ಪ್ಲೇ ಆಫ್ ಹಂತಕ್ಕೇರಲು ಸಜ್ಜಾಗಿರುವ ಆರ್‌ಸಿಬಿಗೆ ಶಾಕ್, ತವರಿನ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ ಅಲಭ್ಯ

Published : May 16, 2025, 07:25 PM IST

ಐಪಿಎಲ್ ಪುನರ್ ಆರಂಭದ ಪಂದ್ಯದಲ್ಲೇ ಪ್ಲೇ ಆಫ್ ಹಂತಕ್ಕೇರಲು ಆರ್‌ಸಿಬಿ ಸಜ್ಜಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಕೆಕೆಆರ್ ವಿರುದ್ದ ಪಂದ್ಯ ಆರ್‌ಸಿಬಿ ಪಾಲಿಗೆ ಮಹತ್ವದ್ದಾಗಿದೆ. ಆದರೆ ಕೆಕೆಆರ್ ವಿರುದ್ಧ ಪಂದ್ಯಕ್ಕೆ ಆರ್‌ಸಿಬಿ ಪ್ರಮುಖ ಆಟಗಾರ ಅಲಭ್ಯರಾಗಿದ್ದಾರೆ. ಇದು ತವರಿನ ಪಂದ್ಯಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ.

PREV
15
ಪ್ಲೇ ಆಫ್ ಹಂತಕ್ಕೇರಲು ಸಜ್ಜಾಗಿರುವ ಆರ್‌ಸಿಬಿಗೆ ಶಾಕ್, ತವರಿನ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ ಅಲಭ್ಯ

ಐಪಿಎಲ್ 2025 ಕೆಲ ದಿನಗಳ ಮುಂದೂಡಿಕೆ ಬಳಿಕ ಮತ್ತೆ ಆರಂಭಗೊಳ್ಳುತ್ತಿದೆ. ಒಂದೆಡೆ ಐಪಿಎಲ್ ಪುನರ್ ಆರಂಭದ ಸಂಭ್ರಮ, ಮತ್ತೊಂದೆಡೆ ಆರ್‌ಸಿಬಿಗೆ ಪ್ಲೇ ಆಫ್ ಹಂತಕ್ಕೇರುವ ಅವಕಾಶ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಮುತ್ತ ಅಭಿಮಾನಿಗಳ ಕಲವರ ಕಾಣಸಿಗುತ್ತಿದೆ. ಮೇ.17ರ ಸಂಜೆ 7.30ಕ್ಕೆ ಆರ್‌ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗುತ್ತಿದೆ. ಆರ್‌ಸಿಬಿಗೆ ಪ್ಲೇ ಆಫ್ ತವಕವಾಗಿದ್ದರೆ, ಕೆಕೆಆರ್‌ಗೆ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಇದರ ನಡುವೆ ಆರ್‌ಸಿಬಿಗೆ ಶಾಕ್ ಎದುರಾಗಿದೆ.

25

ಆರ್‌ಸಿಬಿ ಪ್ಲೇಯರ್ ಅಲಭ್ಯ
ಕೆಕೆಆರ್ ವಿರುದ್ಧದ ಮೇ.17ರ ಪಂದ್ಯಕ್ಕೆ ಆರ್‌ಸಿಬಿ ಸ್ಟಾರ್ ಪ್ಲೇಯರ್ ಜೋಶ್ ಹೇಜಲ್‌ವುಡ್ ಅಲಭ್ಯರಾಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮೊದಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೋಬಟ್ ಈ ಮಾಹಿತಿ ಖಚಿತಪಡಿಸಿದ್ದಾರೆ. ಗಾಯಗೊಂಡಿರುವ ಜೋಶ್ ಹೇಜಲ್‌ವುಡ್ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

35

ಭುಜದ ನೋವಿನಿಂದ ಬಳಲುತ್ತಿರುವ ಜೋಶ್ ಹೇಜಲ್‌ವುಡ್ ಸದ್ಯ ಆಸ್ಟ್ರೇಲಿಯಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಕಾಲ ಜೋಶ್ ಹೇಜಲ್‌ವುಡ್ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆರ್‌ಸಿಬಿಯ ಇನ್ನುಳಿದ ಲೀಗ್ ಪಂದ್ಯಕ್ಕೆ ಜೋಶ್ ಹೇಜಲ್‌ವುಡ್ ಅಲಭ್ಯರಾಗಿದ್ದಾರೆ ಎಂದು ಆರ್‌ಸಿಬಿ ನಿರ್ದೇಶಕ ಹೇಳಿದ್ದಾರೆ.  ಆರ್‌ಸಿಬಿ ಪ್ಲೇಆಫ್ ಪಂದ್ಯಗಳಿಗೆ ಜೋಶ್ ಹೇಜಲ್‌ವುಡ್ ತಂಡ ಸೇರಿಕೊಳ್ಳುತ್ತಾರೆ ಎಂದು ನಿರ್ದೇಶಕ ಹೇಳಿದ್ದಾರೆ.

45

ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ
ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯಕ್ಕೆ ಒಂದೆಡೆ ಸ್ಟಾರ್ ಆಟಗಾರರ ಅಲಭ್ಯತೆ ಕಾಡುತ್ತಿದ್ದರೆ, ಮತ್ತೊಂದೆಡೆ ಮಳೆ ಭೀತಿ ಎದುರಾದಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮೇ.17ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಹೀಗಾದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆ ಇದೆ. 

55

ಆರ್‌ಸಿಬಿ ಈಗಾಲೇ 11 ಪಂದ್ಯದಿಂದ 16 ಅಂಕ ಸಂಪಾದಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 18 ಅಂಕ ಸಂಪಾದಿಸಲಿದೆ. ಹೀಗಾದಲ್ಲಿ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೇರಲಿದೆ. ಹೀಗಾಗಿ ಕೆಕೆಆರ್ ವಿರುದ್ಧ ಗೆಲುವಿಗಾಗಿ ಹೋರಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕ ಹೋರಾಟ ನಡೆಯಲಿದೆ.

Read more Photos on
click me!

Recommended Stories