ಭಾರತದಲ್ಲಿ ಸಿಗುವ ಲೈಫ್ ಕೊಹ್ಲಿಗೆ ಸಾಕಾಗಿದೆ, ಆರ್‌ಸಿಬಿ ಮಾಜಿ ಕ್ರಿಕೆಟಿಗನ ಸ್ಫೋಟಕ ಮಾತಿಗೆ ಫ್ಯಾನ್ಸ್ ಆತಂಕ

Published : Jun 05, 2026, 03:49 PM IST

ಭಾರತದಲ್ಲಿ ವಿರಾಟ್ ಕೊಹ್ಲಿಗೆ ಸಿಗುತ್ತಿರುವ ಲೈಫ್ ಬೇಡವಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ವಿರಾಟ್ ಕೊಹ್ಲಿ ಸಾರ್ವಜನಿಕ ನಿರೀಕ್ಷಣೆಯಲ್ಲಿರುತ್ತಾರೆ. ಲಂಡನ್‌ನಲ್ಲಿ ಪತ್ನಿ ಮಕ್ಕಳೊಂದಿಗೆ ಸೆಟ್ಲ್ ಆಗಿರುವ ಕೊಹ್ಲಿ ಕ್ರಿಕೆಟ್‌ಗಾಗಿ ಮಾತ್ರ ಭಾರತಕ್ಕೆ ಬರುತ್ತಾರೆ ಎಂದಿದ್ದಾರೆ.

PREV
16
ವಿರಾಟ್ ಕೊಹ್ಲಿ ಭಾರತದ ಲೈಫ್

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ. ಆರ್‌ಸಿಬಿ ಅಭಿಮಾನಿಗಳ ಆರಾಧ್ಯ ದೈವ. ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಆರ್‌ಸಿಬಿ 2ನೇ ಟ್ರೋಫಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದೀಗ ಆರ್‌ಸಿಬಿ ಮಾಜಿ ಕ್ರಿಕೆಟಿಗ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣಾಗಿದೆ. ಕೊಹ್ಲಿಗೆ ಭಾರತದಲ್ಲಿ ಸಿಗುವ ಲೈಫ್ ಬೇಡವಾಗಿದೆ ಎಂದಿದ್ದಾರೆ.

26
ಆರ್‌ಸಿಬಿ ಮಾಜಿ ಕ್ರಿಕೆಟಿಗನ ಹೇಳಿಕೆ

ಆರ್‌ಸಿಬಿ ಮಾಜಿ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟೋನ್ ಕೊಹ್ಲಿ ಕುರಿತ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಕೊಹ್ಲಿ ವಿಶ್ವದಲ್ಲೇ ಅತೀ ದೊಡ್ಡ ಸೆಲೆಬ್ರೆಟಿ. ಅದರಲ್ಲೂ ಭಾರತದಲ್ಲಿ ಕೊಹ್ಲಿ ಹೆಜ್ಜೆ ಹೆಜ್ಜೆಗೂ ಸಾರ್ವಜನಿಕರು ಹದ್ದಿನ ಕಣ್ಣಿಟ್ಟಿರುತ್ತಾರೆ.

36
ಲಂಡನ್‌ನಲ್ಲಿ ಕೊಹ್ಲಿ ಮುಂದುವರಿಯುತ್ತಾರೆ

ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ಬದುಕನ್ನು ಎಲ್ಲರಂತೆ ಕಳೆಯಲು ಇಷ್ಟಪಡುತ್ತಾರೆ. ಪ್ರತಿ ದಿನ ಲೈಮ್‌ಲೈಟ್‌ನಲ್ಲಿ ಇರಲು ಇಷ್ಟಪಡುವುದಿಲ್ಲ. ಕೊಹ್ಲಿ ಅತ್ಯಂತ ಸರಳ ವ್ಯಕ್ತಿ. ಹೀಗಾಗಿ ಅಭಿಮಾನಿಗಳು, ಜನರು ಅವರ ಮೇಲೆಟ್ಟಿರುವ ಗಮನದಿಂದ ದೂರ ಸರಿಯಲು ಕೊಹ್ಲಿ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಲಂಡನ್‌ನಲ್ಲಿ ನಲೆಸಿದ್ದಾರೆ. ಕೊಹ್ಲಿ ಲಂಡನ್‌ನಲ್ಲೇ ಮುಂದುವರಿಯುತ್ತಾರೆ. ಕ್ರಿಕೆಟ್ ಇದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ ಎಂದು ಲಿಯಾಮ್ ಹೇಳಿದ್ದಾರೆ.

46
ಕೊಹ್ಲಿ ತಂಟೆಗೆ ಹೋದರೆ ಪ್ರತ್ಯುತ್ತರ ನೀಡುತ್ತಾರೆ

ಮೈದಾನದಿಂದ ಹೊರಬಂದರೆ ಕೊಹ್ಲಿ ನಗುತ್ತಾ, ಖುಷಿಯಾಗಿರುತ್ತಾರೆ. ಅಗ್ರೆಸ್ಸೀವ್ ಆಗಲೇ ಮಾತಿನಲ್ಲಾಗಲಿ ಯಾವುದು ಇದು ಕೊಹ್ಲಿಯಾ ಎಂದು ನಾವು ಆಲೋಚಿಸುತ್ತೇವೆ. ಅಷ್ಟು ಮೃದವಾಗಿರುತ್ತಾರೆ. ಆದರೆ ಫೀಲ್ಡ್‌ಗೆ ಇಳಿದರೆ ಕೊಹ್ಲಿಗೆ ಸರಿಸಾಟಿ ಯಾರು ಇಲ್ಲ. ಅವರ ತಂಟೆಗೆ ಹೋದರೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ.

56
ಪ್ರತಿ ದಿನ ಅಭ್ಯಾಸ

ಕೊಹ್ಲಿ ಪ್ರತಿ ಪಂದ್ಯದಲ್ಲಿ ಉತ್ತಮವಾಗಿ ಆಡಲು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಾರೆ.ಪ್ರತಿ ದಿನ ಅಭ್ಯಾಸ ಮಾಡುತ್ತಾರೆ. ಒಬ್ಬ ಯುವ ಹಾಗೂ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕ್ರಿಕೆಟಿಗನ ರೀತಿ ಕೊಹ್ಲಿ ಪ್ರತಿ ದಿನ ಕಲಿಯುತ್ತಾರೆ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಹೇಳಿದ್ದಾರೆ.

66
ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿ ಬದಲಿಸಿದ್ದ ಡೈರೆಕ್ಟರ್

ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಯಲ್ಲಿ ಡೈರೆಕ್ಟರ್ ಮೋ ಬೋಬಾಟ್ ಮತ್ತು ಮುಖ್ಯ ಕೋಚ್ ಆಂಡಿ ಫ್ಲವರ್ ಬದಲಾಯಿಸಿದ್ದರು. ಪವರ್ ಪ್ಲೇನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡುವಂತೆ ಪ್ರೇರೇಪಿಸಿದ್ದರು. ಇದಕ್ಕೆ ತಕ್ಕಂತೆ ಟೆಕ್ನಿಕ್ ಬದಲಿಸಿದ್ದರು. ಅಷ್ಟೇ ವೇಗವಾಗಿ ಕೊಹ್ಲಿ ಕಲಿತುಕೊಂಡು ಬ್ಯಾಟಿಂಗ್ ಬದಲಾಯಿಸಿದ್ದರು ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories