ಜೆಮಿಮಾ ರೋಡ್ರಿಗ್ಸ್ ಬ್ಯಾಕ್‌ಗ್ರೌಂಡ್; ಈಕೆ ನಮ್ಮ ಮಂಗಳೂರಿನ ಹುಡುಗಿ!

Published : Nov 01, 2025, 09:46 AM IST

ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಗೆಲುವಿನ ನಂತರ ಜೆಮಿಮಾ ರೋಡ್ರಿಗ್ಸ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಅವರ ಆಟಕ್ಕೆ ಫಿದಾ ಆದ ಅಭಿಮಾನಿಗಳು, ಈ ಮಟ್ಟಕ್ಕೆ ಬೆಳೆದದ್ದು ಹೇಗೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

PREV
15
ಶತಕ ಸಿಡಿಸಿ ಮಿಂಚಿದ ಜೆಮಿಮಾ

ICC ವಿಶ್ವಕಪ್ 2025: ತವರಿನಲ್ಲಿ ನಡೆಯುತ್ತಿರುವ ICC ಮಹಿಳಾ ವಿಶ್ವಕಪ್ 2025ರ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಅದ್ಭುತ  ಗೆಲುವು ಸಾಧಿಸಿದೆ.

25
ಜಮಿಮಾ ಹಿನ್ನೆಲೆ ಏನು?

ಜೆಮಿಮಾ ರೋಡ್ರಿಗ್ಸ್ ಮಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಇವಾನ್ ರೋಡ್ರಿಗ್ಸ್ ಅವರ ಮೊದಲ ಗುರು ಮತ್ತು ಕೋಚ್ ಆಗಿದ್ದರು, ಅವರೇ ಮಗಳನ್ನು ಕ್ರೀಡೆಯತ್ತ ಗಮನ ಹರಿಸಲು ಪ್ರೋತ್ಸಾಹಿಸಿದರು.

35
ಕ್ರೀಡೆಯಲ್ಲಿ ಮುಂದುವರೆಯಲು ಮುಂಬೈಗೆ ಶಿಫ್ಟ್

ಮಕ್ಕಳಿಗೆ ಉತ್ತಮ ಕ್ರೀಡಾ ಸೌಲಭ್ಯ  ಒದಗಿಸಲು, ಜೆಮಿಮಾ ಕುಟುಂಬವು ಮುಂಬೈನ ಬಾಂದ್ರಾಗೆ ಸ್ಥಳಾಂತರಗೊಂಡಿತು. ಅವರ ತಂದೆ ಶಾಲೆಯಲ್ಲಿ ಕೋಚ್ ಆಗಿದ್ದರು.

45
ತಂದೆಯೇ ಮೊದಲ ಗುರು

ಸರಿಯಾದ ಮೈದಾನಗಳು ಲಭ್ಯವಿಲ್ಲದಿದ್ದಾಗ, ತಂದೆ ಇವಾನ್ ಫುಟ್‌ಪಾತ್‌ನಲ್ಲೇ ಜೆಮಿಮಾಗೆ ತರಬೇತಿ ನೀಡುತ್ತಿದ್ದರು. ಮನೆಯ ಗೋಡೆಗಳ ಮೇಲೆ  ಪ್ಲಾಸ್ಟಿಕ್ ಬಾಲ್‌ನಿಂದ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿಸುತ್ತಿದ್ದರು.

55
ಮಗಳಿಗಾಗಿ ತಂದೆಯ ಕಠಿಣ ಶ್ರಮ

ಜೆಮಿಮಾ ಬ್ಯಾಟಿಂಗ್ ಮಾಡುವಾಗ ತಂದೆ ಇವಾನ್ ಪ್ರತಿದಿನ 300 ಬಾಲ್‌ಗಳನ್ನು ಎಸೆಯುತ್ತಿದ್ದರು. ಇದರಿಂದ ಅವರ ಕೈ ನೋವು ಬರುತ್ತಿತ್ತು, ಆದರೆ ಅವರು ಅದನ್ನು ಮಗಳಿಗೆ ಎಂದಿಗೂ ಹೇಳಲಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories