ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಕ್ರಿಕೆಟಿಗ. ವಿಶೇಷ ಅಂದರೆ ವೈಭವ್ ಸೂರ್ಯವಂಶಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿ. ಈ ಮಾತನ್ನು ಸ್ವತಃ ವೈಭವ್ ಸೂರ್ಯವಂಶಿ ಹೇಳಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದಂತೆ ವೈಭವ್ ಅದೇ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ನಡೆಸಿದ ಸಂದರ್ಶನದಲ್ಲಿ ವೈಭವ್ ಸೂರ್ಯವಂಶಿ ಹೇಳಿದ ಮಾತು ಇದೀಗ ಭಾರಿ ಸದ್ದು ಮಾಡುತ್ತಿದೆ. ವೈಭವ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರೂ ಆರ್‌ಸಿಬಿ ಹಾಗೂ ಕೊಹ್ಲಿ ಅಭಿಮಾನಿ ಎಂದಿದ್ದಾರೆ.
26
ಮನಬಿಚ್ಚಿ ಮಾತನಾಡಿದ ವೈಭವ್ ಸೂರ್ಯವಂಶಿ
ರಾಜಸ್ಥಾನ ರಾಯಲ್ಸ್ ತಂಡ ವೈಭವ್ ಸೂರ್ಯವಂಶಿ ಜೊತೆ ಸಂದರ್ಶನ ಮಾಡಿದೆ. ಐಪಿಎಲ್ ಪಯಣ, ಕ್ರಿಕೆಟರ್ ಕರಿಯರ್ ಕುರಿತು 15ರ ಹುಡುಗ ವೈಭವ್ ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಕ್ರಿಕೆಟಿಗರ ಜೊತೆಗಿನ ಭೇಟಿ, ಸಲಹೆಗೆ ನೀಡಿದ್ದಾರೆ. ಈ ಕುರಿತು ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
36
ಸತ್ಯ ಹೇಳುತ್ತೇನೆ ನಾನು ಆರ್‌ಸಿಬಿ ಬಿಗ್ ಫ್ಯಾನ್
ನಿಜ ಹೇಳುತ್ತೇನೆ, ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬರುವ ಮೊದಲು ಆರ್‌ಸಿಬಿ ತಂಡದ ಅತೀ ದೊಡ್ಡ ಅಭಿಮಾನಿ. ಕೊಹ್ಲಿ ಬಿಗ್ ಫ್ಯಾನ್ ನಾನು. ಕೊಹ್ಲಿ ಆಟವನ್ನು ನೋಡುತ್ತೇನೆ. ಕೊಹ್ಲಿಯಂತೆ ಪಂದ್ಯ ಫಿನೀಶ್ ಮಾಡಲು ಬಯಸುತ್ತೇನೆ. ಮೈದಾನದಲ್ಲಿ ಕೊಹ್ಲಿ ಬಂದು ಹೆಗಲ ಮೇಲೆ ಕೈಹಾಕಿ ಮಾತನಾಡಿದಾಗ ಇದು ನಿಜಕ್ಕೂ ಕೊಹ್ಲಿಯೇ ಎಂದು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ವೈಭವ್ ಹೇಳಿದ್ದಾರೆ.
ನನ್ನಂತೆ ಹಲವರು ಕೊಹ್ಲಿ ಅಭಿಮಾನಿ. ಅವರು ಬಂದು ಮಾತನಾಡಿಸಿದಾಗ ನನಗೆ ಸ್ಟಾರ್ ಕ್ರಿಕೆಟಿಗನ ರೀತಿ ಅಲ್ಲ, ನನ್ನ ಅಣ್ಣ ಬಂದು ಮಾತನಾಡಿಸುತ್ತಿದ್ದಾರೆ ಅನಿಸಿತು. ನನಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಮೈದಾನದಲ್ಲಿ ಕೊಹ್ಲಿ ಬಂದು ಮಾತನಾಡಿಸಿದ ಕ್ಷಣ ನನಗೆ ಮರೆಯಲು ಸಾಧ್ಯವಿಲ್ಲ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
56
ಕೊಹ್ಲಿ ಸಹಿ ಮಾಡಿ ಕ್ಯಾಪ್
ಈ ಆವೃತ್ತಿಯಲ್ಲಿ ಕೊಹ್ಲಿ ಸಹಿ ಮಾಡಿದ ಕ್ಯಾಪ್ ನಾನು ಧರಿಸುತ್ತಿದ್ದೆ. ಆರೇಂಜ್ ಕ್ಯಾಪ್ ಬೇರೆಯವರಿಗೆ ಹೋದಾಗ ನಾನು ಕೊಹ್ಲಿ ಸಹಿ ಮಾಡಿದ ಕ್ಯಾಪ್ ಧರಿಸುತ್ತಿದ್ದೆ. ಇವೆಲ್ಲಾ ನನ್ನ ಪಾಲಿಗೆ ಅತ್ಯುತ್ತಮ ಹಾಗೂ ಅತ್ಯಂತ ಸ್ಮರಣೀಯ ಕ್ಷಣಗಳು. ಕ್ರಿಕೆಟ್ ಆರಂಭಿಕ ದಿನಗಳಲ್ಲೇ ನನಗೆ ಉತ್ತಮ ಮಾರ್ಗದರ್ಶನ ಸಿಕ್ಕಿದೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
66
ಐಸಿಸಿ ಚೇರ್ಮೆನ್ ಮಾತು ನೆನೆಪಿಸಿದ ವೈಭವ್
ಫೈನಲ್ ಪಂದ್ಯದ ವೇಳೆ ಐಸಿಸಿ ಚೇರ್ಮನ್ ಜಯ್ ಶಾ ಜೊತೆ ಕುಳಿತು ಪಂದ್ಯ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಆಟದ ಬಗ್ಗೆ ಗಮನಕೇಂದ್ರೀಕರಿಸಲು ಸೂಚಿಸಿದ್ದರು. ಉತ್ತಮ ಭವಿಷ್ಯವಿದೆ. ಹೀಗಾಗಿ ಕ್ರಿಕೆಟ್ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಶ್ರದ್ಧೆ, ಶಿಸ್ತು ಅತ್ಯಗತ್ಯ. ಈ ಎಲ್ಲಾ ಗುಣಗಳು ನಿಮ್ಮಲ್ಲಿದೆ ಎಂದು ಜಯ್ ಶಾ ಹೇಳಿದ್ದರು ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.