ವಿರಾಟ್ ಕೊಹ್ಲಿ ನಂ.18 ಜೆರ್ಸಿ ತೊಟ್ಟು ಕಣಕ್ಕಿಳಿದ ರಿಷಭ್ ಪಂತ್! ಹೊಸ ಚರ್ಚೆ ಬೆನ್ನಲ್ಲೇ ಬಿಸಿಸಿಐ ಸ್ಪಷ್ಟನೆ

Published : Nov 01, 2025, 11:34 AM IST

ಗಾಯದಿಂದ ಚೇತರಿಸಿಕೊಂಡ ರಿಷಭ್ ಪಂತ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಇಂಡಿಯಾ ಎ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 18ನೇ ನಂಬರ್ ಜೆರ್ಸಿ ಧರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.  

PREV
15
ಪಂತ್ ಈಸ್ ಬ್ಯಾಕ್

ಗಾಯಗೊಂಡಿದ್ದ ರಿಷಭ್ ಪಂತ್ ಸುಮಾರು ಮೂರು ತಿಂಗಳ ವಿರಾಮದ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಪಂದ್ಯದ ಮೂಲಕ ಪಂತ್ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ, ಈ ಪಂದ್ಯದಲ್ಲಿ ಪಂತ್ ವಿಶೇಷ ಜೆರ್ಸಿ ಧರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಂತ್, ವಿರಾಟ್ ಕೊಹ್ಲಿಯ 18ನೇ ನಂಬರ್ ಜೆರ್ಸಿ ಧರಿಸಿದ್ದರು.

25
ಟೆಸ್ಟ್‌ಗೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರ 18ನೇ ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸಬೇಕೆಂದು ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡಿದ್ದರು. ಧೋನಿಯ 7 ಮತ್ತು ಸಚಿನ್‌ರ 10ನೇ ನಂಬರ್ ಜೆರ್ಸಿಯಂತೆ ಕೊಹ್ಲಿ ಜೆರ್ಸಿಗೂ ಗೌರವ ನೀಡಬೇಕೆಂದು ಕೇಳಿದ್ದರು. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಆ ಜೆರ್ಸಿ ನಂಬರ್ ಬಳಕೆಯಲ್ಲಿದೆ.

35
ಮುಕೇಶ್ ಕುಮಾರ್ ಕೂಡಾ 18 ನಂಬರ್ ಜೆರ್ಸಿ ಧರಿಸಿದ್ದರು

ಈ ಹಿಂದೆ ವೇಗದ ಬೌಲರ್ ಮುಕೇಶ್ ಕುಮಾರ್ ಕೂಡ ಇಂಡಿಯಾ ಎ ಪರ 18ನೇ ನಂಬರ್ ಜೆರ್ಸಿ ಧರಿಸಿದಾಗ ವಿವಾದವಾಗಿತ್ತು. ಇದು ಕೊಹ್ಲಿಗೆ ಮಾಡಿದ ಅವಮಾನ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರಿಷಭ್ ಪಂತ್ ಅದೇ ಜೆರ್ಸಿ ಧರಿಸಿದ್ದರಿಂದ ಮತ್ತೆ ಚರ್ಚೆ ಶುರುವಾಗಿದೆ.

45
ಬಿಸಿಸಿಐ ಸ್ಪಷ್ಟನೆ

ಈ ವಿವಾದದ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಇಂಡಿಯಾ ಎ ಪಂದ್ಯಗಳಲ್ಲಿ ಆಟಗಾರರು ಯಾವುದೇ ನಂಬರ್ ಆಯ್ಕೆ ಮಾಡಿಕೊಳ್ಳಬಹುದು. ಈ ಜೆರ್ಸಿಗಳ ಮೇಲೆ ಆಟಗಾರರ ಹೆಸರು ಇರುವುದಿಲ್ಲ. ಹಾಗಾಗಿ ನಂಬರ್‌ಗಳು ಕೂಡ ನಿಗದಿಯಾಗಿರುವುದಿಲ್ಲ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಆಟಗಾರರ ಜೆರ್ಸಿ ನಂಬರ್ ಶಾಶ್ವತವಾಗಿರುತ್ತದೆ. ಪಂತ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ 17ನೇ ನಂಬರ್ ಜೆರ್ಸಿಯನ್ನೇ ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

55
ಭಾರತದ ಪಾಲಿಗೆ ಗುಡ್ ನ್ಯೂಸ್

ಜೆರ್ಸಿ ವಿವಾದವನ್ನು ಬದಿಗಿಟ್ಟರೆ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ರಿಷಭ್ ಪಂತ್ ಮತ್ತೆ ಕ್ರಿಕೆಟ್‌ಗೆ ಮರಳಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಅವರ ಪುನರಾಗಮನ ತಂಡಕ್ಕೆ ಬಲ ನೀಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Read more Photos on
click me!

Recommended Stories