ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾದ ಹಿಂದಿನ ರಹಸ್ಯ ಬಯಲಾಗಿದೆ.ಬಿಸಿಸಿಐ ಆಯ್ಕೆ ಸಮಿತಿ ಜೊತೆಗಿನ ಮಾತುಕತೆಯೂ ಬಹಿರಂಗವಾಗಿದೆ. ಸೂರ್ಯಕುಮಾರ್ ಯಾದವ್ ಬದಲು ಅಯ್ಯರ್‌ಗೆ ನಾಯಕತ್ವ ಸಿಕ್ಕಿದ ಕಹಾನಿ.
ಟೀಂ ಇಂಡಿಯಾ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಗೆ ಪರ ವಿರೋಧಗಳಿವೆ.ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಿ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿದೆ. ಅಯ್ಯರ್ ನಾಯಕತ್ವ ಹಿಂದೆ ಆಸ್ಟ್ರೇಲಿಯಾ ದಿಗ್ಗದ ರಿಕಿ ಪಾಂಟಿಂಗ್ ಕೈವಾಡವಿತ್ತಾ? ಆಯ್ಕೆ ಸಮಿತಿ ಜೊತೆಗಿನ ಮಾತುಕತೆ ಇದೀಗ ಬಯಲಾಗಿದೆ.
26
ಅಯ್ಯರ್ ಹೆಸರು ಶಿಫಾರಸು ಮಾಡಿದ್ದೆ
ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ ಅಯ್ಯರ್ ನಾಯಕನಾಗಿ ಬಡ್ತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ನಾನೇ ಖುದ್ದಾಗಿ ಬಿಸಿಸಿಐ ಆಯ್ಕೆ ಸಮಿತಿಗೆ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲು ಸೂಚಿಸಿದ್ದೆ. ಶ್ರೇಯಸ್ ಅಯ್ಯರ್ ಹೆಸರನ್ನು ನಾಯಕತ್ವಕ್ಕಾಗಿ ಶಿಫಾರಸ್ಸು ಮಾಡಿದ್ದೆ ಎಂದು ಸ್ವತಃ ರಿಕಿ ಪಾಂಟಿಂಗ್ ಹೇಳಿದ್ದಾರೆ.
36
ಅಯ್ಯರ್ ನಾಯಕನಾಗಿರುವುದು ಖುಷಿ ನೀಡಿದೆ
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ಶ್ರೇಯಸ್ ಅಯ್ಯರ್ ಜೊತೆ ರಿಕಿ ಪಾಂಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಉತ್ತಮ ನಾಯಕ, ಎಲ್ಲಾ ಲೀಡರ್‌ಶಿಪ್ ಗುಣ ಅಯ್ಯರ್‌ಗಿದೆ. ನಾನು ಈ ಹಿಂದೆಯೇ ಅಯ್ಯರ್‌ಗೆ ನಾಯಕತ್ವ ನೀಡಬೇಕು ಎಂದು ಹೇಳಿದ್ದೆ. ಈಗ ಸಾಧ್ಯವಾಗಿದೆ. ಇದರಿಂದ ನಾನು ಹೆಚ್ಚು ಖುಷಿಯಾಗಿದ್ದೇನೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಆಯ್ಕೆ ಸಮಿತಿ ಜೊತೆಗಿನ ಮಾತುಕತೆಯಲ್ಲಿ ನಾನು ಆತ್ಮವಿಶ್ವಾಸದಿಂದ ಹೇಳಿದ್ದೆ. ಶ್ರೇಯಸ್ ಅಯ್ಯರ್‌ಗೆ ಒಂದು ಬಾರಿ ನಾಯಕತ್ವ ನೀಡಿ. ಆತ ಯಾವತ್ತೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದಿದ್ದೆ. ನಾಯಕತ್ವ ಜೊತೆಗೆ ಆಯ್ಯರ್ ತಮ್ಮ ಬ್ಯಾಟಿಂಗ್ ಕೂಡ ಬದಲಾಯಿಸಿದ್ದಾರೆ. ಇದು ಟೀಂ ಇಂಡಿಯಾಗೆ ನೆರವಾಗಲಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
56
ಪಾಂಟಿಂಗ್ ಭವಿಷ್ಯ
ಟೀಂ ಇಂಡಿಯಾದಲ್ಲಿ ಉತ್ತಮ ಆಟಗಾರರಿದ್ದಾರೆ. ಈ ಬಲಿಷ್ಠ ತಂಡಕ್ಕೆ ಶ್ರೇಯಸ್ ಆಯ್ಯರ್ ನಾಯಕನಾಗಿರುವುದು ಅಯ್ಯರ್ ಪ್ರತಿಭೆ ಹಾಗೂ ನಾಯಕತ್ವ ಗುಣಕ್ಕೆ ಸಿಕ್ಕ ಗೌರವ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಉತ್ತಮವಾಗಿ ಮುನ್ನಡೆಸಲಿದ್ದಾರೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ
66
ಸವಾಲು ನಿಭಾಯಿಸುತ್ತಾರೆ ಅಯ್ಯರ್
ಟೀಂ ಇಂಡಿಯಾದ ನಾಯಕತ್ವ ವಹಿಸುವುದು ಸುಲಭದ ಮಾತಲ್ಲ. ಸ್ಟಾರ್ ಆಟಾಗರರು, ಪ್ರತಿಭಾನ್ವಿತ ಆಟಾಗರರ ದೊಡ್ಡ ದಂಡೇ ಇದೆ. ಎಲ್ಲರನ್ನು ಒಗ್ಗೂಡಿಸಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವುದು ಸವಾಲು. ಈ ಸವಾಲನ್ನು ಶ್ರೇಯಸ್ ಅಯ್ಯರ್ ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.