಚ್ಚುಮೆಚ್ಚಿನ ಟಾಪ್ 20 ವ್ಯಕ್ತಿಗಳನ್ನು (World's Most Admired List 2021) ಪಟ್ಟಿ ಮಾಡಿದೆ. ಈ ಪೈಕಿ ಕ್ರೀಡಾಪಟುಗಳ ವಿಭಾಗದಲ್ಲಿ ಸಚಿನ್ ತೆಂಡುಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
17
World's Most Admired List: ಜಗತ್ತಿನ ಅಚ್ಚುಮೆಚ್ಚಿನ ಕ್ರೀಡಾಪಟುಗಳಲ್ಲಿ ತೆಂಡುಲ್ಕರ್‌ಗೆ ಮೂರನೇ ಸ್ಥಾನ

ಇಡೀ ಕ್ರಿಕೆಟ್ ಜಗತ್ತು ಆರಾಧಿಸುವ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, 2021ನೇ ಸಾಲಿನ ಜಗತ್ತಿನ ಅತಿ ಅಚ್ಚುಮೆಚ್ಚಿನ ಕ್ರಿಕೆಟಿಗ ಎನ್ನುವ ಕೀರ್ತಿಗೆ ಮುಂಬೈಕರ್ ಭಾಜನರಾಗಿದ್ದಾರೆ.

27

ಯೂಗೋವ್ ಎನ್ನುವ ಅಂತರ್ಜಾಲ ಆಧಾರಿತ ಮಾರ್ಕೆಟ್ ರಿಸರ್ಚ್‌ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆಯು 42 ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಿ ಈ ಪಟ್ಟಿ ಮಾಡಿದ್ದು, ಜಗತ್ತಿನ ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ 12ನೇ ಸ್ಥಾನ ಪಡೆದಿದ್ದಾರೆ.

37

ಇನ್ನು ಕ್ರೀಡಾಪಟುಗಳ ಪೈಕಿ ಫುಟ್ಬಾಲ್ ದಿಗ್ಗಜರಾದ ಪೂರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಅರ್ಜಿಂಟೀನಾದ ಲಿಯೋನೆಲ್‌ ಮೆಸ್ಸಿ ಮೊದಲೆರಡು ಸ್ಥಾನದಲ್ಲಿದ್ದು, ಸಚಿನ್‌ ತೆಂಡುಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.
 

47

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ತೆಂಡುಲ್ಕರ್, 2013ರಿಂದ ಯುನಿಸೆಫ್‌ನಲ್ಲಿ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಕ್ರೀಡೆಯ ಕುರಿತಂತೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
 

57

ಇನ್ನು ಜಗತ್ತಿನ ಟಾಪ್ 10 ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೊದಲ ಸ್ಥಾನದಲ್ಲಿದ್ದಾರೆ. ಇದಾದ ಬಳಿಕ ಖ್ಯಾತ ಉಧ್ಯಮಿ ಬಿಲ್‌ ಗೇಟ್ಸ್‌, ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್, ಕ್ರಿಸ್ಟಿಯಾನೋ ರೊನಾಲ್ಡೋ, ಜಾಕಿ ಚಾನ್ ಮೊದಲ ಐದು ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ.

67

ಇನ್ನುಳಿದಂತೆ ಎಲಾನ್ ಮಸ್ಕ್‌, ಲಿಯೋನೆಲ್ ಮೆಸ್ಸಿ ಬಳಿಕ ಭಾರತ ಪ್ರಧಾನಿ ನರೇಂದ್ರ ಮೋದಿ ಎಂಟನೇ ಸ್ಥಾನ ಪಡೆದಿದ್ದಾರೆ. ಇದಾದ ಬಳಿಕ ವ್ಲಾಡಿಮಿರ್ ಪುಟಿನ್ ಹಾಗೂ ಜಾಕ್ ಮಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ.
 

77

ಇನ್ನು ಸಚಿನ್ ತೆಂಡುಲ್ಕರ್(12) ಬಾಲಿವುಡ್ ನಟ ಶಾರುಕ್ ಖಾನ್(14), ಅಮಿತಾಬ್ ಬಚ್ಚನ್(15), ವಿರಾಟ್ ಕೊಹ್ಲಿ(18) ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಇತರೇ ಭಾರತೀಯರೆನಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕ ಚೋಪ್ರಾ(10), ಐಶ್ವರ್ಯ ರೈ ಬಚ್ಚನ್(13), ಸುಧಾಮೂರ್ತಿ(14) ಕೂಡಾ ಸ್ಥಾನ ಪಡೆದಿದ್ದಾರೆ.
 

Read more Photos on
click me!

Recommended Stories